ಮಾನವ ಧರ್ಮಕ್ಕೆ ಜಯವಾಗಲಿ
ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.29 : ಮಾನವ ಧರ್ಮಕ್ಕೆ ರೇಣುಕಾಚಾರ್ಯರ ಕೊಡುಗೆ ಅಮೋಘವಾದದ್ದು, ಮಾನವ ಧರ್ಮದ ಉದ್ಧಾರಕ್ಕಾಗಿ ರೇಣುಕಾಚಾರ್ಯರು ಜನ್ಮ ತಾಳಿದ್ದರು ಎಂದು ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಅವರು  ಹೇಳಿದರು.
ನಗರದ ಶ್ರೀರೇಣುಕಾಚಾರ್ಯರ ಜಯಂತಿ ನಿಮಿತ್ತ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಜಂಗಮ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದವರಾಗಿದ್ದಾರೆ. ಸಮಾಜದ ಉದ್ದಾರಕ್ಕಾಗಿ ಆಧ್ಯಾತ್ಮ, ಧಾರ್ಮಿಕ ಸೇವೆಗಳನ್ನು ಜಂಗಮ ಸಮಾಜದವರು ಮಾಡುತ್ತಾರೆ . ಜಂಗಮ ಸಮಾಜದ ಉದ್ದಾರಕ್ಕೆ ಸರ್ವರಿಗೂ ಕೈಜೋಡಿಸಬೇಕಾಗಿದೆ. ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕವಾಗಿ ಜಂಗಮ ಸಮಾಜದ ಅಭಿವೃದ್ಧಿಗೆ ಸರಕಾರಗಳು ಯೋಜನೆಗಳನ್ನ ರೂಪಿಸಬೇಕಾಗಿದೆ ಎಂದರು.
ಈ ವೇಳೆ ಕಲ್ಮಠದ ಡಾ. ಕೊಟ್ಟೂರುಸ್ವಾಮೀಜಿ, ಜಂಗಮ ಸಮಾಜದ ಮುಖಂಡರಾದ ಎಚ್.ಎಮ್ .ಸಿದ್ದರಾಮಯ್ಯಸ್ವಾಮಿ, ಬಸವರಾಜ್ ಮಳೆಮಠ, ಶರಣಯ್ಯ ಸ್ವಾಮಿ, ಶರಬಯ್ಯಸ್ವಾಮಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ ರಾಜಶೇಖರ ಹಿಟ್ನಾಳ್ ಎಸ್.ಬಿ.ಹಿರೇಮಠ, ಹುಚ್ಚಯ್ಯಸ್ವಾಮಿ, ವೀರಯ್ಯಸ್ವಾಮಿ, ಉಮೇಶ, ಆದಯ್ಯಸ್ವಾಮಿ ಹಿರೇಮಠ, ಸಂಗಯ್ಯಸ್ವಾಮಿ ಸಂಶಿಮಠ,ಹೆಚ್.ಎಂ.ವಿರೂಪಾಕ್ಷಸ್ವಾಮಿ, ಸೇರಿ ಜಂಗಮ ಸಮಾಜದವರಿದ್ದರು.