ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ
ಕಲಬುರಗಿ,ಮಾ.28-ನೇಣು ಹಾಕಿಕೊಂಡು ಅಪರಿಚಿತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿಳಗೂಳ ಸೀಮಾಂತರದಲ್ಲಿ ನಡೆದಿದೆ.
ತಿಳಗೂಳ ಗ್ರಾಮದ ಶಿವಕುಮಾರ ಹಲಬುರ್ಗಿ ಎಂಬುವವರ ಹೊಲದ ಹಳ್ಳದ ದಂಡೆಯಲ್ಲಿರುವ ಜಾಲಿ ಮರಕ್ಕೆ 50 ರಿಂದ 55 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶವ ಕೊಳೆತು ಹೋಗಿದೆ.
5-6 ದಿನಗಳ ಹಿಂದೆ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.