ಏ.4 ಮದ್ದೂರಮ್ಮ ರಥೋತ್ಸವ
ಬೆಂಗಳೂರು.ಮಾ.೨೯-ನಗರ ಜಿಲ್ಲೆ ಆನೇಕಲ್ ತಾಲ್ಲೂಕು ಅತ್ತಿಬೆಲೆ ಹೋಬಳಿ ಚಂದಾಪುರದ ಹೀಲಲ್ಲಿಗೆ ಗ್ರಾಮದಲ್ಲಿ ಏ,೪ರಿಂದ ೯ರವರೆಗೆ ಊರಹಬ್ಬ ಮತ್ತು ಮದ್ದೂರಮ್ಮ ದೇವಿಯ ರಥೋತ್ಸವನ್ನು ಏರ್ಪಡಿಸಲಾಗಿದೆ.
ಏ.೪ರಿಂದ ಗ್ರಾಮದೇವತೆಗಳಿಗೆ ಪೂಜಾ ಕಾರ್ಯಕ್ರಮUಳು ಹಾಗೂ ಬೆಲ್ಲದಾರತಿ ದೀಪೋತ್ಸವ ದೇವರುಗಳ ಆರಾಧನೆ ನಡೆಯಲಿವೆ. ಏ.೪ ಗುರುವಾರ ಸಂಜೆ ೪:೩೦ ಕ್ಕೆ ಪಾಂಡುರಂಗಸ್ವಾಮಿ, ಸಪಲ್ಲಮ್ಮದೇವಿ, ಶ್ರೀ ಕಾವೇರಮ್ಮದೇವಿ ಮದನಗಿರಿ ಮುನೇಶ್ವರ ಸ್ವಾಮಿ, ಶ್ರೀ ಧರ್ಮರಾಯಸ್ವಾಮಿ ಬ್ರೌಪದಮ್ಮ, ತಿಮ್ಮುರಾಯಸ್ವಾಮಿ, ದೇವರುಗಳ ಆರಾಧನ ಕಾರ್ಯಕ್ರಮ ಸಂಜೆ ೫:೩೦ ಕ್ಕೆ ಶ್ರೀ ಆಂಜನೇಯಸ್ವಾಮಿ ಹಾಗೂ ಬಸವೇಶ್ವರ ಸ್ವಾಮಿಗೆ ಬೆಲ್ಲದಾರತಿ ರಾತ್ರಿ ೭:೩೦ ಕ್ಕೆ ಕರಗ ಮಹೋತ್ಸವ.
ಏ.೫. ಶುಕ್ರವಾರ ಬೆಳಿಗ್ಗೆ ೭:೩೦ಕ್ಕೆ ಮದ್ದೂರಮ್ಮದೇವಿ ಹಾಗೂ ಸಪಲ್ಲಮ್ಮ ದೇವರಿಗೆ ತಂಬಿಟ್ಟಿನ ಆರತಿ
ಬೆಳಗ್ಗೆ ೧೦:೦೦ ಘಂಟೆಗೆ ಮಾರಮ್ಮ
ದೇವಿಗೆ ತಂಬಿಟ್ಟಿನ ಆರತಿ ಹಾಗೂ ಗ್ರಾಮ ಹಬ್ಬ ಸಂಜೆ ೬:೩೦ಕ್ಕೆ ಹೀಲಲ್ಲಿಗೆ ಶಾಲಾ ಮೈದಾನದಲ್ಲಿ ವಾದ್ಯಗೋಷ್ಠಿ ಹಾಗೂ ರಾತ್ರಿ ೭:೦೦ ಘಂಟೆಗೆ ರಥಕ್ಕೆ ತಂಬಿಟ್ಟು ಮತ್ತು ದೀಪಾರತಿ.
ಏ,೬ ಶನಿವಾರ ಬೆಳಿಗ್ಗೆ ೧೧ ಘಂಟೆಗೆ ೪೮ ಜೊತೆ ಹಳ್ಳಿಕಾರ್ ಹಾಗೂ ಓಂಗಲ್ ಎತ್ತುಗಳೊಂದಿಗೆ ರಥ ಹುಸ್ಕೂರಿಗೆ ಹೊರಡುವುದು.
ಏ.೯ ರಂದು ಮಂಗಳವಾರ ಬೆಳಗ್ಗೆ ೬:೩೦ಕ್ಕೆ ಹುಸ್ಕೂರಿನಿಂದ ಹೀಲಲ್ಲಿಗೆ ರಥ ಬರುವಾಗ ಬೆಳಿಗ್ಗೆ ೧೦:೩೦ಕ್ಕೆ ಹೀಲಲ್ಲಿಗೆ ಗ್ರಾಮದಲ್ಲಿ ಸುಮಂಗಲಿಯರಿಂದ ಕೆಂಪುನೀರಿನ ಆರತಿಗಳೊಂದಿಗೆ ಬರಮಾಡಿಕೊಳ್ಳುವುದು.