ಅದ್ದೂರಿ ಎನ್‌ಸಿಸಿ ವರ್ಷದ ವಾರ್ಷಿಕೋತ್ಸವ
ಆನೇಕಲ್. ಮಾ. ೨೯- ಹೆಬ್ಬಗೋಡಿ ಸಮೀಪದಲ್ಲಿರುವ ಎಸ್.ಎಪ್.ಎಸ್ ಕಾಲೇಜಿನಲ್ಲಿ ಎನ್ ಸಿ ಸಿ ಘಟಕ ಮತ್ತು ರೋವರ್ಸ್ ಅಂಡ್ ರೆಂಜರ್ಸ್ ಹಾಗೂ ಕೆ.ಸಿ.ಡಿ ವತಿಯಿಂದ ೧೩ ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಇರುವಂತಹ ಪ್ರತಿಭೆಯನ್ನು ಗುರುತಿಸುವುದು ಮತ್ತು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದರೊಂದಿಗೆ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯನ್ನು ನೀಡುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ಬಾರಿಯು ಕೂಡ ಸಂಗಮ ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ವಿಶೇಷವಾಗಿ ವೀರಯೋಧ ದೇಶಕ್ಕಾಗಿ ಪ್ರಾಣವನ್ನು ಬಿಟ್ಟ ಕ್ಯಾಪ್ಟನ್ ಪ್ರಾಂಜಾಲ್ ರವರ ತಂದೆ ತಾಯಿಯನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು,
ಹಾಗೆಯೇ ಎನ್‌ಸಿ ಸಿ ಘಟಕದ ವತಿಯಿಂದ ನರೇಂದ್ರ ಕುಮಾರ್ ರವರಿಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಸೇವಾರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ವಿದ್ಯಾರ್ಥಿಗಳು ಬಿಡಿಸಿದಂತಹ ಬಣ್ಣ ಬಣ್ಣದ ಚಿತ್ರಗಳು ಮತ್ತು ಗ್ಯಾಜೆಟ್ಸ್ ಗಳು ಆಕರ್ಷಕವಾಗಿದ್ದವು. ವಿದ್ಯಾರ್ಥಿಗಳು ನಡೆಸಿ ಕೊಟ್ಟಂತಹ ಸಾಂಸ್ಕೃತಿಕ ನೃತ್ಯಗಳು ನೆರೆದಿದ್ದ ಜನರಿಗೆ ರೋಮಾಂಚನವನ್ನು ಉಂಟುಮಾಡಿತು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಬಿನು ರವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ೧ ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಆದ ಕರ್ನಲ್ ಎಂ.ಆರ್.ಸುರೇಶ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಆಯುಕ್ತರಾದ ಚಿನ್ನಸ್ವಾಮಿ ರೆಡ್ಡಿ, ಸುಬೇದಾರ್ ಮೇಜರ್ ರೋಹಿತ್, ಪ್ರಾಂಜಲ್ ರವರ ಪೋಷಕರಾದ ವೆಂಕಟೇಶ ಹಾಗೂ ಅನುರಾಧ, ಕಾಲೇಜಿನ ಉಪ ಪ್ರಾಂಶುಪಾಲರಾದ ಫಾದರ್ ಜೀಜೊ, ಹಣಕಾಸು ಸಚಿವರಾದ ಫಾದರ್ ರಾಬಿನ್, ಎನ್.ಸಿ.ಸಿ ಅಧಿಕಾರಿಯಾದ ಕ್ಯಾಪ್ಟನ್ ಸಂಪತ್ ಕುಮಾರ್, ಪಿಯು ಕಾಲೇಜಿನ ಪ್ರಾಂಶುಪಾಲರಾದ ಫಾದರ್ ಸ್ಟ್ಯಾನಿ ಹಾಗೂ ಪೋಷಕರು. ಎನ್.ಸಿ.ಸಿ. ವಿದ್ಯಾರ್ಥಿಗಳು ಬಾಗವಹಿಸಿದ್ದರು.