ಗಮಕ ಕಲಾಪರಿಷತ್ತಿಗೆ ಮೊಹರೀರ್ ನೇಮಕ
ಕಲಬುರಗಿ:ಮಾ.28: ಹಿರಿಯ ಲೇಖಕ, ಸಂಸ್ಕøತಿ ಚಿಂತಕ ಡಾ. ಲಕ್ಷ್ಮೀಕಾಂತ ಮೊಹರೀರ್ ಅವರು ಕರ್ನಾಟಕ ಗಮಕ ಕಲಾ ಪರಿಷತ್ತಿನ ಸಂಘ-ಸಂಸ್ಥೆಗಳ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ.
ಪರಿಷತ್ತಿನ ಅಧ್ಯಕ್ಷ ಡಾ. ಎ.ವಿ. ಪ್ರಸನ್ನ ಅವರು ಈ ನೇಮಕ ಮಾಡಿದ್ದು, ಕೂಡಲೇ ಹೊಣೆಗಾರಿಕೆ ವಹಿಸಿಕೊಂಡು ಚಟುವಟಿಕೆಗಳನ್ನು ಪ್ರಾರಂಭಿಸಬೇಕೆಂದು ಸೂಚಿಸಿದ್ದಾರೆ. ಮೊಹರೀರ್ ಅವರಿಗೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ಕಾರ್ಯವ್ಯಾಪ್ತಿಯ ಹೊಣೆಗಾರಿಕೆ ವಹಿಸಲಾಗಿದೆ.
ಡಾ. ಲಕ್ಷ್ಮೀಕಾಂತ ಮೊಹರೀರ್ ಅವರು ಸಂಸ್ಕೃತ ಪ್ರಾಧ್ಯಾಪಕರಾಗಿ ವಿವಿಧ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ದಾಸಸಾಹಿತ್ಯ ಕ್ಷೇತ್ರದಲ್ಲೂ ಸಾಕಷ್ಟು ಕೃಷಿ ಮಾಡಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.