ಚುಂಚನಕಟ್ಟೆಯ ಗ್ರಾಮದ 37ನೇ ವರ್ಷದ ವಾರ್ಷಿಕೋತ್ಸವ
ಸಂಜೆವಾಣಿ ವಾರ್ತೆ
ಸಾಲಿಗ್ರಾಮ.ಮಾ.28:- ಇತಿಹಾಸ ಪ್ರಸಿದ್ಧ ಚುಂಚನಕಟ್ಟೆಯಲ್ಲಿರುವ ಶ್ರೀ ಆದಿಶಕ್ತಿ ಬನ್ನ ಮಹಾ ಕಾಳಿಯಮ್ಮ ನವರ ದೇವಾಲಯದ 37 ನೇ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿಶೇಷ ಪೂಜಾ ಕೈ ಕಾರ್ಯಗಳು ಹಾಗೂ ಅಮ್ಮನವರ ಪಲ್ಲಕ್ಕಿ ಉತ್ಸವ ಜತೆಗೆ ಕೊಂಡೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಅಮ್ಮನವರ ಉತ್ಸವ ಮೂರ್ತಿಯನ್ನು ಮಂಗಳವಾರ ಸಂಜೆ ಪವಿತ್ರ ಕಾವೇರಿ ನದಿ ಜಲದಲ್ಲಿ ಜಳಕ ಮಾಡಿಸಿ ಶೃಂಗರಿಸಲಾಯಿತು, ಬಳಿಕ ಅಲಂಕರಿಸಲಾಗಿದ್ದ ಪಲ್ಲಕ್ಕಿಯಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆಸಲ್ಲಿಸಿದ ಬಳಿಕ ಕಲಶ ಹೊತ್ತ ಭಕ್ತ ಮಹಿಳೆಯರೊಂದಿಗೆ ಮೆರವಣಿಕಗೆಯ ಮೂಲಕ ತಡ ರಾತ್ರಿ ದೇಗುಲಕ್ಕೆ ಪಲ್ಲಕ್ಕಿಯನ್ನ ತರಲಾಯಿತು, ಬುಧವಾರ ಮುಂಜಾನೆ 5.30ರಿಂದ 7.30ರ ಮೀನ ಲಗ್ನದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಅರ್ಚಕ ಸತ್ಯವೆಲ್ ಕೊಂಡ ಹಾಯುವ ಮೂಲಕ ಚಾಲನೆ ನೀಡಿದರು. ಗ್ರಾಮಸ್ಥರು ಸರಿದಂತೆ ಜಿಲ್ಲೆಯ ನಾನಾ ಬಾಗಗಳಿಂದ ಬಂದಿದ್ದ ನೂರಾರು ಸಂಖ್ಯೆಯಲ್ಲಿನ ಭಕ್ತರು ಮುಂಜಾನೆಯಿಂದಲೇ ಮಡಿಯುಟ್ಟ ಮಹಿಳೆಯರು ಮಕ್ಕಳು ಸೇರಿದಂತೆ ಪುರುಷ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಕೊಂಡ ಹಾಯ್ದು ಭಕ್ತಿ ಬಾವ ಮೆರೆದರು, ದೇವಾಲಯದಲ್ಲಿ ವಿಶೇಷ ಪೂಜೆ ಹೋಮ ಹವನ ನಡೆಯಿತು ಜತೆಗೆ ನಿಂಬೆಹಣ್ಣಿನ ಹಾರ ಹಾಗೂ ವಿವಿಧ ಬಗೆಯ ಪುಷ್ಪಾಲಂಕಾರ ಮಾಡಿದ ದೇವಿಯನ್ನ ಭಕ್ತರು ಕಣ್ತುಂಬಿಕೊಂಡು ಸರತಿ ಸಾಲಿನಲ್ಲಿ ನಿಂತು ಅಮ್ಮನವರ ದರ್ಶನ ಪಡೆದು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ಭಕ್ತಿಯಿಂದ ಪ್ರಾರ್ಥಿಸಿದರು, ಭಕ್ತರ ಸಹಕಾರ ಮತ್ತು ದೇವಾಲಯದ ಸಮಿತಿಯಿಂದ ಬರುವ ಭಕ್ತರಿಗೆ ದೇವಾಲಯದಲ್ಲಿ ಅನ್ನಸಂತರ್ಪಣೆ ನಡೆಯಿತು, ದೇವಾಲಯದ ಪ್ರಧಾನ ಅರ್ಚಕ ವೆಂಕಟರಾಮು, ಹವ್ವಾನಿತ ಅರ್ಚಕರಾದ ಬಾಬು, ಸತ್ಯವೇಲ್, ಶ್ರೀನಿವಾಸ, ವೆಂಕಟೇಶ್, ಗ್ರಾಫೈಟ್ ಕೃಷ್ಣ, ಗೋಪಾಲ, ಸುಬ್ಬಣ್ಣ, ಜಯಕುಮಾರ್ , ಸೇರಿದಂತೆ ಗ್ರಾಮದ ಎಲ್ಲಾ ಸಮಾಜದ ಮುಖಂಡರು ಮತ್ತು ಭಕ್ತರು ಪಾಲ್ಗೊಂಡಿದ್ದರು.