ಕುಡಿವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ
ಆಲಮೇಲ:ಮಾ.28: ಬೇಸಿಗೆ ಮುಗಿಯೋವರೆಗೂ ಕುಡಿಯುವ ನೀರಿನ ಸಮಸ್ಯೆ ಮತಕ್ಷೇತ್ರದಲ್ಲಿ ಎಲ್ಲಿಯೂ ಆಗದಂತೆ ಸ್ಥಳಿಯ ಆಡಳಿತವು ಕ್ರಮವಹಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ವಿನಾಯಕ ನಗರದ ಬಡಾವಣೆಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು
ಟಾಸ್ಕ್‍ಪ್ರೋಸ್ ಯೋಜನೆಯಲ್ಲಿ ಪಟ್ಟಣದ ವಿನಾಯಕ ನಗರ, ಬಸವ ನಗರಕ್ಕೆ ಸಮರ್ಪಕವಾಗಿ ನೀರು ಬಿಡಲಾಗುತ್ತಿದ್ದು ಎಲ್ಲಿಯು ಕುಡಿಯುವ ನೀರಿಗೆ ಜನ ಜಾನುವಾರುಗಳಿಗೆ ತೊಂದರೆಯಾಗಂದತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತದೆ ಒಟ್ಟು ಮೂರು ಕೋಳವೆ ಬಾವಿಗಳನ್ನು ಕೊರೆಯಾಲಾಗಿದ್ದು ಪೈಪಲೈನ್ ಮಾಡುವ ಮೂಲಕ ಮನೆ ಮನೆಗೆ ನೀರು ಹರಿಸಲಾಗುವದು ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಇನ್ನೂ 6 ತಿಂಗಳಲ್ಲಿ ಸಂಪೂರ್ಣವಾಗಿ ಕಾಮಗಾರಿ ಮುಕ್ತಾಯಗೊಂಡು ದಿನದ 24 ಗಂಟೆಯು ನೀರು ಹರಿಸಲಾಗುವದು ಎಂದರು
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಅಶೋಕ ಕೋಳಾರಿ ಬಸವರಾಜ ತೆಲ್ಲೂರ ಪ್ರಭು ವಾಲಿಕಾರ ಯುವ ಮುಖಂಡ ಶಶೀಧರ ಗಣಿಯಾರ ಹಣಮಂತ ರಜಪೂತ ಮುತ್ತು ಉಪ್ಪಾರ ಶಂಕರ ಕಾಳೆ ಶಿವು ದೇವಕತೆ ಪ್ರಶಾಂತ ನಾಶಿ ಸುನಿಲ ತೆಲ್ಲೂರ ಯುವರಾಜ ರಜಪುತ ಇದ್ದರು.