ಡಾ.ಬಾಬು ಜಗಜೀವನ್ ರಾಮ್ ಜಯಂತೋತ್ಸವ ಪೂರ್ವಭಾವಿ ಸಭೆ
ಸೇಡಂ, ಮಾ,28: ಹಸಿರು ಕ್ರಾಂತಿಯ ಹರಿಕಾರ ಭಾರತದ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 117ನೇ ಹಾಗೂ ಸಂವಿದಾನ ಶಿಲ್ಪ ಡಾ.ಬಿ ಆರ್ ಅಂಬೇಡ್ಕರ್ ಅವರ 133ನೇ ಜಯಂತೋತ್ಸವ ಆಚರಣೆ ಅಂಗವಾಗಿ ಪೂರ್ವಭಾವಿ ಸಭೆ ಇಂದು ತಾಲೂಕಾ ಆಡಳಿತ ಸೌಧದ ಸಭಾಂಗಣದಲ್ಲಿ ತಹಸಿಲ್ದಾರ್ ಶಿವಾನಂದ್ ಮೇತ್ರೆ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.ಸಭೆ ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಶಿವಾನಂದ್ ಮೇತ್ರೆ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಇರುವುದರಿಂದ ಅತ್ಯಂತ ಸರಳ ಜಯಂತೋತ್ಸವ ಆಚರಣೆ ಮಾಡೋಣ ಎಂದು ಹೇಳಿದರು. ಈ ವೇಳೆಯಲ್ಲಿ ಸಿದ್ಧರಾಮ ನಾಚವರ,ವಿಜಯಕುಮಾರ್, ವೈ ಎಲ್ ಹಂಪಣ್ಣ, ಡಾ. ಸಂಜೀವಕುಮಾರ, ಶಿವಶಂಕರಯ್ಯ ಸ್ವಾಮಿ, ಮಾರುತಿ ಹುಜುರಾತಿ, ಜೈ ಭೀಮ್ ಊಡಗಿ,ಬಸವರಾಜ ಕಾಳಗಿ,ಶಿವಕುಮಾರ್ ತೋಟನಳ್ಳಿ, ಜಗನ್ನಾಥ್ ಬಿಜನಳ್ಳಿ, ದೇವಿಂದ್ರಪ್ಪ ಹೆಗ್ಡೆ, ಭೀಮರಾವ್ ಕಟ್ಟಿಮನಿ, ಲೋಕೇಶ್ ಹಂದರಕಿ, ಮಹಾವೀರ ಅಳೋಳ್ಳಿ, ಸಿದ್ದು ಊಡಗಿ, ವಿಲಾಸ ಗೌತಮ್ ನಿಡುಗುಂದಾ, ಮಾರುತಿ, ಸೇರಿದಂತೆ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಮಹಾನ್ ಪುರುಷರ ಜಯಂತೋತ್ಸವ ಸಮಾಜಕ್ಕೆ ಸಿಮೀತ ವಾಗುವುದನ್ನು ತಾಲೂಕ ಆಡಳಿತ ತಡೆಯಬೇಕು ಅದರ ಜೊತೆಗೆ ಎಲ್ಲಾ ಸಮಾಜದ ಮುಖಂಡರು ಸಂಘ-ಸಂಸ್ಥೆಯವರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಜಯಂತೋತ್ಸವ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕಿದೆ ತಾಲೂಕ ಆಡಳಿತ
ಜೈ ಭೀಮ್ ಊಡಗಿ
ಸಮಾಜದ ಮುಖಂಡರು ಸೇಡಂ