ನಮಗೆ ಜನ್ಮ ನೀಡಿದ ತಾಯಿ ದಡವಿರದ ಕಡಲು ಇದ್ದಂತೆ
ಸಂಜೆವಾಣಿ ವಾರ್ತೆ
ಸಂಡೂರು: ಮಾ:29: ನಮಗೆ ಜನ್ಮ ನೀಡಿದ ತಾಯಿ ದಡವಿರದ ಮಮತೆಯ ಕಡಲು ಇದ್ದಂತೆ. ಇಂದಿಗೂ ಭಾರತೀಯ ತಾಯಿ ಗಂಡ ಮತ್ತು ಮಕ್ಕಳ ವಿರುದ್ಧ ಕೋರ್ಟಗಳಿಗೆ ಹೋಗುವುದಕ್ಕೆ ನಿರಾಕರಿಸುತ್ತಾರೆ. ಇಂಥಹ ಮಹಿಳೆಯರನ್ನ ಗೌರವಿಸುವ, ರಕ್ಷಣೆ ನೀಡುವ ಮತ್ತು ಪುರುಷ ಸಮಾನ ಸ್ಠಾನವನ್ನು ನೀಡುವ ಜವಾಬ್ದಾರಿ ಪ್ರತಿಯೊಬ್ಬ ಪುರುಷರ ಮೇಲೆ ಇದೆ ಎಂದು ಬಿಕೆಜಿ ಹಾಗೂ ಅರ್.ಪಿ.ಸಿ.ಎಲ್. ಕಂಪನಿಯ ನಿರ್ದೇಶಕರಾದ ಬಿ.ನಾಗನಗೌಡ ತಿಳಿಸಿದರು.
ಅವರು ಬಿಕೆಜಿ ಮತ್ತು ಆರ್.ಪಿ.ಸಿ.ಎಲ್. ಕಂಪನಿಗಳು ಸಂಯುಕ್ತವಾಗಿ ಬಿಕೆಜಿ ಕಛೇರಿಯ ಅವರಣದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ರಂಗದಲ್ಲಿ ಮಹಿಳೆಯ ಪಾತ್ರ ಅತಿ ದೊಡ್ಡದು ಅದನ್ನು ತಿಳಿಯುವಂತಹ ಕಾರ್ಯವನ್ನು ಮಾಡಬೇಕು, ಅಲ್ಲದೆ ಅವರಿಗೆ ಮುಕ್ತ ಅವಕಾಶ ನೀಡಿದಾಗ ಅಡುಗೆಯ ಮನೆಯ ಜೊತೆಗೆ ದೇಶವೂ ಸಹ ಪ್ರಗತಿಯಲ್ಲಿ ಸಾಗಲು ನಾಂದಿಯಾಗುತ್ತದೆ ಅದಕ್ಕೆ ಪ್ರತಿಯೊಬ್ಬ ಪುರುಷನ ಸಹಕಾರ, ಬೆಂಬಲ ಅತಿ ಅಗತ್ಯವಾಗಿ ಬೇಕು ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ತೋರಣಗಲ್ಲಿನ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢ ಶಾಲಾ ಶಿಕ್ಷಕಿಯಾದ ಡಾ. ಉಮಾ ಹೆಚ್.ಎಂ. ಅವರು ಮಾತನಾಡಿ ಮಹಿಳೆಗೆ ಎಲ್ಲಾ ರೀತಿಯ ಸ್ಥಾನವನ್ನು ನೀಡಿದ್ದಾರೆ ಅದು ಎಲ್ಲೋ ಒಂದು ಕಡೆ ಬರೀ ನೆಪಮಾತ್ರಕ್ಕೆ ಎನ್ನುವಂತಾಗುತ್ತಿದೆ ಅದರೆ ಅದು ನಿಜವಾದ ಸ್ಥಾನ ಪಡೆದುಕೊಂಡಾಗ ಮಹಿಳೆ ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತದೆ, ಸರ್ಕಾರಗಳು ಮಹಿಳೆಯರ ದೌರ್ಜನ್ಯ ನಿರ್ಮೂಲನೆಗಾಗಿ, ರಾಜಕೀಯದಲ್ಲಿ ಮೀಸಲಾತಿ, ಸಬಲೀಕರಣಕ್ಕಾಗಿ ಹಲವಾರು ಕಾನೂನು ಜಾರಿಗೆ ತಂದಿದೆ ಅದರೂ ಮಹಿಳೆಯ ಪ್ರಗತಿ ಅಗಿಲ್ಲ, ಮಹಿಳೆಯರ ಮೇಲಿನ ಅತ್ಯಚಾರ, ಹ್ಯಾಸಿಡ್ ದಾಳಿ, ದೈಹಿಕ ಹಿಂಸೆ ನಿಂತಿಲ್ಲ. ಇದಕ್ಕೆಲ್ಲ ಮದ್ದು ಎಂದರೆ ಮಹಿಳೆಯರು ಯಾವಾಗ ಅನ್ಯಾಯವಾಗುತ್ತದೆ ಅವಾಗಲೆ ತಮ್ಮ ಧ್ವನಿ ಎತ್ತುವುದರ ಮೂಲಕ ಪ್ರತಿಭಟನೆಯನ್ನು ಮಾಡಬೇಕು ಎಂದರು.
