ಡಾ. ಪಿ. ವಿಠ್ಠಲ ರಡ್ಡಿಯವರಿಗೆ – ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಬೀದರ :ಮಾ.28: ನಗರದ ಪ್ರತಿಷ್ಠಿತ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರಿಗೆ ಅವರ ಸೇವಾ ನಿಷ್ಠತೆ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ, ಸುಸಂಸ್ಕøತ ಸಮಾಜವನ್ನು ರೂಪಿಸುವಲ್ಲಿ ಹಾಗೂ ಅವರ ಶೈಕ್ಷಣಿಕ ವೃತ್ತಿ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿನ ಸಾಧನೆ ಗುರುತಿಸಿ ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ (ರಿ) ಬೆಂಗಳೂರು (ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ನೌಕರರ) ಹಮ್ಮಿಕೊಂಡ ಸಾಧಕ ಶಿಕ್ಷಕರುಗಳಿಗೆ ಶ್ರೀ ಷ.ಬ್ರ. ಡಾ. ಒಡೆಯರ್ ಚೆನ್ನಮಲ್ಲಿಕಾರ್ಜುನ ಶಿವಚಾರ್ಯ ಮಹಾಸ್ವಾಮಿಜೀ, ಶ್ರೀ ಕ್ಷೇತ್ರ ಹಿರೇ ಕಲಮಠ, ಹನ್ನಾಳಿಯವರ ಸಾನಿಧ್ಯದಲ್ಲಿ ಡಾ. ಪಿ. ವಿಠ್ಠಲ ರಡ್ಡಿಯವರಿಗೆ – ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗಿದೆ ಎಂದು ಮಹಾವಿದ್ಯಾಲಯದ ಸಿಬ್ಬಂದಿ ಕಾರ್ಯದರ್ಶಿಗಳಾದ ಡಾ. ಮಲ್ಲಿಕಾರ್ಜುನ ಕೋಟೆಯವರು ತಿಳಿಸಿದರು.