ಸಕಲ ಜೀವಿಗಳಿಗೂ ನೀರು ಅವಶ್ಯಕ
ಸಂಜೆವಾಣಿ ವಾರ್ತೆ
ಸಂಡೂರು: ಮಾ:29  ಕಲುಷಿತ ನೀರಿನಿಂದ ನಮ್ಮ ನೆಮ್ಮದಿ ಹಾಳಾಗಲು ಕಾರಣ ಸಮಾಜಕ್ಕೆ ಪರಿಸರಕ್ಕೂ ಬಗೆದ ದ್ರೋಹ, ನಮ್ಮ ಪರಿಸರ ರಕ್ಷಣೆ ಮಾಡದೇ ಹೋದರೆ ನಮ್ಮ ಮಕ್ಕಳು ನರಳಾಡುವಂತಾಗುವುದು ಸಹಜ 1993 ರಿಂದ ಜಗತ್ತಿನಾದ್ಯಂತ ವಿಶ್ವ ಜಲದಿನಾಚರಣೆ ಆಚರಸಲು ಸಾಧ್ಯ, ಕಾರಣ ವೈರ್ಥ ನೀರಿನಿಂದ ಪರಿಸರ ಹಾಳಾಗಲು ಸಾಧ್ಯ, ಕೈಗಾರಿಕೆಯಿಂದ ಪರಿಸರ ಹಾಳಾಗಲು ಸಾಧ್ಯ, 1974 ರಿಂದ ಬಂದಂತಹ ಕಾನೂನು ಸುಧಾರಣೆಗೆ ಗಮನಕೊಡಬೇಕಾಗಿದೆ. ಸರ್ಕರದಿಂದ ಮಾತ್ರ ಪರಿಸರ ರಕ್ಷಣೆ ಸಾಧ್ಯವಿಲ್ಲ ಪ್ರತಿಯೋರ್ವರೂ ಪರಿಸರ ರಕ್ಷಣೆಗೆ ಮುಂದಾಗಬೇಕಾಗಿದೆ , ಕಲ್ಮಶ ನೀರನ್ನು ಸೇವಿಸಬೇಡಿ, ಶುದ್ದವಾದ ನೀರನ್ನು ನಮ್ಮ ಮೂಲಭೂತದ ಹಕ್ಕು, ಶುದ್ಧವಾದ ನೀರಿಗಾಗಿ ಹೋರಾಟ ಮಾಡಬೇಕಾಇಗದೆ ಎಂದು ನ್ಯಾಯಾಧೀಶರಾದ ದೇವಾರಡ್ಡಿ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಅವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿ.ಪಂ. ಗ್ರಾಮೀಣ ನೀರು ಸರಬರಾಜು ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮೀಣನೀರು ಸರಬರಾಜು ಇಲಾಖೆಯ ಎ.ಇ.ಇ. ವನಾಯಕ ಅವರು ಮಾತನಾಡಿ ಪ್ರತಿ ವರ್ಷ ಜಲ ದಿನಾಚರಣೆಯನ್ನು ಮಾಡಬೇಕಾದರೆ ಇಂದು ನಾವು ಜಲದ ಸಮಸ್ಯೆಯನ್ನು ಅನುಭವಿಸುತ್ತಿದ್ದೇವೆ, ಅಲ್ಲದೆ ನೀರಿಗಾಗಿ ಯುದ್ದಗಳು ಒಂದೊಂದು ರೀತಿಯಲ್ಲಿ ನಡೆಯಿತು, ನೀರಿಗಾಗಿ ಯುದ್ದ ಮಾಡುವಂತಹ ಅತಿ ಅವಶ್ಯಕತೆ ಇದೆ ಕಾರಣ ನೀರು ಕುಡಿಯಲು ಇಲ್ಲವಾದಂತಹ ಸ್ಥಿತಿ, ನಮ್ಮ ದೇಶಕ್ಕೂ ಮತ್ತು ಬೇರೆ ಕಡೆಗೂ ಅಜಗಜಾಂತರ ವ್ಯತ್ಯಾಸವಿದೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಡಿಜೆಲ್ ದುಡ್ಡು ಕೊಟ್ಟು ಹಾಕಿಸಿಕೊಂಡಂತೆ ನೀರನ್ನು ದುಡ್ಡು ಕೊಟ್ಟು ಕೊಳ್ಳುವ ವ್ಯವಸ್ಥೆ ಬರಬಾರದು, ಅದಕ್ಕೆ ಪರಿಸರ ರಕ್ಷಣೆ ಮುಖ್ಯ ಇಲ್ಲವಾದಲ್ಲಿ ಅದೆ ಪಾಠ ಕಲಿಸುತ್ತದೆ, ನಾವು ಸಣ್ಣವರಿದ್ದಾಗ ಶುದ್ಧ ಕುಡಿಯುವ ನೀರು ಕುಡಿಯುತ್ತಿರಲಿಲ್ಲ, ಬೋರ್‍ನೀರನ್ನು ಕುಡಿಯುವುದರಿಂದ ಅನೇಕ ಬದಲಾವಣೆಗಳಾಗಲು ಸಾಧ್ಯ, ಗ್ರಾಮೀಣ ಭಾಗದಲ್ಲಿ 55 ಲೀ ನೀರು ಪಟ್ಟಣದಲ್ಲಿ 130 ಲೀ ನೀರು ನೀಡಲು ಕೇಂದ್ರ ಸರ್ಕಾರ ಅದೇಶಿಸಿದೆ, ಜೀವ ಉಳಿಸುವ ಸಲುವಾಗಿ ನೀರಿನ ರಕ್ಷಣೆ ಮಾಡಬೇಕಾಗಿದೆ ವಾಷಿಂಗ್ ಮಿಷನ್ನಿಗೆ ಕ್ಯಾಪಾಸಿಟಿಗೆ ತಕ್ಕಂತೆ ಬಟ್ಟೆಗಳನ್ನು ಒಗೆಯಲು ಹಾಕಿ, ಇಂಡಿಯನ್ ಟಾಯಲೆಟ್ ಮತ್ತು ವೆಸ್ಟರ್ನ ಟಾಯಲೆಟ್ ಬಳಕೆಯಿಂದ ಅತಿಯಾದ ನೀರು ಪೋಲಾಗುತ್ತದೆ ಅದನ್ನು ತಡೆಯಬೇಕು, ನೀರನ್ನು ಉಳಿಸಿ ಪರಿಸರ ಸಮಮಟ್ಟದಲ್ಲಿ ಇಡಬೇಕಾಗಿದೆ. ನಮ್ಮ ಮನೆಯಲ್ಲಿರುವ ನೀರನ್ನು ಉಳಿಸುವ ಪ್ರಯತ್ನ ಮಾಡಬೇಕಾಗಿದೆ. ನೀರು ಮಾನವರೊಂದಿಗೆ ಅಲ್ಲ ಪ್ರಾಣಿ ಪಕ್ಷಿಗಳಿಗೂ ಅತಿ ಅವಶ್ಯಕ ಎಂದರು.
ವಕೀಲರಾದ ನಟರಾಜ ಶರ್ಮ ಮಾತನಾಡಿ ನೀರನ್ನು ಉಳಿಸಲು ಸರ್ವರೂ ಸಂಕಲ್ಪ ಮಾಡಬೇಕಾಗಿದೆ. 2024ರಲ್ಲಿ ಟ್ಯಾಂಕಿಗಾಗಿ ನೀರು ಅಜಂಡಾ ತಂದಿದ್ದಾರೆ, ವಾಹನಗಳ ಸಂಖ್ಯೆ ಹೆಚ್ಚಾಗಿ ಮರಗಳು ಚಿಗುರುತ್ತಿಲ್ಲ ಕೆರೆಗಳು ಬಾವಿಗಳುಬತ್ತಿವೆ, ಅಂತರ್ ಜಲ ಕುಸಿಯಲು ನೀರಿನ ಸದ್ಭಳಕೆಯಾಗುತ್ತಿಲ್ಲ ಕ್ಯಾಲ್ಸಿಯಂ 20 ಮಿನಿ. ಗ್ರಾಮ 260 ಮಿ.ಲಿ ಗ್ರಾಂ ಗೆ ಬಂದಿದೆ. ಉತ್ತಮ ನೀರಿನಿಂದ ನಮ್ಮ ಅರೋಗ್ಯ ಸರಿಯಾಗಿರಲು ಸಾಧ್ಯ, ಇಲ್ಲವಾದಲ್ಲಿ ಅರೋಗ್ಯ ಇಲ್ಲವಾಗುತ್ತದೆ ಎಂದರು.
ವಕೀಲರ ಸಂಘದ ಅಧ್ಕಕ್ಷ ಅರಳಿ ಮಲ್ಲಪ್ಪ ಮಾತನಾಡಿ ಇಂದು ನೀರು ನಮ್ಮ ಜೀವನದ ಅಮೂಲ್ಯವಾದ ಭಾಗ ಅದು ಇಲ್ಲವಾದಲ್ಲಿ ಜೀವವೇ ಇಲ್ಲ, ಅದ್ದರಿಂದ ಅದನ್ನು ರಕ್ಷಿಸಲು ಪ್ರತಿಯೊಬ್ಬರೂ ಸಹ ಕೈಜೋಡಿಸಬೇಕು, ಬೆಂಗಳೂರಿನಲ್ಲಿ ಈಗ ನೀರಿನ ಸಮಸ್ಯೆ ಉಂಟಾಗಿದೆ ಅದೇ ರೀತಿ ಪ್ರತಿ ನಗರಕ್ಕೂ ವ್ಯಾಪಿಸುತ್ತದೆ ಕಾರಣ ಮಳೆ ಕಡಿಮೆಯಾಗಿ ನೀರು ಇಲ್ಲವಾಗುತ್ತಿದೆ, ಮುಂದೊಂದು ದಿನ ಜಲಾಶಯದ ನೀರು ಬರೀ ಕುಡಿಯಲು ಬಳಸಬೇಕಾದ ಸ್ಥಿತಿ ಉಂಟಾಗಬಹುದು ಅದ್ದರಿಂದ ಪ್ರತಿಯೊಬ್ಬರೂ ಸಹ ಇಂಗು ಗುಂಡಿ ಬಳಸಬೇಕು ಬೋರ್‍ವೆಲ್ ನಿಲ್ಲಬೇಕು, ಮಳೆ ಕೋಯಲು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕೆ.ಅರ್. ದಾದಾಪೀರ್, ಕಾರ್ಯದರ್ಶಿ ಹೆಚ್.ಕುಮಾರಸ್ವಾಮಿ, ಮಂಕುನಾಥಗೌಡ, ಇಚಿಡಿ ಮಹಾರುದ್ರಪ್ಪ ಸ್ವಾಗತಿಸಿದರು, ಕುಮಾರಿ ಬಿ.ಕೆ. ಶೃತಿ ಪ್ರಾರ್ಥಿಸಿದರು, ಉಜ್ಜಿನಪ್ಪ ವಕೀಲರು ನಿರೂಪಿಸಿದರು, ವಕೀಲರಾದ ಹುಚ್ಚಪ್ಪ ವಮದಿಸಿದರು. ಸಮಾರಂಭದಲ್ಲಿ ಜಲಜೀವನ ಯೋಜನೆ ತಂಡದ ಸಂಯೋಜಕರು ಹೆಚ್. ಮಂಜುಳಾ, ತಂಡದ ನಾಯಕ ಕೊಟ್ರೇಸ್ ಎದುರುಮನೆ, ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿ ವೀರಭದ್ರಪ್ಪ ಇತರರು ಉಪಸ್ಥಿತರಿದ್ದರು.