ಕಾಪಸೆ ನಿಧನಕ್ಕೆ ಹಲಸಂಗಿ ಗೆಳೆಯರ ಪ್ರತಿಷ್ಠಾನ ಕಂಬನಿ
ವಿಜಯಪುರ,ಮಾ.29:ನಾಡು ಕಂಡ ಅಪರೂಪದ ಸಾಹಿತಿ ಡಾ. ಗುರುಲಿಂಗ ಕಾಪಸೆ ಅವರ ನಿಧನಕ್ಕೆ ಹಲಸಂಗಿ ಗೆಳೆಯರ ಪ್ರತಿಷ್ಠಾನ ಸಂತಾಪ ಸೂಚಿಸಿದೆ.
ಕಾಪಸೆ ಅವರು ಅಪಾರ ಶಿಷ್ಯರನ್ನು ಬಿಟ್ಟು ಅಗಲಿದ್ದಾರೆ. ಜನಪದ, ಶಿಷ್ಟ ಮತ್ತು ಆಧ್ಯಾತ್ಮ ಸಾಹಿತ್ಯದಲ್ಲಿ ಸಾಕಷ್ಟು ಅನುಭವಗಳನ್ನು ಪಡೆದು ಮೇರು ಪರ್ವತದಂತಿದ್ದರು. ನಿಜವಾಗಲೂ ಅವರ ಅಗಲಿಕೆ ನಮ್ಮೆಲ್ಲರಿU Éದುಃಖವನ್ನುಂಟು ಮಾಡಿದೆ ಎಂದು ಹಿರಿಯ ಸಾಹಿತಿ ಡಾ. ಆರ್..ಕೆ. .ಕುಲಕರ್ಣಿ ಅವರು ‘ಹಲಸಂಗಿ ಗೆಳೆಯರ ಪ್ರತಿಷ್ಠಾನ’ ಹಮ್ಮಿಕೊಂಡ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಲಸಂಗಿ ಪ್ರತಿಷ್ಠಾನದ ಸಂಚಾಲಕ ದೊಡ್ಡಣ್ಣ ಬಜಂತ್ರಿ, ಸದಸ್ಯರಾದ ಡಾ. ಎಂ.ಎಸ್.ಮದಭಾವಿ, ಜಗದೀಶ ಗಲಗಲಿ, ಡಾ. ಸೋಮಶೇಖರ ವಾಲಿ, ಡಾ.ವಿ.ಡಿ.ಐಹೊಳ್ಳಿ, ಪ್ರೊ.ಎ.ಬಿ.ಬೂದಿಹಾಳ, ಆರ್.ಎಚ್.ಬಿರಾದಾರ, ಡಾ. ಸಂಗಮೇಶ ಮೇತ್ರಿ, ಜಂಬುನಾಥ ಕಂಚ್ಯಾಣಿ ಅವರು ಡಾ. ಕಾಪಸೆಯವರೊಂದಿಗೆ ಹೊಂದಿರುವ ಒಡನಾಟವನ್ನು ಸ್ಮರಿಸಿದರು. ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವುದರ ಮೂಲಕ ನುಡಿನಮನ ಸಲ್ಲಿಸಿದರು.