ಶರಣರ ಸೇವೆಯಿಂದ ದೇಹಕ್ಕೆ ಬಂದ ಕುತ್ತು ದೂರಾಗಲಿದೆ:ಮಸೂತಿಶ್ರೀ
ತಾಳಿಕೋಟೆ:ಮಾ.29: ಶರಣ ಸತ್ಪುರುಷರು ದೇವತಾ ಮಾನವರಾಗಿ ರೂಪಗೊಂಡಂತಹ ಅವರ ಶಕ್ತಿ ಸಾಮಾನ್ಯವಲ್ಲಾ ಅವರ ದಿನದ ಹಿತನುಡಿಗಳನ್ನು ಕೇಳುವದರೊಂದಿಗೆ ಸೇವಾ ಮನೋಭಾವವನ್ನು ರೂಡಿಸಿಕೊಂಡರೆ ಭಕ್ತನಾದವನ ದೇಹಕ್ಕೆ ಬಂದ ಕುತ್ತು ದೂರಾಗಲಿದೆ ಎಂದು ಖ್ಯಾತ ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ನುಡಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ಗುರುವಾರರಂದು 18ನೇ ದಿನದಂದು ಜರುಗಿದ ಸುಕ್ಷೇತ್ರ ಅಂಕಲಿಯ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು ಗುರು ನಿರುಪಾದೀಶ್ವರರು ಸಮಾಜದ ಏಳಿಗೆಗಾಗಿ ಮಹತ್ವ ಕೊಡುತ್ತಿದ್ದರು ಅಂದಿನಕಾಲದಲ್ಲಿ ಬ್ರೀಟಿಷರೂ ಸಹೇತ ಶ್ರೀಗಳಿಗೆ ತಲೆಭಾಗಿಸಿ ತಮ್ಮ ಬೇಕು ಬೇಡಿಕೆಗಳ ಕುರಿತು ವಿಚಾರಿಸುತ್ತಾ ಸಾಗಿದ್ದರೆಂದು ಶ್ರೀಗಳು ನುಡಿದರು.
ನಿರುಪಾದೀಶ್ವರರ ಪುತ್ರ ಸುವರ್ಣೇಶ್ವರನಿಗೆ ಪೀಠಾಧಿಕಾರಿಯಾಗಿ ನೇಮಕ ಮಾಡಿದ ನಿರುಪಾದೀಶ್ವರರು ಮಗನಿಗೆ ತಿಳಿ ಹೇಳಿ ಹಸಿದವರಿಗೆ ಊಟ, ನೀರೊಡಿಸಿದವರಿಗೆ ನೀರು ಕೊಡುವ ಕಾರ್ಯ ಮಾಡು ಶ್ರೀಮಂತರೇ ಬರಲಿ ಬಡವರೇ ಬರಲಿ ಎಲ್ಲರಲ್ಲಿ ಒಂದೇ ರೂಪ ಕಾಣಬೇಕೆಂದು ನಿರುಪಾದೀಶ್ವರರು ಮಗನಿಗೆ ತಿಳುವಳಿಕೆ ನೀಡಿದರು. ದ್ವೈತ ಅದ್ವೈತದೊಂದಿಗೆ ಸಿದ್ದಾರೂಡರು ನಡೆದಂತೆ ನಡೆಯಬೇಕೆಂದು ಸಲಹೆ ನೀಡಿದ ಅವರು ತಮ್ಮ ಗ್ರಾಮದ ಹತ್ತಿರವೇ ಮತ್ತೊಂದು ಗ್ರಾಮದಲ್ಲಿಯ ಹೆಣ್ಣನ್ನು ತೆಗೆದು ಮಗನಾದ ಸುವರ್ಣೇಶ್ವರನಿಗೆ ಮಧುವೆ ಮಾಡುತ್ತಾರೆ ಮಧುವೆ ಮಾಡಿದ ನಂತರ ನಿರುಪಾದೀಶ್ವರರು ತಮ್ಮ ಬೆತ್ತವನ್ನು ಮಗನಿಗೆ ಹಸ್ತಾಂತರಿಸಿ ಒಳ್ಳೆಯ ರೀತಿಯಿಂದ ನಡೆದುಕೊಳ್ಳಲು ತಿಳಿಸಿ ಆಮಂತ್ರಣದಂತೆ ನಿರುಪಾದೀಶ್ವರರು ಊರಿಗೆ ಹೋಗುತ್ತಾರೆ ಅಲ್ಲಿದ್ದ ಮಂಚದ ಮೇಲೆ ಕೂಡ್ರಲು ಆ ಮನೆಯ ಗೌಡರು