ಕರವೇ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಪೊಂಪನಗೌಡ.ಕೆ. ಆಯ್ಕೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.28: ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಘಟಕದವತಿಯಿಂದ ನಿನ್ನೆ ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕರವೇ ನೂತನ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನಾಗಿ ಪೊಂಪನಗೌಡ.ಕೆ. ಬಾಣಾಪುರ ಇವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಕರವೇ ರಾಜ್ಯ ಉಪಾಧ್ಯಕ್ಷರಾದ ಚಾನಾಳ್ ಶೇಖರ್ ಹಾಗೂ ಜಿಲ್ಲಾ ಅಧ್ಯಕ್ಷರಾದ ಡಿ.ಕಗ್ಗಲ್ ಶಂಕರ್ ಇವರ ನೇತೃತ್ವದಲ್ಲಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಾದ ಪುರುಷೋತ್ತಮ ಹಂದ್ಯಾಳ್, ಹಿರಿಯ ಮುಖಂಡಕರು, ಸಮಾಜ ಸೇವಕರು ಆದ ಕಲ್ಲುಕಂಬ ಪಂಪಾಪತಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಕೋಳೂರು ಜಿ.ತಿಪ್ಪಾರೆಡ್ಡಿ, ಚಂದ್ರಮೋಹನ್, ರವೀಂದ್ರ ಪೂಜಾರಿ, ಬಾವಿ ಶಿವಕುಮಾರ್, ಚಾಂದ್‍ಭಾಷ, ಆಟೋ ಅಂಜಿ ವಣೇನೂರು, ಗೋಟೂರು ರಾಮಕೃಷ್ಣ, ಮೋಕಾ ಲೇಪಾಕ್ಷಿ, ಕೆ.ಕೆ.ಹಾಳ್ ವಿನೋದ್, ಕರ್ಚೆಡು ಅಂಜಿ, ಗೋನಾಳು ರಘು, ಕುಮಾರ್, ಮಸ್ಕಿ ಮಹಾಂತೇಶ್, ಮಲ್ಲಿಕಾರ್ಜುನ ಚಾನಾಳ್ ಇನ್ನು ಮುಂತಾದವರು ಉಪಸ್ಥಿತರಿದ್ದರು.
One attachment • Scanned by Gmail