ಗುಡಿ ಗುಂಡಾರ ಬಿಡಿಕೆರೆ ಸಂರಕ್ಷಣೆ ಮಾಡಿ: ಶಾಂತಕುಮಾರ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.28: ಗುಡಿ ಗುಂಡಾರಗಳನ್ನು ನಿರ್ಮಿಸುವ ಬದಲು, ರೈತರು ತಮ್ಮ‌ ತಮ್ಮ ಭಾಗದ ಕೆರೆಗಳನ್ನು ಸಂರಕ್ಷಿಸಿಕೊಳ್ಳುವ ಕಾರ್ಯ ಆಗಬೇಕು ಎಂದು  ರಾಜ್ಯ ರೈತ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಅವರಿಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು. ಸ್ಟಾಲಿನ ಸ್ನೇಹಕ್ಕೋಸ್ಕರವ ಕಾವೇರಿಯ ನೀರನ್ನು ತಮಿಳುನಾಡಿಗೆ ಬಿಟ್ಟು ಈಗ ಬೆಂಗಳೂರಿನಲ್ಲಿ ನೀರಿನ ಸಂಕಷ್ಟ ಎದುರಿಸ ಬೇಕಾಗಿದೆ ಇದನ್ನು ಜನತೆ ಅರಿತು ಮತ ಕೇಳಲು ಬರುವವರಿಗೆ ಚೀಮಾರಿ ಹಾಕಿ ಎಂದಿದ್ದಾರೆ.
ಚುನಾಣೆಯಲ್ಲಿ ಅಭ್ಯರ್ಥಿಗಳು ಯಾರೂ ಸರಿ ಇಲ್ಲ ಎಂದಾದರೆ ನೋಟಾಗೆ ಮತ ಹಾಕಿ ಎಂದಿದ್ದಾರೆ. ಅದರಿಂದ ಆಗುವ ಪರಿಣಾಮ ಏನೆಂಬ ಕಾಯ್ದೆ ರೂಪುಗೊಳ್ಳಬೇಕು ಎಂದರು.
ರಾಜ್ಯದ ಬರ ಪರಿಹಾರ ಎಲ್ಲರಿಗೂ ದೊರೆತಿಲ್ಲ. ಜನುವಾರುಗಳಿಗೆ ಮೇವಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ವಿದ್ಯುತ್ ಸರಬರಾಜು ಸಮರ್ಪಕವಾಗಿ ಇಲ್ಲ. ಅಂತರ್ಜಲ ಕುಸಿದಿದೆ. ರೈತರು ವಲಸೆ ಹೋಗಬೇಕಾದ ಪರಿಸ್ಥಿತಿ ಇದೆ.
ಜನಪ್ರತಿನಿಧಿಗಳು, ಅಧೊಕಾರಿಗಳು  ಚುನಾವಣಾ ಗುಂಗಿನಲ್ಲಿ ಮುಳುಗಿದ್ದಾರೆ. ಜೊತೆಗೆ ಬ್ಯಾಂಕಿನವರು ಸಾಲ‌ವಸೂಲಾತಿಯಲ್ಲಿ ತೊಡಗಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಜಾರಿಯಾಗಿಲ್ಲ. ಅದಕ್ಕಾಗಿ ಚುನಾವಣೆಗೆ ಬರುವ ಜನಪ್ರತಿನಿಗಳಿಗೆ ಮತ್ತು ಅಧಿಕಾರಿಗಳಿಗೆ ಚೀಮಾರಿ ಹಾಕಿ ಎಂದು ಕರೆ ನೀಡುತ್ತಿದೆಂದರು.
ಸುದ್ದಿಗೋಷ್ಟಿಯಲ್ಲಿ ಲಕ್ಷ್ಮೀದೇವಿ, ರವಿಕುಮಾರ್ ದಾವಣಗೆರೆ, ದೇವಕುಮಾರ್, ಕೊಟ್ರೇಶ್ ಯಾದಗಿರಿ, ಹತ್ತಳ್ಳಿ ದೇವರಾಜ್ ಮೊದಲಾದವರು ಇದ್ದರು.