3.70 ಲಕ್ಷ ರೂ.ಮೊತ್ತದ ಮರಳು ಜಪ್ತಿ: ನಾಲ್ವರ ವಿರುದ್ಧ ಪ್ರಕರಣ
ಕಲಬುರಗಿ,ಮಾ.28-ಅಫಜಲಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭೀಮಾ ನದಿ ತೀರದ ಶಿವಪೂರ ಹಾಗೂ ಬನ್ನಟ್ಟಿ ಗ್ರಾಮಗಳ ವಿವಿಧ ಸರ್ವೆ ನಂಬರ್‍ಗಳ ಜಮೀನುಗಳಲ್ಲಿ ಹಾಗೂ ಸರ್ಕಾರಿ ಗೌಠಾಣಾ ಜಾಗದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇಲೆ ಎಸ್‍ಪಿ ಅಕ್ಷಯ್ ಹಾಕೆ, ಹೆಚ್ಚುವರಿ ಎಸ್‍ಪಿ ಶ್ರೀನಿಧಿ, ಆಳಂದ ಉಪ ವಿಭಾಗದ ಡಿಎಸ್‍ಪಿ ಮಹಮ್ಮದ್ ಶರೀಫ್ ರಾವುತರ್ ಅವರ ಮಾರ್ಗದರ್ಶನದಲ್ಲಿ ಅಫಜಲಪುರ ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‍ಐ ಮಹಿಬೂಬ್ ಅಲಿ, ದೇವಲಗಾಣಗಾಪೂರ ಪಿಎಸ್‍ಐ ಪರಶುರಾಮ, ಸಿಬ್ಬಂದಿಗಳಾದ ಸೋಮನಾಥ, ಗಿರೆಪ್ಪ, ಇಮಾಮ್, ವಿಶ್ವನಾಥ ಅವರು ದಾಳಿ 3.70 ಲಕ್ಷ ರೂ.ಮೊತ್ತದ 185 ಟ್ರ್ಯಾಕ್ಟರ್ ಮರಳು ಜಪ್ತಿ ಮಾಡಿಕೊಂಡು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಪೂರ ಗ್ರಾಮದ ಜಮೀನಿನಲ್ಲಿ ಸಂಗ್ರಹಿಸಿದ್ದ 150 ಲಕ್ಷ ರೂ.ಮೊತ್ತದ 75 ಟ್ರ್ಯಾಕ್ಟರ್ ಮರಳು, ಇದೇ ಗ್ರಾಮದ ಸರಕಾರಿ ಗೌಠಾಣಾದಲ್ಲಿ ಸಂಗ್ರಹಿಸಿದ್ದ 80 ಸಾವಿರ ರೂ.ಮೌಲ್ಯದ 40 ಟ್ರ್ಯಾಕ್ಟರ್ ಮರಳು, ಬನ್ನಟ್ಟಿ ಗ್ರಾಮದಲ್ಲಿ ಜಮೀನಿನಲ್ಲಿ ಸಂಗ್ರಹಿಸಿದ್ದ 80 ಸಾವಿರ ರೂ.ಮೊತ್ತದ 40 ಟ್ರ್ಯಾಕ್ಟರ್ ಮರಳು ಮತ್ತು ಇದೇ ಗ್ರಾಮದ ಇನ್ನೊಂದು ಸರ್ವೆ ನಂಬರ್ ಜಮೀನಿನಲ್ಲಿ ಸಂಗ್ರಹಿಸಿದ್ದ 80 ಸಾವಿರ ರೂ.ಮೊತ್ತದ 40 ಟ್ರ್ಯಾಕ್ಟರ್ ಮರಳನ್ನು ಜಪ್ತಿ ಮಾಡಲಾಗಿದೆ.