ವೀ.ವಿ.ಸಂಘದ ನೂತನ ಅಧ್ಯಕ್ಷರಿಗೆ ಜನತಾ ಬಜಾರ್ ಅಧ್ಯಕ್ಷರಿಂದ ಗೌರವ ಸನ್ಮಾನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.28: ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಅಧ್ಯಕ್ಷರಾಗಿ ಎರಡನೇ ಬಾರಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಅಲ್ಲಂ ಗುರುಬಸವರಾಜ್ ಅವರಿಗೆ. ಅವರ ನಿವಾಸದಲ್ಲಿ ನಗರದ ಜನತಾ ಬಜಾರ್ ನ ಅಧ್ಯಕ್ಷ ಜಿ.ನೀಲಕಂಠಪ್ಪ ಮತ್ತವರ ಮಕ್ಕಳು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದ್ದಾರೆ.
ನಿಮ್ಮ ಆಡಳಿತ ಅವಧಿಯಲ್ಲಿ ಸಂಘದ ಕಾರ್ಯಚಟುವಟಿಕೆಗಳು ಮತ್ತಷ್ಟು ಉತ್ತಮಗೊಂಡು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.