ಜೀವನ ಪರಿಪೂರ್ಣತೆಗಾಗಿ ಸಾಧನೆಗೈದು ಬದುಕು ಸಾರ್ಥಕಪಡಿಸಿಕೊಳ್ಳಿ: ನ್ಯಾಯಾಧೀಶರ ಈಶ್ವರ್ ಸಲಹೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.19- ಸಮಸ್ಯೆ, ಸಂಕಷ್ಟಗಳೇ ಆತ್ಮಹತ್ಯೆಗೆ ಪರಿಹಾರವಲ್ಲ. ಮನುಷ್ಯ ಜೀವನ ಪಕ್ವತೆ, ಪರಿಪೂರ್ಣತೆಗಾಗಿ ಸಾಧನೆಗೈದು ಬದುಕುಸಾರ್ಥಕಪಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್ ಅವರು ಸಲಹೆ ಮಾಡಿದರು.
ಚಾಮರಾಜನಗರ ವಿಶ್ವವಿದ್ಯಾನಿಲಯದ ಸುವರ್ಣ ಗಂಗೋತ್ರಿಯ ನಿಜಗುಣ ಸಭಾಂಗಣದಲ್ಲಿಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಸಮಸ್ಯೆ, ಸಂಕಷ್ಟಗಳು ಇದ್ದೇ ಇರುತ್ತವೆ. ಹಾಗಂತ ಯಾರೂ ಸಹ ಆತ್ಮಹತ್ಯೆಗೆ ಮುಂದಾಗ ಬಾರದು. ಕೌಟುಂಬಿಕ ಕಲಹ, ಪ್ರೀತಿ-ಪ್ರೇಮ, ರೈತರ ಸಾಲ ವಿಚಾರಗಳು ಆತ್ಮಹತ್ಯೆಗೆ ಪ್ರಚೋದಿಸಬಹುದು. ಇಂತಹ ಸಂದರ್ಭಗಳಲ್ಲಿ ನೊಂದವರಿಗೆ ಸಮಾಧಾನ, ಸಾಂತ್ವನಅವಶ್ಯವಾಗಿದೆ. ಮನುಷ್ಯನಜೀವನವು ಬಾಲ್ಯ,ಯೌವ್ವನ, ಮುಪ್ಪು ಈ ಮೂರು ಹಂತಗಳನ್ನು ಒಳಗೊಂಡಿದ್ದು, ಸ್ವಾಭಾವಿಕ ಸಾವು ಬರುವತನಕ ನಾವು ಬದುಕಲೇಬೇಕಾಗಿದೆ. ಈಸಬೇಕು, ಇದ್ದುಜಯಿಸಬೇಕುಎಂಬಂತೆಏನಾದರೂಸಾಧನೆಗೈದು ಪರಿಪೂರ್ಣಜೀವನ ನಮ್ಮದಾಗಿಸಿಕೊಳ್ಳಬೇಕು ಎಂದರು.
ಮನುಷ್ಯನಹುಟ್ಟುಆಕಸ್ಮಿಕ, ಸಾವು ಖಚಿತ, ಆತ್ಮಹತ್ಯೆ ಮಹಾಪಾಪ.ಜೀವನದಲ್ಲಿಎದುರಾಗುವ ಸಮಸ್ಯೆಗಳಿಗೆ ದೃತಿಗೆಡ ದೇಪರಿ ಹಾರೋಪಾಯ ಕಂಡುಕೊಳಬೇಕೇ ವಿನಹ ಆತ್ಮಹತ್ಯೆ ಮಾಡಿಕೊಳ್ಳಬಾರದು. ಮಾನಸಿಕ ಖಿನ್ನತೆಗೆ ಮನೋವೈದ್ಯರನ್ನು ಸಂಪರ್ಕಿಸಿ ಅಗತ್ಯಸಲಹೆ ಪಡೆದುಕೊಂಡು ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬೇಕು. ಪ್ರಕೃತಿ ವಿರುದ್ಧವಾಗಿಯಾರು ಹೋಗಬಾರದು. ಸ್ವಾಭಾವಿಕ, ಸಹಜ ಹಾಗೂ ಸರಳ ಜೀವನ ರೂಢಿಸಿಕೊಳ್ಳಬೇಕು ಎಂದು ನ್ಯಾಯಾಧೀಶರಾದ ಈಶ್ವರ್‍ಅವರು ತಿಳಿಸಿದರು.
ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ. ಬಿ.ಟಿ.ಕವಿತಾಅವರು ಮಾತನಾಡಿಭೂಮಿಯ ಮೇಲಿನ ಒಂದೇಜನ್ಮ ನಮ್ಮದಾಗಿದೆ.ಯಾರೂ ಸಹ ಆತ್ಮಹತ್ಯೆಗೆ ಮುಂದಾಗಬಾರದು. ಮಾನಸಿಕ ಆರೋಗ್ಯದಬಗ್ಗೆ ಪ್ರತಿಯೊಬ್ಬರಿಗೂಜಾಗೃತಿ ಮೂಡಿಸಬೇಕು. ವೈದ್ಯರಿಂದ, ಸ್ನೇಹಿತರಿಂದ ಮಾನಸಿಕ ಖಿನ್ನತೆಗೆಸಲಹೆ ಪಡೆದುಆತ್ಮಹತ್ಯೆ ಮಾನೋಭಾವದಿಂದ ಹೊರಬರಬೇಕು. ಜೀವನ ಪ್ರೀತಿ ರೂಪಿಸಿಕೊಳ್ಳಬೇಕು. ಒತ್ತಡಜೀವನ ಶೈಲಿ ಆರೋಗ್ಯದ ಮೇಲೆ ದುಷ್ಪರಿಣಾಮಬೀರುತ್ತಿದೆ. ಸರಳ ಬದುಕು ಕಟ್ಟಿಕೊಳ್ಳಬೇಕು. ಬದುಕನ್ನು ಅರ್ಥಪೂರ್ಣ ಮಾಡಿಕೊಳ್ಳಬೇಕು. ದೈಹಿಕ, ಮಾನಸಿಕ ಸದೃಢತೆ ಹೊಂದಬೇಕು ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಚಂದ್ರಶೇಖರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿಸಾವು ಸ್ವಾಭಾವಿಕವಾಗಿರಬೇಕು. ಜೀವನದ ಜಿಗುಪ್ಸೆಯಿಂದ ಮಾಡಿಕೊಳ್ಳುವುದೇ ಆತ್ಮಹತ್ಯೆಯಾಗಿದೆ. ಯುವಕರು ಹೆಚ್ಚಾಗಿ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಪ್ರತಿ ವರ್ಷ 7 ಲಕ್ಷ ಆತ್ಮಹತ್ಯೆ ಸಂಭವಿಸುತ್ತಿದ್ದು,ಕೋವಿಡ್ ಬಳಿಕ ಇದುಇನ್ನೂ ಹೆಚ್ಚಾಗಿದೆ. ಪ್ರತಿ 40 ಸೆಕೆಂಡ್‍ಗೆ 1 ಆತ್ಮಹತ್ಯೆ ಪ್ರಕರಣ ದಾಖಲಾಗುತ್ತಿದೆ. ಆತ್ಮಹತ್ಯೆಯನ್ನು ಪರಿಣಾಮಕಾರಿಯಾಗಿ ತಡೆಯಲು ಪ್ರತಿ ತಾಲೂಕಿನಲ್ಲಿ ಮನೋಚೈತನ್ಯ ಕ್ಲಿನಿಕ್ ತೆರೆದುಮಾನಸಿಕ ಖಿನ್ನತೆಗೆ ಒಳಗಾದವರಿಗೆ ಮಾನಸಿಕ ಸ್ಥೈರ್ಯ ತುಂಬಲಾಗುತ್ತಿದೆ. ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮನೋರೋಗತಜ್ಞರಾದಡಾ. ಎಂ.ಎನ್. ರಾಜೇಶ್‍ಅವರುಆತ್ಮಹತ್ಯೆಕುರಿತು ಸವಿವರವಾಗಿ ಮಾತನಾಡಿದರು.
ಇದೇ ವೇಳೆ ಚಾಮರಾಜನಗರವಿಶ್ವವಿದ್ಯಾನಿಲಯಕುಲಪತಿಗಳಾದ ಪೆÇ್ರ. ಎಂ.ಆರ್. ಗಂಗಾಧರ್‍ಅವರುಆತ್ಮಹತ್ಯೆತಡೆಕುರಿತ ಪ್ರತಿಜ್ಞಾ ವಿಧಿ ಬೋಧಿಸಿದರು.ತಾಲೂಕುಆರೋಗ್ಯಅಧಿಕಾರಿಡಾ. ಶ್ರೀನಿವಾಸ್, ಜಿಲ್ಲಾಆರೋಗ್ಯ ಶಿಕ್ಷಣ ಅಧಿಕಾರಿದೊರೆಸ್ವಾಮಿ ನಾಯಕ್,ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.