ಇಂಡಿ ಭದ್ರತಾ ಕೊಠಡಿ , ಅಗರಖೇಡ, ಹಿಂಗಣಿ ಹಾಗೂ ದೇವಣಗಾಂವಚೆಕ್‍ಪೋಸ್ಟ್‍ಗಳಿಗೆ ಡಿಸಿ ಭೇಟಿ, ಪರಿಶೀಲನೆ
ವಿಜಯಪುರ, ಮಾ.29: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಗುರುವಾರ ಇಂಡಿ ತಾಲೂಕಿನ ಅಗರಖೇಡ ಹತ್ತಿರದ ಚಿಕ್ಕಮಣೂರು ಕ್ರಾಸ್ ಹಾಗೂ ಹಿಂಗಣಿ ಬಳಿ ನಿರ್ಮಿಸಲಾಗಿರುವ ಚೆಕ್ ಪೆÇೀಸ್ಟ್ ಮತ್ತು ಇಂಡಿ ಪಟ್ಟಣದಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿರುವ ಇವಿಎಂ ಭದ್ರತೆಯನ್ನು ಕೂಲಂಕುಶವಾಗಿ ಪರಿಶೀಲಿಸಿದರು. ಚೆಕ್‍ಪೆÇೀಸ್ಟ್‍ಗಳಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯ ಹಾಜರಾತಿ, ಶಾಮಿಯಾನ, ಕುಡಿಯುವ ನೀರು ಸೇರಿದಂತೆ ಚೆಕ್ ಪೆÇೀಸ್ಟ್ ಗಳ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು.
ಚೆಕ್‍ಪೋಸ್ಟ್‍ಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಚೆಕ್‍ಪೆÇೀಸ್ಟ್‍ಗಳಿಗೆ ನಿಯೋಜನೆಗೊಂಡ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾದ ಸಮಯಕ್ಕೆ ಪಾಳಿ ಅನುಸಾರ ಹಾಜರಾಗಿ ಕಾರ್ಯ ನಿರ್ವಹಿಸಬೇಕು. ಪ್ರತಿಯೊಂದು ವಾಹನವನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ದೇವಣಗಾಂವ ಬಳಿ ನಿರ್ಮಿಸಲಾಗಿರುವ ಅಂತರ ಜಿಲ್ಲಾ ಚೆಕ್ ಪೆÇೀಸ್ಟ್ ಗೆ ಡಿಸಿ ಹಾಗೂ ಎಸ್ಪಿ ಗುರುವಾರ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾ ಪೆÇಲೀಸ್ ವರಿಷ್ಠ್ಠಾಧಿಕಾರಿ ಋಷಿಕೇಶ ಸೋನಾವಣೆ, ಅನುಮಾನಾಸ್ಪದ ವಾಹನಗಳು ಅಥವಾ, ವ್ಯಕ್ತಿ ಕಂಡು ಬಂದರೆ ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕು. ಅಕ್ರಮವಾಗಿ ಹಣ ಹಾಗೂ ಮದ್ಯ ಸಾಗಾಟ ಮಾಡುತ್ತಿರುವುದು ಕಂಡು ಬಂದಲ್ಲಿ, ತಕ್ಷಣವೇ ಕಾರ್ಯಪ್ರವೃತ್ತರಾಗಿ, ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಲ್ಲಿ ತಿಳಿಸಿದ್ದಾರೆ.