 ಪ್ರಸ್ತಾವಿಕವಾಗಿ ಕಂಪನಿಯ ಹೆಚ್.ಅರ್ ವಿಭಾಗದ ಜಿ.ಎಂ. ಅದ ರಾಜಶೇಖರ ಬೆಲ್ಲದ್ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ ಕಾರಣ ಅವರ ಶ್ರದ್ಧೆ ಮತ್ತು ಶ್ರಮ ಅದಕ್ಕೆ ಕಂಪನಿ ನಿರಂತರ ಬೆಂಬಲಿಸುತ್ತದೆ ಎಂದರು. ಬಿಕೆಜಿ ಕಂಪನಿಯ ಜನರಲ್ ಮ್ಯಾನೇಜರ್ ಪಿ. ಶ್ರೀನಿವಾಸ ಅವರು ಮಾತನಾಡಿ ನಾವು ಮನೆಗಳಲ್ಲಿ ಮಕ್ಕಳಲ್ಲಿ ಲಿಂಗ ಬೇದವನ್ನು ಮಾಡುತ್ತೇವೆ, ಅದನ್ನು ನಿಲ್ಲಿಸಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮನಾಗಿ ಪ್ರೀತಿಯನ್ನ ನೀಡಬೇಕು. ಇಂತಹ ಸಮಾರಂಭಗಳಲ್ಲಿ ಇನ್ನೂ ಹೆಚ್ಚು ಮಹಿಳೆಯರು ಭಾಗವಹಿಸಬೇಕು ಎಂದರು.
 ಮಹಿಳಾ ದಿನಾಚರಣೆಗೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡಾ. ಉಮಾ, ಪಿ.ಶ್ರೀನಿವಾಸರಾವ್ ಮತ್ತು ರಾಜಶೇಖರ್ ಬೆಲ್ಲದ್, ಪ್ರಮೋದ್ ರಿತ್ತಿ ಹಾಗೂ ನಾಗನಗೌಡರು ಮತ್ತು ಬಿ.ಕೆ ಬಸವರಾಜ ವಿತರಿಸಿದರು.
ಆರ್.ಪಿ.ಸಿ.ಲ್ ಪ್ಲಾಂಟ್‍ನ ಎಲ್ಕಟ್ರಿಕಲ್ ಮುಖ್ಯಸ್ಥರಾದ ದಾಮೋಧರ್, ಆರ್.ಪಿ.ಸಿ.ಎಲ್ ನ ವೈದ್ಯರಾದ ಡಾ. ವೈ ಸೀನಾ ರೆಡ್ಡಿ, ೀ ಪ್ರದೀಪ್ ,ಮ್ಯಾನೇಜರ್, ಮತ್ತು ಬಿಕೆಜಿ ಮತ್ತು ಆರ್.ಪಿ.ಸಿ.ಎಲ್. ಕ0ಪನಿಯ ಉದ್ಯೋಗಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಿಕೆಜಿ ಮತ್ತು ಆರ್.ಪಿ.ಸಿ.ಎಲ್ ಕಂಪನಿಗಳ ಮಹಿಳಾ ಉದ್ಯೋಗಿಗಳು ಕಿರು ನಾಟಕ ಮತ್ತು ಕೋಲಾಟದ ನೃತ್ಯವನ್ನು ಅತ್ಯಂತ ಸುಂದರವಾಗಿ ನಡೆಸಿಕೊಟ್ಟರು. ಸಮಾರ0ಭವನ್ನು ಕುಮಾರಿ ಶೈಲಾಜ ಅವರು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು.