ಕೆಎಸ್‌ಆರ್‌ಟಿಸಿ ಚಾಲಕರಿಗೆ 8 ಗಂಟೆ ಕೆಲಸ
ಬೆಂಗಳೂರು, ಮಾ.೨೮- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಾಲಕರಿಗೆ ಸಿಹಿ ಸುದ್ದಿ ನೀಡಿದ್ದು, ಇಂದಿನಿಂದ ರಾತ್ರಿ ಮತ್ತು ದೂರದ ಪ್ರಯಾಣದಲ್ಲಿ ವಿಶ್ರಾಂತಿ ಕಡ್ಡಾಯ ಎಂದು ಹೇಳಿದೆ.
ಚಾಲಕರು ೮ ಗಂಟೆಗಿಂತ ಹೆಚ್ಚು ಡ್ಯೂಟಿ ಮಾಡಿಸುವಂತಿಲ್ಲ.ಇದರಿಂದ ಡಬಲ್ ಡ್ಯೂಟಿಯಿಂದ ಮುಕ್ತಿ ಸಿಗಲಿದೆ. ಜತೆಗೆ, ವಾರದಲ್ಲಿ ಕೆಲಸದ ಅವಧಿ ೪೮ ಗಂಟೆ ದಾಟುವಂತಿಲ್ಲ ಎಂದು ನಿಯಮ ಮಾಡಿದೆ.
ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಅಪಘಾತ ಪ್ರಕರಣ ಹೆಚ್ಚಳ ಹಿನ್ನೆಲೆ ಅಪಘಾತ ಕಾರಣಗಳನ್ನು ಪತ್ತೆಹಚ್ಚಲು ಸಮಿತಿ ರಚನೆ ಮಾಡಿದೆ. ಅಪಘಾತ ಹಿಂದಿನ ಕಾರಣಗಳನ್ನ ಪತ್ತೆ ಹಚ್ಚಿದ ಸಮಿತಿ. ಡಬಲ್ ಡ್ಯೂಟಿ ಮತ್ತು ನೈಟ್ ಶಿಫ್ಟ್ ವಿಶ್ರಾಂತಿಯನ್ನು ನೀಡದ ಕಾರಣ ನಿದ್ದೆಗೆಟ್ಟು ಬಸ್ ಚಲಾಯಿಸಲು ಸಾಧ್ಯವಾಗದೆ ಅಪಘಾತ ಹೆಚ್ಚುತ್ತಿದೆ ಎಂದು ನಿಗಮಕ್ಕೆ ಸಮಿತಿ ಹೇಳಿದೆ.
ಈ ಸಂಬಂಧ ಆದೇಶ ಹೊರಡಿಸಲಾಗಿದ್ದು ಕೆಎಸ್‌ಆರ್‌ಟಿಸಿ ಡ್ರೈವರ್ ಗಳಿಗೆ ವಿಶ್ರಾಂತಿ ಕಡ್ಡಾಯ. ಇಂದಿನಿಂದ ಡಬಲ್ ಡ್ಯೂಟಿ ಮಾಡಿಸುವಂತಿಲ್ಲ .೮ ಗಂಟೆಗಿಂತ ಹೆಚ್ಚು ಡ್ಯೂಟಿ ಮಾಡಿಸುವಂತಿಲ್ಲ ಎಂದು ತಿಳಿಸಲಾಗಿದೆ.
೮ ಗಂಟೆ ಮತ್ತು ರಾತ್ರಿ ವೇಳೆಯಲ್ಲಿ ಹೆಚ್ಚು ಡ್ಯೂಟಿ ಚಾಲಕರಿಗೆ ನಿದ್ದೆ ಮತ್ತು ವಿಶ್ರಾಂತಿ ಮಾಡಲು ನಾಲ್ಕೈದು ಗಂಟೆಗಳ ಅವಕಾಶ ದೊರೆಯಲಿದೆ.ಇದರಿಂದ ಕೆಎಸ್‌ಆರ್‌ಟಿಸಿ ಬಸ್ ಗಳ ಅಪಘಾತಗಳು ತಪ್ಪುತ್ತದೆ. ನೂರಾರು ಅಮಾಯಕರ ಪ್ರಾಣ ಉಳಿಸಲು ಸಹಾಯವಾಗಲಿದೆ.