“ವಿಶ್ವ ಜಲ ದಿನಾಚರಣೆ” ಕುರಿತು ಕಾನೂನು ಅರಿವು ಮತ್ತು ನೆರವು
ಬೀದರ:ಮಾ.28: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಬೀದರ. ಜಿಲ್ಲಾ ವಕೀಲರ ಸಂಘ, ಬೀದರ. ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ವಿಭಾಗಬೀದರ. ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಜಲ ದಿನಾಚರಣೆ” ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಮಹಾದೇವ ಕಲ್ಯಾಣ ಮಂಟಪ ಅಷ್ಟೂರ. ನಲ್ಲಿ ನಡೆಸಲಾಯಿತ್ತು.
“ವಿಶ್ವ ಜಲ ದಿನಾಚರಣೆ” ಕುರಿತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೀದರ. ಶ್ರೀಯುತ ಎಸ್.ಕೆ. ಕನಕಟ್ಟೆ. ರವರು ಸಸಿಗೆ ನೀರು ಎರೆವುದರ ಮೂಲಕ ಉದ್ಛಾಟಿಸಿ ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸವಲತ್ತುಗಳ ಬಗ್ಗೆ ಮಾತನಾಡಿದ್ದರು.
ಉಪನ್ಯಾಸಕರಾಗಿ ಶ್ರೀಯುತ ಬಿ.ಎಸ್. ಪಾಟೀಲ, ಹಿರಿಯ ವಕೀಲರು ಬೀದರ, ರವರು ನೀರಿನ ಬಳಕೆ ಮತ್ತು ನೀರಿನ ಉಳಿಕೆ ಬಗ್ಗೆ ತಿಳಿಸಿದ್ದರು.
ಕಾರ್ಯಕ್ರಮದಲ್ಲಿ ಶ್ರೀಯುತ ಶ್ರೀಯುತ ಗೌತಮ್ ಅರಳಿ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಬೀದರ. ಅಧ್ಯಕ್ಷತೆ ಮಾತನಾಡಿದ್ದರು. ಹಾಗೂ ಶ್ರೀಯುತ ಬಸವರಾಜ ಸ್ವಾಮಿ ನಿರುಪಣೆ ಮಾಡಿದರು. ಹಾಗೂ ಶ್ರೀಯುತ ಬಸವರಾಜ ಪಾಟೀಲ ಸಾಹಯಕ ಅಭಿಯಂತಕರು ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಉಪವಿಭಾಗ ಬೀದರ. ಹಾಗೂ ಶ್ರೀಯುತ ವಿಜಯಕುಮಾರ ಪಾಟೀಲ ಪಂಚಾಯತ ಅಭಿವೃಧಿ ಅಧಿಕಾರಿಗಳು ಅಷ್ಟೂರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಯಾದ ಶ್ರೀ ಆಕಾಶ ಸಜ್ಜನ ಹಾಗೂ ಅಷ್ಟೂರ ಊರಿನ ಗ್ರಾಮಸ್ತರು ಹಾಗೂ ಪಂಚಾಯತ ಸಿಬ್ಬಂದಿ ವರ್ಗದವರು ಹಾಜರಿದ್ದರು.