ದಿ. ಶಂಕರರಾವ ಆಳಂದಕರ ಸ್ಮರಣಾರ್ಥ ಒಂದು ದಿನದ ಚಿತ್ರಕಲಾ ಶಿಬಿರ
ಕಲಬುರಗಿ:ಮಾ.28: ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದಲ್ಲಿ ದಿ.ಶಂಕರರಾವ ಆಳಂದಕರ ಅವರ ಸ್ಮರಣಾರ್ಥ ಒಂದು ದಿನದ ಚಿತ್ರಕಲಾ ಶಿಬಿರವನ್ನು ಆಯೋಜಿಸಲಾಗಿತ್ತು
ಬಸವರಾಜ ಜಾನೆ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕøತರು ಹಾಗೂ ಸದಸ್ಯರು, ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಇವರು ಈ ಶಿಬಿರದ ಉದ್ಘಾಟಿಸಿ ಮಾತನಾಡುತ್ತ ದಿವಂಗತ ಶಂಕರರಾವ್ ಆಳಂದಕರ ಅವರ ಕೆಲವು ಸತ್ಯಘಟನೆಗಳನ್ನು ಮೆಲಕು ಹಾಕುತ್ತ್ತಾ ಶಿಬಿರಾರ್ಥಿಗಳಿಗೆ ಇಂತಹ ವಿಷಯಗಳು ಪ್ರೋತ್ಸಾಹ ನೀಡುವುದಲ್ಲದೆ ಚಿತ್ರಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಹೊಸ ಉತ್ಸಾಹ ದೊರಕುತ್ತದೆ ಎಂದು ತಿಳಿಸಿದರು. ದಿವಂಗತ ಶಂಕರರಾವ್ ಆಳಂದಕರ ಅವರು ಡಾ. ಎಸ್.ಎಂ.ಪಂಡಿತರಂತಹ ಉತ್ತಮ ಶಿಷ್ಯರನ್ನು ಹೊಂದಿದ್ದು ಅವರ ಉನ್ನತ ವ್ಯಾಸಂಗಕ್ಕೆ ತಮ್ಮಲ್ಲಿರುವ ಬಂಗಾರವನ್ನು ಮಾರಾಟ ಮಾಡಿ ಅವರ ಅಧ್ಯಯನವನ್ನು ಮುಂದುವರೆಯುವಂತೆ ಮಾಡಿದ್ದಲ್ಲದೆ ನಮ್ಮ ಕಲ್ಯಾಣ ಕರ್ನಾಟಕ ಭಾಗದ ದಿಗ್ಗಜ ಕಲಾವಿದರನ್ನಾಗಿ ನಿರ್ಮಾಣ ಮಾಡಿದ ಶ್ರೇಯಸ್ಸು ಶಂಕರರಾವ್ ಆಳಂದಕರ ಅವರದ್ದು ಎಂದು ಕೊಂಡಾಡಿದರು.
ಅತಿಥಿಗಳಾಗಿ ಆಗಮಿಸಿದ ನೂತನ ವಿದ್ಯಾಲಯ ಸಂಸ್ಥೆಯ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ರವೀಂದ್ರ ಟೆಂಗಳಿ ಇವರು ದಿವಂಗತ ಶಂಕರರಾವ್ ಆಳಂದಕರ ಅವರ ಹೆಸರಿನಲ್ಲಿ ನಮ್ಮ ಸಂಸ್ಥೆಯಲ್ಲಿ ಒಂದು ಆರ್ಟಗ್ಯಾಲರಿ ಪ್ರಾರಂಭಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು. ಕೆಂಭಾವಿಯ ವಿಶಿಷ್ಟ ಕಲಾವಿದರಾದ ಹಳ್ಳೇರಾವ ಕುಲಕರ್ಣಿ ಅವರು ಶಿಬಿರದಲ್ಲಿ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಈ ಶಿಬಿರದಲ್ಲಿ 26 ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಬಸವರಾಜ ಜಾನೆ ಹಾಗೂ ಹಳ್ಳೇರಾವ ಕುಲಕರ್ಣಿ ಅವರಿಗೆ ಸನ್ಮಾನಿಸಲಾಯಿತು.
ಸೌಭಾಗ್ಯಲಕ್ಷ್ಮೀ ಪ್ರಾರ್ಥನಾ ಗೀತೆಯನ್ನು ಪ್ರಸ್ತುಪಡಿಸಿದರು. ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶ್ರೀಕಾಂತ ಎಖಳೀಕರ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನೂತನ ವಿದ್ಯಾಲಯ ಸಂಸ್ಥೆಯ ಖಜಾಂಚಿ ಮಧುಸೂದನ ಚಾರಿ ಅತಿಥಿಗಳಾಗಿ ಆಗಮಿಸಿದ್ದರು. ಆಯ್.ಕ್ಯು.ಎ.ಸಿ.ಸಂಚಾಲಕ ಗೋವಿಂದ ಪೂಜಾರ, ಚಿತ್ರಕಲಾ ವಿಭಾಗದ ಮುಖ್ಯಸ್ಥರಾದ ಜಿತೇಂದ್ರ ಕೊಥಳಿಕರ ಹಾಗೂ ಉಪನ್ಯಾಸ ಹಾಗೂ ಶಿಬಿರದ ಸಂಚಾಲಕರಾದ ನಾಗರಾಜ ಕುಲಕರ್ಣಿ ಉಪಸ್ಥಿತರಿದ್ದರು. ನೂತನ ವಿದ್ಯಾಲಯ ಸಂಸ್ಥೆಯ ಉಪಾಧ್ಯಕ್ಷ ಶ್ರೀಕಾಂತ ಕುಲಕರ್ಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ.ವಿಷ್ಣು ಎಸ್. ಗುಂಡಗುರ್ಕಿ ಅವರು ಕಾರ್ಯಕ್ರಮ ನಿರೂಪಿಸಿದರು, ಜಿತೇಂದ್ರ ಕೊಥಳಿಕರ ವಂದಿಸಿದರು. ಮಂಜುಳಾ ಜಾನೆ, ನಾರಾಯಣ ಎಂ .ಜೋಶಿ ಸಿಬ್ಬಂದಿ ವರ್ಗದವರು ಇದ್ದರು.