ವಿಮೋಚನೆ ಹಿಂದೆ ಮಹತ್ವದ ಅಂಶಗಳಿವೆ:ಲಕ್ಷö್ಮಣ
ಸೈದಾಪುರ:ಸೆ.೧೯:ಕಲ್ಯಾಣ ಕರ್ನಾಟಕ ವಿಮೋಚನೆ ಹಿಂದೆ ಮಹತ್ವದ ಅಂಶಗಳಿವೆ. ಸಂವಿಧಾನಾತ್ಮಕ ಅಂಶಗಳು ಹಾಗೂ ದೇಶದಲ್ಲಿನ ಬಲಿಷ್ಠ ನಾಯಕರ ವ್ಯಕ್ತಿತ್ವ, ಸ್ಥಳೀಯ ನಾಯಕರ ಹೋರಾಟದ ಫಲವಾಗಿ ಈ ಭಾಗ ದೇಶದಲ್ಲಿ ವಿಲೀನಗೊಳ್ಳಲು ಸಾಧ್ಯವಾಯಿತು ಎಂಬುವುದರ ಮಹತ್ವ ತಿಳಿಯುತ್ತದೆ ಎಂದು ಸಂಪನ್ಮೂಲ ವ್ಯಕ್ತಿ ಲಕ್ಷö್ಮಣ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನಲ್ಲಿ ಅಜೀಂ ಪ್ರೇಮಜಿ ಫೌಂಡೇಶನ ವತಿಯಿಂದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಾಗೂ ಸಂವಿಧಾನಿಕ ಆಡಳಿತದ ಮಹತ್ವ ಕುರಿತು ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಷ್ಟçದ ಏಕೀಕರಣದಲ್ಲಿ ವಲ್ಲಭಬಾಯಿ ಪಟೇಲರ ಗಟ್ಟಿ ನಿರ್ಧಾರಗಳು ಇವತ್ತು ಬಲಿಷ್ಠ ದೇಶವನ್ನು ಕಾಣುವಂತಾಗಿದೆ. ಹೈದರಾಬಾದ ನಿಜಾಮನ ಆಳ್ವಿಕೆಯಿಂದ ಈ ಭಾಗ ಸ್ವಾಂತAತ್ರö್ಯ ಪಡೆದುಕೊಂಡು ಪ್ರಜಾಸತತ್ಮಾಕ ಆಡಳಿತ ಕಂಡು ಕೊಳ್ಳುವಂತಾಗಿದೆ. ಈ ಭಾಗ ದೇಶದಲ್ಲಿ ವಿಲೀನಗೊಂಡಿರುವದರಿAದ ಹಿಂದೆ ರೋಚಕ ಐತಿಹಾಸಿಕ ಅಂಶಗಳಿವೆ. ಅವುಗಳ ಬಗಗೆ ಶಿಕ್ಷಕರಾಗುವ ನೀವು ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು. ನಮ್ಮದೆಯಾದ ಕೌಶಲ್ಯದೊಂದಿಗೆ ಈ ಭಾಗದ ಅಭಿವೃದ್ಧಿಗೆ ಪ್ರಯತ್ನ ಮಾಡಿದಾಗ ಮಾತ್ರ ನಮ್ಮ ಮಹತ್ವ ಹೆಚ್ಚಾಗುತ್ತದೆ ಎಂದು ಹೇಳಿದರು.
ಅಜೀಂ ಪ್ರೇಮಜಿ ಫೌಂಡೇಶನದಲ್ಲಿ ಸೃಜನಶೀಲ ಸಂಪನ್ಮೂಲ ವ್ಯಕ್ತಿಗಳಿದ್ದೂ ಶಿಕ್ಷಣದ ಕ್ಷೇತ್ರದಲ್ಲಿ ವಿನೂತನ ಕಾರ್ಯಗಳನ್ನು ಮಾಡುತ್ತಿದೆ. ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ತರಬೇತಿ ಶಿಕ್ಷಕರಿಗೆ ಚರ್ಚೆಯನ್ನು ಆಯೋಜನೆ ಮಾಡಿ ವಿಮೋಚನೆಯ ಅಂಶಗಳನ್ನು ತಿಳಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಮಕ್ಕಳ ಕಲಿಕೆಯಲ್ಲಿ ಅನುಕೂಲಿಸಲು ಪ್ರಶಿಕ್ಷಣಾರ್ಥಿಗಳಿಗೆ ನೆರವಾಗಲಿದೆ. ಇನ್ನೂ ಹೆಚ್ಚಿನ ಸೇವಾ ಮನೋಭಾನೆಯ ಕಾರ್ಯಗಳು ಇವರಿಂದಾಗಲಿ.
ಕರಬಸಯ್ಯ ದಂಡಿಗಿಮಠ ಪ್ರಾಂಶುಪಾಲರು ಡಿ.ಎಲ್.ಇಡಿ ಕಾಲೇಜು