ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚಾರಣೆ
ಕೋಲಾರ,ಸೆ.೧೯- ಮಾಲೂರು ತಾಲ್ಲೂಕು ಕಸಬಾ ಹೋಬಳಿಯ ಮಲಿಯಪ್ಪನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚಾರಣೆ ಸೆಪ್ಟಂಬರ್ – ೨೦೨೪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಾಲೂರು ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಸರಿತಾ ಬಾಬುಪಾವಲೆ, ಹುಂಗೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ರೂಪಸಿದ್ದರಾಜು, ಗ್ರಾಮದ ಹಿರಿಯರು ಹಾಗೂ ಸಮಾಜಸೇವಕ ರಮೇಶ್‌ಚಂದ್ರನ್ ವಿಶೇಷವಾಗಿ ಪೌಷ್ಟಿಕ ಜ್ಯೋತಿಯನ್ನು ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ವಿ.ಎಸ್.ರೂಪಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಎನ್.ಜಿ.ಓ ಸುಬ್ರಮಣಿ ಪೌಷ್ಟಿಕತೆಯ ವಿಷಯವಾಗಿ ಗ್ರಾಮಸ್ಥರಲಿ ಸಂವಾದವನ್ನು ನಡೆಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಗರ್ಭಿಣಿ ಹೆಣ್ಣು ಮಕ್ಕಳಿಗೆ ಸೀಮಂತ ಶಾಸ್ತ್ರದ ಕಾರ್ಯಕ್ರಮವನ್ನು ವಿಶೇಷವಾಗಿ ನಡೆಸಲಾಯಿತು. ಅಂಗನವಾಡಿ ಕಾರ್ಯಕರ್ತೆರು “ಪೌಷ್ಟಿಕತೆಯ ಬೆಳಕು ಹರಿಯಲಿ ಅಪೌಷ್ಟಿಕತೆಯ ಕತ್ತಲು ಸರಿಯಲಿ” ಎಂಬ ವಾಕ್ಯವನ್ನು ಘೋಷಿಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ರಾಘವೇಂದ್ರ, ಮುಖ್ಯ ಶಿಕ್ಷಕ ಸುರೇಶ್, ಸರ್ಕಾರಿ ಪ್ರಾಥಮಿಕ ಶಾಲೆಯೆ ಶಿಕ್ಷಕ ವೃಂದ, ದೊಡ್ಡಶಿವಾರ ವೃತದ ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾ.ಸಿ, ನಾಗವೇಣಿ, ಮಂಜುಳ, ದೀಪ, ಸರಿತಾ, ಸರಸಮ್ಮ, ಶೋಭಾ,ಕೆ ಸುಬ್ಬಮ್ಮ, ಪ್ರತಿಮಾ, ಮಹಾಲಕ್ಷ್ಮಿ, ರತ್ನಮ್ಮ, ಚೌಡಮ್ಮ, ಮಂಜುಳ, ಮತ್ತು ಸಹಾಯಕಿಯರು, ಆಶಾಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದು ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನಡೆಯಿತು.
ಕೇಂದ್ರದ ಕಾರ್ಯಕರ್ತೆಯಾದ ಸ್ಮಿತಾ.ಎಸ್.ಜೆ ಹಾಗೂ ಸಹಾಯಕಿ ನಿರ್ಮಲಮ್ಮ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸವಿತಾಪ್ರಾರ್ಥಿಸಿ, ಉಷಾ ಸ್ವಾಗತಿಸಿ, ಶೈಲಾ ವಂದನಾರ್ಪಣೆಯನ್ನು ಮಾಡಿದರು.