ಹೇಳುತ್ತಾರೆ ಗೌಡರು ಹೇಳಿದಂತೆ ನಿರುಪಾದೀಶ್ವರರು ಕೂಡ್ರುತ್ತಾರೆ ನಂತರ ಗೌಡರ ಮನೆಯ ಕುಟುಂಬದವರೆಲ್ಲರಿಗೂ ಆಶಿರ್ವದಿಸಿ ತೆರಳುತ್ತಾರೆ ನಿರುಪಾದೀಶ್ವರರು ಹೋದ ಮೇಲೆ ಅವರು ಕುಳಿತಿದ್ದ ಮಂಚದ ಮೇಲೆ ಗೌಡರು ಕೂಡ್ರುತ್ತಾರೆ ನಿರುಪಾದೀಶ್ವರಿಗಾಗಿ ನಿರ್ಮಿಸಲ್ಪಟ್ಟಂತಹ ಆ ಮಂಚದ ಮೇಲೆ ಕೂಳಿತಕೂಡಲೇ ಮೈಯಲ್ಲಾ ಊರಿದಂತಾಗುತ್ತದೆ ಇದನ್ನು ಲಕ್ಷೀಸಿ ಅವರ ಪತ್ನಿಯೂ ಕೂಡಾ ಆ ಮಂಚದ ಮೇಲೆ ಕುಳಿತು ನೋಡುತ್ತಾರೆ ಅವರ ದೇಹದಲ್ಲಿಯೂ ಊರಿ ಬಂದಂತಾಗುತ್ತದೆ ಇದರಿಂದ ಅದನ್ನು ಅರ್ಥೈಸಿಕೊಂಡ ಗೌಡರ ಕುಟುಂಬದವರು ಆ ಮಂಚವನ್ನು ಅಂಕಲಿಗೆ ಬಂದು ಕೊಟ್ಟು ಹೋಗುತ್ತಾರೆ ಆ ಮಂಚ ಇನ್ನೂ ಅಂಕಲಿಯಲ್ಲಿದೆ ಎಂದು ರ್ಶರೀಗಳು ಹೇಳಿದರು.
ರಾಮನ ತಮ್ಮ ಭರತ 14 ವರ್ಷಗಳ ಕಾಲ ಸಹೋದರ ರಾಮ ಮಾಡತಕ್ಕಂತಹ ಚಟುವಟಿಕೆಗಳನ್ನು ಮಾಡಿ ಅಣ್ಣ ರಾಮನು ಕೂಡ್ರುವ ಸಿಂಹಾಸನದ ಮೇಲೆ ಆತ ಕುಳಿತುಕೊಳ್ಳಲಿಲ್ಲಾ ಹಾಗೆ ಅಣ್ಣ ಬಸವಣ್ಣನವರು ಕಟ್ಟಿದ ಮೊದಲನೇ ಪಾರ್ಲಿಮೆಂಟ್ ಎಂದು ಹೇಳಲಾಗುವ ಅನುಭವ ಮಂಟಪದಲ್ಲಿಯ ಬಸವಣ್ಣನವರ ಸ್ಥಾನದ ಮೇಲೆಯೂ ಯಾರೂ ಕುಳಿತುಕೊಳ್ಳಲಿಲ್ಲವೆಂದು ಶ್ರೀಗಳು ನುಡಿದರು.
ಅಡವಿ ಸಿದ್ದಲಿಂಗರು ಕೊಟ್ಟ ಕುದರೆಯನ್ನು ಸೇವಕ ಮಾರಾಟ ಮಾಡಲು ರಾಯಚೂರಕ್ಕೆ ಕುದುರೆಯನ್ನು ಕೊಂಡೊಯುತ್ತಾನೆ ಮಾರಲಿಕ್ಕೆ ಹೋದ ಕುದುರೆಯ ಕಿಮ್ಮತ್ತು ಅಂದಿನ ಕಾಲದಲ್ಲಿ 80 ಸಾವಿರ ರೂ.ಗೆ ಓರ್ವ ವ್ಯಕ್ತಿ ಕೇಳಿ ಹಣ ಕೊಡುತ್ತಾನೆ ನಂತರ ಆ ಕುದುರೆ ಹೇಗಿದೆ ಎಂದು ಹತ್ತಿ ನೋಡುತ್ತೇನೆಂದು ಕುದುರೆಯ ಮೇಲೆ ಕುಳಿತು ಸವಾರಿ ಮಾಡಿದಾಗ ಆ ಕುದುರೆ ನಿರುಪಾದೀಶ್ವರರ ಹತ್ತಿರ ಹೋಗಿ ನಿಲ್ಲುತ್ತದೆ ಇದರ ಅರ್ಥ ಶರಣರ ಕುದುರೆಯನ್ನು ಮಾರಾಟ ಮಾಡಲು ಹೋಗಿ ವಿಚಿತ್ರ ಘಟನೆಯನ್ನು ಅರೀತ ಸೇವಕ ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡು ಶ್ರೀಗಳಿಗೆ ಶರಣಾಗುತ್ತಾನೆಂದು ಶ್ರೀಗಳು ನುಡಿದರು.
