ಕಳಲೆ ಲಕ್ಷ್ಮಿಕಾಂತ ಸ್ವಾಮಿ ರಥೋತ್ಸವ ಅದ್ದೂರಿ
ಸಂಜೆವಾಣಿ ನ್ಯೂಸ್
ನಂಜನಗೂಡು: ಮಾ.29:- ತಾಲ್ಲೂಕಿನ ಕಳಲೆ ಗ್ರಾಮದಲ್ಲಿ ಇಂದು ಕಳಲೆ ಶ್ರೀ ಲಕ್ಷ್ಮಿಕಾಂತ ಸ್ವಾಮಿ ಜಾತ್ರಾ ಮಹೋತ್ಸವ ಬಹಳ ಅದ್ದರಿಯಾಗಿ ಸಾವಿರಾರು ಭಕ್ತಾದಿಗಳ ನಡುವೆ ನಡೆಯಿತು
ಬೆಳಗ್ಗೆ 7,53 ರಿಂದ 8,27 ಸಲ್ಲುವ ಶುಭ ಮೇಷ ಲಗ್ನದಲ್ಲಿ ಕಳಲೆ ಗ್ರಾಮದಲ್ಲಿ ಲಕ್ಷ್ಮಿಕಾಂತ ಸ್ವಾಮಿ ರಥೋತ್ಸವ ನಡೆಯಿತು ಶಾಸಕ ದರ್ಶನ್ ಧ್ರುವ ನಾರಾಯಣ್ ರಥ ಅಳೆಯುವ ಮೂಲಕ ಚಾಲನೆ ನೀಡಿದರು
ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರು ಪಾಲ್ಗೊಂಡು ತೇರು ಎಳೆದು ನಂತರ ಶ್ರೀ ಲಕ್ಷ್ಮಿಕಾಂತ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದರು.
ಕಳಲೆಯ ಜಾತ್ರೆ ಬಹಳ ಇತಿಹಾಸ ಹೊಂದಿದೆ ಅಕ್ಕಪಕ್ಕದ ಗ್ರಾಮದವರು ನವ ಜೋಡಿಗಳು ಮತ್ತು ಹಲವಾರು ಜಿಲ್ಲೆಗಳಿಂದ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು ಜಾತ್ರೆಗೆ ಬಂದಂತಹ ಭಕ್ತಾದಿಗಳು ರಥಕ್ಕೆ ಹಣ್ಣು ದವನ ಎಸೆದು ಜೈಕಾರ ಹಾಕಿ ರಥ ಎಳೆದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಗ್ರಾಂ. ಪಂ ಅಧ್ಯಕ್ಷರಾದ ಲತಾ ಮಹೇಶ್ ಉಪಾಧ್ಯಕ್ಷರು ಹರೀಶ್ ಮಾಜಿ ಗ್ರಾಂ. ಪಂ ಅಧ್ಯಕ್ಷರಾದ ಮಹೇಶ್ ಗುರುಮಲ್ಲಪ್ಪ ರಾಚನಾಯಕ ನಗರಸಭೆ ಸದಸ್ಯರಾದ ಪ್ರದೀಪ್ ಗ್ರಾಂ. ಪಂ ಸದಸ್ಯರಾದ ಸಿದ್ದೇಶ್ ಶಿವಕುಮಾರ್ , ಪ್ರಸನ್ನ ಪ್ರತಾಪ್ ರವರು, ಬಲಕೃಷ್ಣ ನಾರಾಯಣ ರಂಗಸ್ವಾಮಿ , ಹಾಗಿನವಳು ಬಸವಣ್ಣ ರವರು, ರಾಜೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.