ಜಾತಿ ನಿಂದನೆ ಹಿನ್ನೆಲೆ ಬಹಿರಂಗ ಕ್ಷಮೆ ಯಾಚನೆ:ನನಗೆ ಬಂಜಾರಾ ಸಮಾಜದ ಕುರಿತು ಅಪಾರ ಗೌರವ ಇದೆ: ತುಕಾರಾಮಗೌಡ ಪಾಟೀಲ
ಅಫಜಲಪುರ: ಮಾ.28:ಇತ್ತೀಚೆಗೆ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಶಿವಕುಮಾರ ನಾಟೀಕಾರ ನೇತೃತ್ವದಲ್ಲಿ ಭೀಮಾ ನದಿಗೆ ನೀರು ಹರಿಸಲು ಒತ್ತಾಯಿಸಿ ಹಮ್ಮಿಕೊಂಡ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲಿಸಿ ಮಾತನಾಡುವ ಭರದಲ್ಲಿ ಜಿ.ಪಂ ಮಾಜಿ ಸದಸ್ಯ ತುಕಾರಾಮಗೌಡ ಪಾಟೀಲ ಭಾಸಗಿ ಅವರು ಬಂಜಾರಾ ಸಮಾಜಕ್ಕೆ ಅವಹೇಳನ ಪದ ಬಳಕೆ ಮಾಡಿದ ಹಿನ್ನೆಲೆ ಸಮಾಜದ ಮುಖಂಡರು ಬಹಿರಂಗ ಕ್ಷಮೆ ಯಾಚನೆಗೆ ಪಟ್ಟು ಹಿಡಿದಿದ್ದರು.
ಈ ಹಿನ್ನೆಲೆ ಬುಧವಾರದಂದು ಪಟ್ಟಣದ ಹೊರವಲಯದಲ್ಲಿರುವ ಸರಸಂಬಾ ಕಲ್ಯಾಣ ಮಂಟಪದಲ್ಲಿ ಬಂಜಾರ ಸಮಾಜದ ಮುಖಂಡರ ಸಮ್ಮುಖದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತುಕಾರಾಮಗೌಡ ಪಾಟೀಲ್ ಅವರು ಬಹಿರಂಗವಾಗಿ ಕ್ಷಮೆಯಾಚಿಸಿ ಮಾತನಾಡಿದರು. ನನಗೆ ಬಂಜಾರಾ ಸಮುದಾಯದ ಬಗ್ಗೆ ಅಪಾರವಾದ ಗೌರವವಿದೆ. ನಾನು ಎಲ್ಲ ಸಮಾಜದೊಂದಿಗೆ ಸಹೋದರ ಮನೋಭಾವನೆ ಹೊಂದಿದ ವ್ಯಕ್ತಿಯಾಗಿದ್ದೇನೆ. ನನ್ನ ಹೇಳಿಕೆಯಿಂದ ನಿಮಗೆ ನೋವುಂಟು ಆಗಿದ್ದರೆ ವಿಷಾದವಿರಲಿ. ನಾನು ಹೇಳಿರುವ ಹೇಳಿಕೆಯನ್ನು ಹಿಂಪಡೆದು ಎಲ್ಲರಲ್ಲೂ ಕ್ಷಮೆ ಯಾಚಿಸುತ್ತೇನೆ ಎಂದು ತಪೆÇ್ಪಪ್ಪಿಕೊಂಡರು.
ಬಂಜಾರಾ ಸಮುದಾಯದ ಮುಖಂಡರಾದ ಅಪ್ಪು ರಾಠೋಡ ಹಾಗೂ ಮನೋಹರ ರಾಠೋಡ ಮಾತನಾಡಿ, ಹಿರಿಯರಾದ ತುಕಾರಾಮಗೌಡ ಪಾಟೀಲ್ ಅವರ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಆದರೆ ಅವರು ಮಾತನಾಡುವ ಆವೇಶದಲ್ಲಿ ಯಾವುದೇ ಜಾತಿ ಜನಾಂಗದ ಧರ್ಮದವರಿಗೆ ನೋವುಂಟು ಆಗದಂತೆ ಮಾತನಾಡಬೇಕು. ಹೀಗಾಗಿ ಇನ್ನು ಮುಂದೆ ಅವರು ಎಲ್ಲಿಯೂ ಸಹ ಇಂತಹ ಅವಹೇಳನ ಪದಗಳನ್ನು ಬಳಕೆ ಮಾಡದೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಹಾಂತೇಶ ಬಳೂಂಡಗಿ, ವಿನೋದ ರಾಠೋಡ,
ದತ್ತು ಪವಾರ, ನಾಥುರಾಮ ರಾಠೋಡ, ರಾಕೇಶ ರಾಠೋಡ, ತಾರಾಸಿಂಗ್ ರಾಠೋಡ, ಆನಂದ ರಾಠೋಡ, ಗಿಡ್ಡು ರಾಠೋಡ, ಪುನ್ನು ಪವಾರ, ಕಾಂತು ಪವಾರ, ಕೇಸು ಜಾಧವ, ರವಿ ರಾಠೋಡ, ಶಶಿಕಾಂತ ರಾಠೋಡ, ರಾಮು ರಾಠೋಡ, ಉಮೇಶ ರಾಠೋಡ, ಶಿವು ರಾಠೋಡ, ಹರೀಶ ರಾಠೋಡ, ವಿನೋದ ಚವಾಣ, ರಾಜು ಚವಾಣ, ಸಂತೋಷ ಚವಾಣ, ಅಪ್ಪು ಕಾಶು ಸೇರಿದಂತೆ ಅನೇಕರಿದ್ದರು.