ಶ್ರೀ ಅಂಬಾ ಮಠದ ಶ್ರೀ ದೇವಿಯ 18 ಪುರಾಣ ನಿರುಪಾದೀಶ್ವರರು ಬರೆಯುತ್ತಾರೆ ಶ್ರೀಗಳಿಗೆ ಅಂಬಾ ಮಠದಲ್ಲಿ ಒಂದು ತಮ್ಮ ಮಠ ಮಾಡಬೇಕೆಂದು ಭಕ್ತರು ಶ್ರೀಗಳಿಗೆ ಒತ್ತಾಯಿಸುತ್ತಾರೆಂದು ಹೇಳಿದ ಶ್ರೀಗಳು ಪುರಾಣ ಅನ್ನುವಂತಹದ್ದು ಇದೊಂದು ಸನ್ಮಾರ್ಗಕ್ಕೆ ಒಯುವಂತಹ ಕಾರ್ಯ ಇದಾಗಿದೆ ದುಃಖ ದುಮ್ಮಾನಗಳನ್ನು ದೂರಿಕರಿಸುವಂತಹ ಶಕ್ತಿ ಇದರಲ್ಲಿ ಅಡಗಿದೆ ಶರಣರ ಹಾಗೂ ಮಹಾತ್ಮರ ನಡಾವಳಿಯಿಂದ ಅವರು ನೀಡಿದಂತಹ ವಿಧ್ಯೆಯಿಂದ ಭಕ್ತನಾದವನು ಪರಿವರ್ತನೆಯಾಗಲಿದ್ದಾರೆ ಕಾರಣ ಶರಣರ ಸೇವೆಯಿಂದ ದೇಹಕ್ಕೆ ಬಂದ ಕುತ್ತು ದೂರಾಗಲಿದೆ ಎಂದು ಹೇಳಿದ ಪುರಾಣಿಕ ಮಸೂತಿ ಶ್ರೀಗಳು ನಿರುಪಾದೀಶ್ವರರು ಕೊನೆಗೆ ಭಕ್ತ ಸಮೂಹದ ಮುಂದೆ ತಿಳಿ ಹೇಳಿ ಇಲ್ಲಿಗೆ ನನ್ನ ಕೆಲಸ ಮುಗಿಯಿತು ನನ್ನ ಮಗ ಎಲ್ಲವನ್ನು ನೋಡುತ್ತಾನೆ ಕಾರಣ ಎಲ್ಲರೂ ದೇವರನ್ನು ಪಾಲಿಸಬೇಕು ಎಂದು ನಿರುಪಾದೀಶ್ವರರು ಭಕ್ತರಿಗೆ ಹೇಳುತ್ತಾರೆ 1777ರಲ್ಲಿ ನಿರುಪಾದೀಶ್ವರರು ಲಿಂಗೈಕ್ಯರಾಗುತ್ತಾರೆ ಅದನ್ನು ಅರೀತ ಭಕ್ತರ ಕಣ್ಣಲ್ಲಿ ನೀರು ಬರಲು ಪ್ರಾರಂಬಿಸಿದಾಗ ನಿರುಪಾದೀಶ್ವರರು ಗವಿಯಲ್ಲಿ ಹೋಗಿ ನೀರಿನಲ್ಲಿ ನೀರು ಬರೆತಂತೆ ಅಂದು ಸೋಮವಾರ ಬೆಳಗಿನ ಸಮಯದಲ್ಲಿ ಲಿಂಗೈಕ್ಯರಾಗುತ್ತಾರೆಂದು ಶ್ರೀಗಳು ಹೇಳಿ ಪುರಾಣ ಮಂಗಲಗೊಳಿಸಿದರು.
ಈ ಸಮಯದಲ್ಲಿ ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಬಿ.ಕೆ.ಸುವರ್ಣಅಕ್ಕನವರು, ಭಂಟನೂರಿನ ಶರಣೆ ಕಾಶಿಬಾಯಿ ಅಮ್ಮನವರು, ಬಿ.ಕೆ.ಕಾಶಿಬಾಯಿ ಅಜ್ಜಿ, ಶರಣೆ ಕಾಶಿಬಾಯಿ, ಕಾಶಿಬಾಯಿ ಶರಣರ, ಶ್ರೀಮತಿ ಪ್ರೇಮಾಬಾಯಿ ದೇಗಿನಾಳ, ಬಿ.ಕೆ.ಬಸವರಾಜ, ಬಿ.ಕೆ.ಪಾರ್ವತಿ, ಬಿ.ಕೆ.ರತ್ನಾ, ಸಿದ್ದನಗೌಡ ಪೊಲೀಸ್‍ಪಾಟೀಲ(ಕರಿಭಾವಿ), ಬಂಡೆಪ್ಪಗೌಡ ಬಿರಾದಾರ, ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.