ನೆಲ ಸಂಸ್ಕೃತಿಯ ನಾಟಕೋತ್ಸವ – ಸಾಧಕರಿಗೆ ಗದ್ದುಗೆ ಗೌರವ ಸಾಂಸ್ಕೃತಿಕ ಚಿಂತಕ ಲಕ್ಷ್ಮೀಪತಿಗೆ ನಾಟಕ ಆಕಾಡೆಮಿ ಪ್ರಶಸ್ತಿ
ಕೋಲಾರ,ಸೆ.೧೯- ಎರಡನೇ ದಿನದ ನಾಟಕೋತ್ಸವದಲ್ಲಿ ಮಾರನಾಯಕ ನಾಟಕ ಪ್ರದರ್ಶನ ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಹಾಗೂ ಆದಿಮ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಡಾ.ಸಿದ್ಧಲಿಂಗಯ್ಯನವರ ನೆನಪಿನ ನೆಲಸಂಸ್ಕೃತಿ ನಾಟಕೋತ್ಸವ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಗದ್ದುಗೆ ಗೌರವ, ನಾಟಕಗಳ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ನಡೆದವು ಎಂದು ತಿಳಿಸಿದರು
ಎರಡನೇ ದಿನ ಮುಂದುವರೆದು ವೇದಿಕೆ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕೋಲಾರದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ರಂಗಭೂಮಿಯನ್ನು ಪರಿಚಯಿಸುವ ಆಲೋಚನೆಯಲ್ಲಿ ನಮ್ಮ ವಿದ್ಯಾರ್ಥಿಗಳು ನಾಟಕ ಕಲಿತು ಪ್ರದರ್ಶನ ನೀಡುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.ನಿವೃತ್ತಿ ಪ್ರಾಧ್ಯಾಪಕ, ನಾಟಕಕಾರ ಡಾ.ರಾಜಪ್ಪ ದಳವಾಯಿ ಮಾತನಾಡಿ, ಆದಿಮಕ್ಕೂ ಅವರಿಗೂ ಇರುವ ನಂಟನ್ನು ವಿವರಿಸಿದ ಅವರು ರಂಗಭೂಮಿ ಬದುಕು ದಾರಿಯನ್ನು ತೋರಿಸುತ್ತದೆ ಎಂದರು.
ಆದಿಮ ನೆಲಕ್ಕೆ ಒಂದು ವಿಶೇಷ ಶಕ್ತಿ ಇದೆ. ನಾನು ಇಲ್ಲೇ ಉಳಿದು ರಚಿಸಿದ ಕನ್ನಡಸಾಹಿತ್ಯ ಕೋಶ ಉದ್ಯೋಗ ಮಾರ್ಗದರ್ಶನದ ಪುಸ್ತಕ ಅನೇಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದೆ. ಅವರು ಸಿಕ್ಕಿ ಮಾತನಾಡಿಸಿದಾಗ ಬಹಳ ಸಂತೋಷವಾಗುತ್ತದೆ. ಮುಂದುವರೆದು ಆದಿಮ ಕೇಂದ್ರ ಈಗ ರಂಗ ಶಿಕ್ಷಣ ಕೇಂದ್ರವೂ ಆಗಿದೆ. ಪೂರಕವಾಗಿ ಸಹಕರಿಸುತ್ತಿರುವ ವಿಶ್ವವಿದ್ಯಾಲಯದ ಕುಲಪತಿಗಳನ್ನು ಅಭಿನಂದಿಸಿದರು.
