ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.28:- 2024ರ ಲೋಕಸಭಾ ಚುನಾವಣೆಗೆ ಮಾ.28ರಂದು ಅಧಿಸೂಚನೆ ಹೊರಡಿಸಲಿದ್ದು, ಅದೇ ದಿನದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು, ಜಿ¯?ಲÁ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧÀವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.4 ನಾಮಪತ್ರ ಸಲ್ಲಿಕೆಗೆ ಕೊನೇ ದಿನ. ಏ.5ರಂದು ನಾಮಪತ್ರ ಪರಿಶೀಲನೆ ಮಾಡಲಾಗುತ್ತದೆ. ಏ.8ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಏ.26ರಂದು ಮತದಾನ, ಜೂ.4ರಂದು ಮತ ಎಣಿಕೆ, ಜೂ.6ಕ್ಕೆ ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಸಹಾಯಕ ಚುನಾವಣಾಧಿಕಾರಿಯಾಗಿ ಪಿ.ಶಿವರಾಜು ಕಾರ್ಯನಿರ್ವಹಿಸಲಿದ್ದಾರೆ. ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನೂತನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುತ್ತದೆ ಎಂದು ವಿವರಿಸಿದರು.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು 25 ಸಾವಿರ, ಎಸ್ಸಿ, ಎಸ್ಟಿ ಅಭ್ಯರ್ಥಿಗಳು 12500 ರೂ. ಠೇವಣಿ ಪಾವತಿಸಬೇಕು. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಮೂನೆ ಎ ಮತ್ತು ಬಿಯನ್ನು ಸಲ್ಲಿಸಬೇಕು. ಒಬ್ಬ ಅಭ್ಯರ್ಥಿ ಗರಿಷ್ಠ 4 ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ನಾಲ್ವರು, ಮೂರು ವಾಹನಗಳಿಗೆ ಅವಕಾಶ ನೀಡಲಾಗಿದೆ.
ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸಲು ಸೆಕ್ಟರ್ ಅಧಿಕಾರಿಗಳು 21, ಫ್ಲೈಯಿಂಗ್ ಸ್ಕಾ?ವಡ್ 53, ಸ್ಟಾ?ಯಟಿಕ್ 42, ವಿಡಿಯೋ ತಂಡ 23, ವಿಡಿಯೋ ವ್ಹೀವಿಂಗ್ ತಂಡ 12, ಅಕೌಂಟಿಕ್ 11, ಖರ್ಚುವೆರ್ಚ ವೀಕ್ಷಕರಾಗಿ 15 ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.
7.94 ಕೋಟಿ ರೂ. ಮೌಲ್ಯದ ಮದ್ಯ ವಶ: ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಮಾ.16ರಿಂದ 26ರವರೆಗೆ ಅಬಕಾರಿ ಇಲಾಖೆ, ಪೆÇಲೀಸ್ ಇಲಾಖೆ, ಫ್ಲೈಯಿಂಗ್ ಸ್ಕಾ?ವಡ್, ಎಸ್‍ಎಸ್ಟಿ ತಂಡಗಳು ಒಟ್ಟು 34,0485 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದ್ದು, ಇದರ ಅಂದಾಜು 7.94 ಕೋಟಿ ಮೌಲ್ಯವಾಗಿರುತ್ತದೆ ಎಂದರು.
23 ಲಕ್ಷ ನಗದು ವಶ: ಜಿಲ್ಲೆಯ ವಿವಿಧÀ ಚೆಕ್‍ಪೆÇೀಸ್ಟ್ಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 23,39,540 ರೂ ಹಣವನ್ನು ಮಾ.26ರವರೆಗೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 77,850 ರೂ. ಮೌಲ್ಯದ 3.29 ಕೆಜಿ ಡ್ರಗ್ಸ್, 85 ಸಾವಿರ ಮೌಲ್ಯದ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
2952 ಮತಗಟ್ಟೆ: ಜಿಲ್ಲೆಯಲ್ಲಿ 2925 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ ನಾಲ್ವರು ಅಧಿಕಾರಿಗಳ್ನು ನೇಮಕ ಮಾಡಲಾಗುವುದು. ಚುನಾವಣೆಗೆ 3784 ಕಂಟ್ರೋಲ್ ಯೂನಿಟ್, 3784 ಬ್ಯಾಲೆಟ್ ಯೂನಿಟ್ ಮತ್ತು 4077 ವಿವಿ ಪ್ಯಾಟ್ ಉಪಯೋಗಿಸಲಾಗುತ್ತಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ಸ್ಟ್ರಾಂಗ್ ರೂಂನಲ್ಲಿ ಪೆÇಲೀಸ್ ಭÀದ್ರತೆಯಲ್ಲಿ ಇಡಲಾಗಿದೆ. ಜತೆಗೆ ಜಿಲ್ಲೆಯಲ್ಲಿ ಸ್ವೀಪ್ ಸಮಿತಿ ಸಹಯೋಗದಲ್ಲಿ 97 ವಿಶೇಷ ಮತಗಟ್ಟೆ ಸ್ಥಾಪಿಸಲಾಗುತ್ತಿದೆ.
55 ಸಖಿ ಬೂತ್, 11 ಲೋಕೋಪಯೋಗಿ ಬೂತ್, ಯುವ ಮತದಾರರ ಬೂತ್ 9, ಥೀಂ ಬೆಸ್ ಬೂತ್ 09, 3 ಸಾಂಪ್ರದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
308 ದೂರು ಸ್ವೀಕಾರ: ಚುನಾವಣಾ ವೆಚ್ಚದ ಉಲ್ಲಂಘನೆ ಪರಿಶೀಲನೆಗೆ ಚುನಾವಣಾ ಆಯೋಗ ರೂಪಿಸಿರುವ ಸಿ-ವಿಜಿಲ್ ಆ?ಯಪ್‍ಗೆ ಈವರೆಗೆ 308 ದೂರುಗಳು ಬಂದಿದ್ದು, 253 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. 55 ದೂರುಗಳು ಪರಿಶೀಲನೆ ಹಂತದಲ್ಲಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ನಗರ ಪೆÇಲೀಸ್ ಆಯುಕ್ತ ಬಿ.ರಮೇಶ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಹೆಚ್ಚುವರಿ ಜಿ¯?ಲÁಧಿಕಾರಿ ಪಿ.ಶಿವರಾಜು ಇದ್ದರು.