ಯುವ ಜನತೆ ತಪ್ಪದೆ ಮತ ಚಲಾಯಿಸಿ
ಆನೇಕಲ್.ಮಾ.೨೯:ಏಪ್ರಿಲ್ ೨೬ ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಯುವ ಜನತೆ ಸೇರಿದಂತೆ ಎಲ್ಲಾ ಮತದಾರರು ತಪ್ಪದೇ ಕಡ್ಡಾಯವಾಗಿ ಸ್ವಯಂ ಪ್ರೇರಿತವಾಗಿ ಮತದಾನ ಮಾಡುವ ಮೂಲಕ ಮತದಾನದ ಹಬ್ಬದಲ್ಲಿ ಪಾಲ್ಗೋಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್.ಶ್ರೀನಾಥ್ ಗೌಡರು ಸಾರ್ವಜನಿಕವಾಗಿ ಮನವಿ ಮಾಡಿದರು.
ಅವರು ತಿಗಳ ಚೌಡದೇನಹಳ್ಳಿ ಗ್ರಾಮದಲ್ಲಿ ಆನೇಕಲ್ ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಯಮರೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸಾರ್ವಜನಿಕರಿಗೆ ಹಾಗೂ ಯುವ ಮತದಾರರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕಕ್ಕೆ ಚಾಲನೆ ನೀಡಿ ಮಾತನಾಡಿದರು. ಮತದಾನಕ್ಕೆ ಸಮಾಜವನ್ನು ಬದಲಿಸುವ ಶಕ್ತಿ ಇದ್ದು ಎಲ್ಲರೂ ಮತದಾನದ ಮಹತ್ವವನ್ನು ಅರಿತು ಸ್ವಯಂ ಪ್ರೇರಿತವಾಗಿ ಮತದಾನ ಮಾಡಬೇಕು ಎಂದರು.
ಮತದಾನದ ಹಕ್ಕು ಪ್ರತಿಯೊಬ್ಬರಿಗೂ ಸಿಕ್ಕ ಮೂಲ ಭೂತ ಹಕ್ಕುಗಳಲ್ಲಿ ಒಂದಾಗಿದ್ದು ಈ ನಿಟ್ಟಿನಲ್ಲಿ ಸುಭದ್ರ ದೇಶ ನಿರ್ಮಾಣಕ್ಕೆ ಎಲ್ಲರೂ ತಪ್ಪದೆ ಮತದಾನ ಮಾಡಿ ಎಂದು ಹೇಳಿದರು.
ವಿಶೇಷವಾಗಿ ಮನೆಗೆ ಮನೆಗೆ ಮತದಾನದ ಮಮತೆಯ ಕರೆಯೋಲೆಯನ್ನು ನೀಡಲಾಯಿತು ಮತ್ತು ದ್ವಿಚಕ್ರ ಹಾಗೂ ಕಾರುಗಳು ಮತ್ತು ಮನಗೆಳ ಗೋಡೆಗಳ ಮೇಲೆ ಮತದಾನ ಜಾಗೃತಿಗೆ ಸಂಬಂದಿಸಿದಂತೆ ಸ್ಟಿಕ್ಟರ್ ಗಳನ್ನು ಅಂಟಿಸಿ ಜಾಗೃತಿ ಮೂಡಿಸಲಾಯಿತು. ಹಾಗೆಯೇ ಸುಮಾರು ೧೯ ಸಾವಿರ ರೈತರ ಜೊತೆಗೆ ಆಡಿಯೋ ಕಾನ್ಪುರೆನ್ಸ್ ಮೂಲಕ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಯಮರೆ ಗ್ರಾಮ ಪಂಚಾಯಿತಿ ಪಿಡಿಓ ಮಹೇಶ್, ಪಂಚಾಯಿತಿ ಸಿಬ್ಬಂದಿಗಳಾದ ನಾರಾಯಣಸ್ವಾಮಿ, ಪಾಪರೆಡ್ಡಿ ಮತ್ತು ಸ್ವೀಪ್ ಸಮಿತಿಯ ಕೆ,ಚಂದ್ರಶೇಖರ್, ನಾಗರಾಜ್, ಹರೀಶ್ ಮತ್ತು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪಂಚಾಯಿತಿ ವಾಟರ್ ಮೆನ್ ಗಳು ಮುಂತಾದವರು ಹಾಜರಿದ್ದರು.