ಲಕ್ಷ್ಮೀಪತಿಗೆ ನಾಟಕ ಅಕಾಡೆಮಿ ಪ್ರಶಸ್ತಿ
ಇವತ್ತು ಗದ್ದುಗೆ ಗೌರವ ಸ್ವೀಕರಿಸಿದ ಸಂಸ್ಕೃತಿ ಚಿಂತಕ ಲಕ್ಷ್ಮೀಪತಿ ಕೋಲಾರ ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಕೊಟ್ಟಿರುವುದು ಅರ್ಥಪೂರ್ಣವಾಗಿದೆ. ಅವರು ನಿರಂತರ ಸಂಶೋಧನೆಯಲ್ಲಿ ತೊಡಗಿರುವ ನಿತ್ಯ ಸಂಶೋಧಕರು. ನಾಟಕಗಳ ಜೊತೆಗೆ ಪವರ್ ಪಾಯಿಂಟ್ ಪ್ರೋಗ್ರಾಮ್ ಅತ್ಯಂತ ಮಹತ್ವದ್ದಾಗಿದೆ. ಅವರಿಗೆ ಗದ್ದುಗೆ ಗೌರವ ನೀಡಿರುವುದು ಅತ್ಯಂತ ಸಂತಸ ತಂದಿದೆ ಎಂದರು.
ವೇದಿಕೆಯಲ್ಲಿ ಮಾಕಂಡೇಯ ಎಂ, ಅಮರೇಶ್ ಎಂ, ಕೆ.ಎಂ.ನೀಲಕಂಠೇಗೌಡ ಉಪಸ್ಥಿತರಿದ್ದರು. ಕಲಾವಿದ ಮುನಿರೆಡ್ಡಿ, ಡಿ.ಆರ್.ರಾಜಪ್ಪ ಹಾಗೂ ತಂಡ ತೆಲುಗು ಅನುವಾದ ಗೀತೆಗಳನ್ನು ಹಾಡಿದರು. ಆದಿಮ ಡೊಳ್ಳುಕುಣಿತ ತಂಡ ಡೊಳ್ಳು ಕುಣಿತ ನಡೆಸಿಕೊಟ್ಟರು. ಕಾರ್ಯಕ್ರಮ ನಿರ್ವಹಣೆ ಉಪನ್ಯಾಸಕರಾದ ಮುರಳಿ ನಡೆಸಿಕೊಟ್ಟರು, ಕಲಾವಿದ ಕಾಳಿದಾಸ್ ಸ್ವಾಗತಿಸಿದರು, ನಾಯಕ್ ಅಮಾಸ ವಂದಿಸಿದರು.
ಡಾ.ಹೆಚ್.ಎಸ್.ಶಿವಪ್ರಕಾಶ್ ರಚನೆಯ ಮಾರನಾಯಕ ನಾಟಕ. ಅವರ ಉತ್ತಮ ನಾಟಕಗಳಲ್ಲಿ ಒಂದು. ನಾಟಕದಲ್ಲಿನ ಪಾತ್ರಗಳು ವಿಶಿಷ್ಟ ಭಾಷೆ, ಸಂಸ್ಕೃತಿ, ಜನಪದ ಪರಂಪರೆಯನ್ನು ಹೋಲುವಂಥವು. ಅಂತಹ ಪಾತ್ರಗಳನ್ನು ಅಭಿನಯಿಸುವುದು ಹವ್ಯಾಸಿಕಲಾವಿದರಿಗೆ ಕಷ್ಟಸಾಧ್ಯ. ಅದರಲ್ಲೂ ಇದೇ ಮೊದಲು ನಾಟಕ ಮಾಡಿರುವ ವಿದ್ಯಾರ್ಥಿಗಳು ಆಯಾ ಪಾತ್ರಗಳಿಗೆ ನ್ಯಾಯ ಒದಗಿಸಿ ಅಭಿನಯಿಸಿರುವುದು ಅವರಲ್ಲಿನ ಉತ್ಸಾಹ, ಅಭಿರುಚಿ ತೋರಿಸುತ್ತದೆ.
ಸಂಗೀತ; ಅನುಷ ಶೆಟ್ಟಿ ಮತ್ತು ಮುನ್ನ. ನಿರ್ದೇಶನ ಹಾಗೂ ವಿನ್ಯಾಸ ಚಾಂದಿನಿ.ಪಿ. ಕಲಾವಿದ ಕಾಳಿದಾಸ್ ನಾಟಕ ತಂಡಕ್ಕೆ ಅಭಿನಂದನೆಗಳನ್ನು ಹೇಳಿದರು.