ಮಾಜಿ ಸಚಿವ ಶ್ರೀನಿವಾಸಗೌಡರಿಗೆ ಸನ್ಮಾನ
ಕೋಲಾರ,ಸೆ,೧೯- ಸಹಕಾರ ಸಂಘಗಳು ರಾಜಕೀಯ ಹಸ್ತ ಕ್ಷೇಪದಿಂದ ದೂರ ಇದ್ದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ, ರಾಜಕೀಯವನ್ನು ಬದಿಗಿಟ್ಟು ಆಡಳಿತ ಮಂಡಳಿಯವರು ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡಾಗ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯ ಎಂದು ಇಫ್ಕೋ ಸಂಸ್ಥೆ ನಿರ್ದೇಶಕ ಹಾಗೂ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ತಿಳಿಸಿದರು.
ತಾಲೂಕಿನ ಕಡಗಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂದಿಂದ ಬುಧವಾರ ಹಮ್ಮಿಕೊಂಡಿದ್ದ ೨೦೨೩&೨೦೨೪ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಬೆಳ್ಳಿ ಕಿರೀಟ ತೊಡಿಸಿ ಸಂಘದ ಆಡಳಿತ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಸಹಕಾರ ಸಂಘಗಳಿಂದ ರೈತರ, ಮಹಿಳೆಯರ ಸಬಲೀಕರಣ ಆಗುತ್ತದೆ ಎಂಬುದಕ್ಕೆ ಕೋಲಾರ ಜಿಲ್ಲೆಯು ನಿದರ್ಶನವಾಗಿದೆ. ಆಡಳಿತ ಮಂಡಳಿ ಅವಧಿ ಮುಗಿದ ನಂತರ ಡಿಸಿಸಿ ಬ್ಯಾಂಕಿನಿಂದ ಸಾಲ ವಿತರಣೆ ಆಗುತ್ತಿಲ್ಲ ಎಂಬುದು ಗಮನಕ್ಕೆ ಬಂದಿದ್ದೆ. ಸರ್ಕಾರ ಕೂಡಲೇ ಚುನಾವಣೆ ನಡೆಸಿ ರೈತರಿಗೆ, ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಸಂದ ಅಧ್ಯಕ್ಷ ಕೆ.ವಿ.ದಯಾನಂದ್ ಮಾತನಾಡಿ, ತಂದೆ,ತಾಯಿ ಜಗಳದಲ್ಲಿ ಕುಸು ಬಡವಾಯಿತು ಎಂಬತಾಗಿದೆ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಪರಿಸ್ಥಿತಿ. ಆಡಳಿತ ಮಂಡಳಿಯ ಅವಧಿ ಮುಗಿದ ನಂತರ ಸರ್ಕಾರವು ಸಕಾಲಕ್ಕೆ ಚುನಾವಣೆ ನಡೆಸದೆ ಇರುವುದರಿಂದ ರೈತರು, ಮಹಿಳೆಯರು ಸಾಲ ಸೌಲಭ್ಯಗಳಿಂದ ವಂಚನೆಗೆ ಒಗಾಗುವಂತೆಗಾಗಿದೆ ಎಂದು ಕಿಡಿಕಾರಿದರು.
ಒಂದು ಕಾಲದಲ್ಲಿ ಬ್ಯಾಂಕಿನಿಂದ ಲಾಭ ಪಡೆದುಕೊಂಡ ಕೆಲ ರಾಜಕೀಯ ನಾಯಕರು ಈಗ ಚುನಾವಣೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಸಾರ್ವಜನಿಕರ ಸಂಸ್ಥೆಯನ್ನು ಪ್ರತಿಷ್ಠೆಗೆ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಮಹಿಳೆಯರ, ರೈತರ ಶಾಪತಟ್ಟುತ್ತದೆ ಎಂದರು.
ಸಂಘದ ವ್ಯಾಪ್ತಿಗೆ ೧೮ ಹಳ್ಳಿಗಳು ಒಳಪಡುತ್ತವೆ, ೩ ಸಾವಿರ ಷೇರುದಾರರಿದ್ದು, ಒಂದು ವರ್ಷದಲ್ಲಿ ೧೬ ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುವ ಮೂಲಕ, ನಿವ್ವಳ ಲಾಭ ೨೬ ಲಕ್ಷ ಲಾಭಗಳಿಸಿದೆ. ಜತೆಗೆ ಕುರಗಲ್ ಮತ್ತು ಚನ್ನಸಂದ್ರದಲ್ಲಿ ಗೋದಾಮು ನಿರ್ಮಾಣ ಮಾಡಲಾಗಿದ್ದು, ಬ್ಯಾಂಕಿನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರು ಆರ್ಥಿಕ ನೆರವು ಕಲ್ಪಿಸಿದ್ದಾರೆ ಎಂದು ಸ್ಮರಿಸಿದರು.
ಸಾಲಕ್ಕಾಗಿ ಅರ್ಜಿ ಹಾಕಿದವರಿಗೆ ಸಕಾಲಕ್ಕೆ ಮಂಜೂರು ಮಾಡಿ ಕಷ್ಟಕ್ಕೆ ಸ್ಪಂದಿಸಲಾಗುತ್ತಿದೆ. ಇದರಿಂದಾಗಿ ಶೇ.೧೦೦ರಷ್ಟು ಮರುಪಾವತಿ ಆಗುತ್ತಿದ್ದು ಸೋಸೈಟಿ ವ್ಯಾಪ್ತಿಯ ಮಹಿಳೆಯರು, ರೈತರ ನಂಬಿಕೆ ಉಳಿಸಿಕೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಅವರಿಗೆ ಸೊಸೈಟಿಯಿಂದ ಬೆಳ್ಳಿ ಕಿರೀಟ ತೊqಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಡೇವಿಡ್, ನಿರ್ದೇಶಕರಾದ ರಾಜಣ್ಣ, ವೆಂಕಟೇಶ್, ಮುನಿರಾಜು, ರಾಮಾಂಜಿನೇಯ, ಅಂಬರೀಶ್, ಚೌಡರೆಡ್ಡಿ, ಮಂಜುನಾಥ್, ಸುಬ್ರಮಣಿ, ವಿಜಯಮ್ಮ, ಸಿಇಒ ಮುನೀಶ್ವರಪ್ಪ, ಸಿಬ್ಬಂದಿ ನಾಗೇಶ್, ಪ್ರಶಾಂತ್, ಜಯರಾಜ್, ಸಿಂಧೂ, ರಾಜಣ್ಣ ಹಾಜರಿದ್ದರು.