ಕಣಕಿ ಬಣವೆಗೆ ಕಿಡಿಗೇಡಿಗಳಿಂದ ಬೆಂಕಿ
ಚಿಂಚೋಳಿ,ಮಾ.28- ತಾಲೂಕಿನ ಚತ್ರಸಾಲ ಗ್ರಾಮದ ಕಲಬುರಗಿ ಸಿಮೆಂಟ್ ಕಂಪನಿ ಸಮೀಪದ ಹೊಲ (ಸರ್ವೇ ನಂಬರ್ 26/4) ದಲ್ಲಿರುವ ಕಣಕಿ ಬಣವಿಗೆ ಯಾರೋ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ಸುಮಾರು 1 ಲಕ್ಷ ರೂಪಾಯಿಗಳು ಮೌಲ್ಯದ ಕಣಕಿ ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.
ಕರ್ಚಖೇಡ ಗ್ರಾಮ ಪಂಚಾಯತ ಸದಸ್ಯ ಬಾಬುಮಿಯಾ ತಂದೆ ಮಹಿಬೂಬ್ ಸಾಬ್ ಮೊಮೀನ್ ಅವರಿಗೆ ಸೇರಿದ ಬಣವೆಗಳು ಇವಾಗಿದ್ದು, ಸಿಮೆಂಟ್ ಕಂಪನಿ ಸೆಕ್ಯೂರಿಟಿಗಾರ್ಡ್ ಹೊಲದಲ್ಲಿ ಬೆಂಕಿ ಹೊತ್ತಿ ಉರಿಯುವುದನ್ನು ಕಂಡು ಗ್ರಾಮದವರಿಗೆ ತಿಳಿಸಿದ್ದಾರೆ.
ಅಗ್ನಿಶಾಮಕದಳ ಹಾಗೂ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಲಾಯಿತಾದರೂ ಸುಮಾರು 18 ಟ್ರ್ಯಾಕ್ಟರ್ ಕಣಕಿ ಪೂರ್ಣ ಸುಟ್ಟು ಬೂದಿಯಾಗಿದೆ. ಇತ್ತೀಚಿಗೆ ಕರ್ಚಖೇಡ ಗ್ರಾಮದಲ್ಲಿಯೂ ಸಹ ಬಣವಿಗೆ ಬೆಂಕಿಯಿಟ್ಟ ಘಟನೆ ನಡೆದಿದ್ದು ಇದರಲ್ಲಿ ಯಾರೋ ಕಿಡಿಗೇಡಿಗಳ ಕೈವಾಡ ಇರಬಹುದು ಎಂದು ಶಂಕಿಸಲಾಗಿದ್ದು, ಈ ಸಂಬಂಧ ಮಿರಿಯಾಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.