ಶೌಚಾಲಯ ನಿರ್ಮಾಣಕ್ಕಾಗಿ ಪುರಸಭೆಗೆ ಮನವಿ
ಸೇಡಂ, ಮಾ,28: ಪಟ್ಟಣದಲ್ಲಿರುವ ಬಸವ ನಗರ ಬಡಾವಣೆಯಲ್ಲಿ ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಹಿಳೆಯರಿಗಾಗಿ ಪ್ರತ್ಯೇಕ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕಾಗಿ ನಮ್ಮ ಕರ್ನಾಟಕ ಸೇನೆ ತಾಲೂಕು ಘಟಕದಿಂದ ಪುರಸಭೆ ಅಧಿಕಾರಿಗಳ ಮುಖಾಂತರ ಸಹಾಯಕ ಉಪ ವಿಭಾಗಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು. ಈ ವೇಳೆಯಲ್ಲಿ ಜಿಲ್ಲಾಧ್ಯಕ್ಷರಾದ ಆನಂದ್ ಎಸ್ ದೊಡ್ಮನಿ,ತಾಲೂಕು ಅಧ್ಯಕ್ಷರಾದ ಮೌನೇಶ್ ಬೆನಕನಹಳ್ಳಿ ಹಾಗೂ ಸೇಡಂ ನಗರ ಅಧ್ಯಕ್ಷರಾದ ಮಲ್ಲು ಕೊಡದುರ್ ನಗರ ಉಪಾಧ್ಯಕ್ಷರಾದ ದೇವು ರಾಜೋಳಿ,ಶಿವು ಜ್ಯೂಲ್ಪಿ ತಾಲೂಕ ಉಪಾಧ್ಯಕ್ಷರು ವಿಶ್ವರಾಧ್ಯ ಸ್ವಾಮಿ ಪ್ರಧಾನ ಕಾರ್ಯದರ್ಶಿ ದೇವು ತಾಂಡ ತಾಲೂಕ ಕೂಲಿ ಕಾರ್ಮಿಕ ಘಟಕ ಅಧ್ಯಕ್ಷರು ರಾಜು ಸೇಡಂ ತಾಲೂಕ ಘಟಕ ಅಧ್ಯಕ್ಷ ಬಿಬ್ಬಳ್ಳಿ ನಾಗು ಕಲ್ಕಮ್ ಆಟೋ ಚಾಲಕರ ಅಧ್ಯಕ್ಷರು ರಾಜು, ಮಹಿಳೆಯರು ಸೇರಿದಂತೆ ಹಲವರು ಇದ್ದರು.