ಮಯಂಕ್ ಮಹಾವೀರ ಸಂಘವಿಯ ಜೈನ್ ಸಂತ ದೀಕ್ಷೆ

ಸಂಜೆವಾಣಿ ವಾರ್ತೆ
ದಾವಣಗೆರೆ, ಮಾ.28-  ನಗರದ ವಕೀಲರೂ ಮತ್ತು ಹಲವಾರು ಜನಪರ ಸಂಘ ಸಂಸ್ಥೆಗಳ ಪ್ರಮುಖರಾದ ಸಂಘವಿ ಮಹಾವೀರ ಜೈನ್  ಸುಪುತ್ರನಾದ  ೧೭ ರ ಹರೆಯದ ಮಯಂಕ್ ಇವರು ಇದೇ ಏಪ್ರಿಲ್ ತಿಂಗಳ ೧ ನೇ ತಾರೀಖಿನ ಸೋಮವಾರದಂದು ಲೌಕಿಕ ಸುಖಮಯ ಬದುಕಿನಿಂದ ನಿರ್ಗಮಿಸಿ ಅತ್ಯಂತ ಕಠಿಣವಾದ ಜನ್ಮ ಜನ್ಮಾಂತರಗಳ ಹುಟ್ಟು ಸಾವುಗಳ ಜಂಜಾಟಗಳಿAದ ಮುಕ್ತಿ ಹೊಂದಬಹುದಾದAತಹ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ನಗರದ ರೇಣುಕಾ ಮಂದಿರದಲ್ಲಿ ನೂರಾರು ಜೈನ ಸಂತರು, ಆಚಾರ್ಯರ ಸಮ್ಮುಖದಲ್ಲಿ ನಡೆಯಲಿರುವ ಈ ಅತೀ ವಿಶಿಷ್ಟ ಕಾರ್ಯಕ್ರಮವು  ಇಂದು ಮಹೋತ್ಸವದ ರೂಪದಲ್ಲಿ ಪ್ರಾರಂಭವಾಗಲಿದ್ದು ಮಾ. ೨೯ ಮತ್ತು ೩೦ ನೇ ದಿನಗಳಂದು ಇದೇ ಸಂಬAಧವಾಗಿ ನಡೆಯಲಿರುವ ಹಲವಾರು ಧಾರ್ಮಿಕ ವಿಧಿವಿಧಾನಗಳ ನಂತರ  ಮಾ.೩೧ ರಂದು ಸಾಂಸಾರಿಕ ಜೀವನದ ಎಲ್ಲ ಸುಖ ಸಂಪತ್ತುಗಳ ತ್ಯಾಗದ ಪ್ರತೀಕವಾಗಿ ಮುಮುಕ್ಷು ಮಯಂಕ್ ನ ಸಾಂಸಾರಿಕ ಜೀವನದ ಕೊನೆಯ ಬೃಹತ್ ಮೆರವಣಿಗೆ ನಡೆಯಲಿದ್ದು ಚೌಕೀಪೇಟೆಯ ಶ್ರೀ ಸುಪಾರ್ಶ್ವನಾಥ ಜೈನ್ ದೇವಸ್ಥಾನದಿಂದ ಮುಂಜಾನೆ ೮ ಗಂಟೆಗೆ ಹೊರಟು ರೇಣುಕಾ ಮಂದಿರ ತಲುಪಲಿದೆ. ೩೧ ರ ಭಾನುವಾರದ ಸಂಜೆ ಈ ದೀಕ್ಷಾರ್ಥಿ ಮಯಂಕ್ ಇವರಿಗೆ ಈ ಲೌಕಿಕ ಜೀವನದಿಂದ ಆಧ್ಯಾತ್ಮಿಕ ಜೀವನದ ಪ್ರಮುಖ ಘಟ್ಟ ಏರಲು ಬೀಳ್ಕೊಡುಗೆ ಸಮಾರಂಭ ಇರುತ್ತದೆ. ಈ ಬೀಳ್ಕೊಡಿಗೆಯ ಮುಕ್ತಾಯದ ಕ್ಷಣದಿಂದ ತಂದೆ, ತಾಯಿ, ಬಂಧು, ಬಳಗ ಎಲ್ಲರಿಂದಲೂ ಲೌಕಿಕ ಸಂಬAಧಗಳನ್ನು ಕಳಚಿಕೊಂಡು ಅತ್ಯಂತ ಕಠಿಣವಾದ ಅಲೌಕಿಕ ಜೈನ ಸಂತ ಜೀವನದತ್ತ ಅತ್ಯಂತ ಸಂಭ್ರಮದಿAದ ಸಾಗುವ ಕ್ಷಣಗಳನ್ನು ನೋಡಲು ಕಣ್ಮುಗಳೆರಡು ಸಾಲದು.ಈ ದೀಕ್ಷಾ ಸಮಾರಂಭದ ಅಂತಿಮ, ಅತೀ ಪ್ರಮುಖ ಮತ್ತು ಅಲೌಕಿಕ ಘಟ್ಟವಾದ ದೀಕ್ಷಾ ಪ್ರಧಾನ ಮತ್ತು ಸ್ವೀಕಾರ ಸಮಾರಂಭವು ಏಪ್ರಿಲ್ ದಿನಾಂಕ ೧ನೇ ಸೋಮವಾರ ಮುಂಜಾನೆ ೮ ಗಂಟೆಗೆ ರೇಣುಕಾ ಮಂದಿರದಲ್ಲಿ ಪ್ರಾರಂಭ ಆಗುವುದು.ದೀಕ್ಷಾ ಗ್ರಹಣದ ವೇಳೆಗಾಗಲೇ ಶ್ವೇತ ವಸ್ತ್ರಗಳನ್ನು ಧರಿಸಿ ಕೇಶಾವಲೋಚನ ಮಾಡಿಸಿಕೊಂಡು ಗುರುಭಗವಂತರಿAದ ದೀಕ್ಷೆ ಪಡೆದಾಕ್ಷಣದಿಂದ,  ಕ್ಷಣಗಳ ಹಿಂದೆ ತಂದೆ ತಾಯಿಯಾದಿಯಾಗಿ ಯಾರು ಯಾರು ಪಾದ ಸ್ಪರ್ಷ ಮಾಡಿಸಿಕೊಂಡು ಆಶೀರ್ವಾದ ನೀಡುತ್ತಿದ್ದರೋ ಅವರೆಲ್ಲರೂ ಈ ನೂತನ ದೀಕ್ಷಿತ ಗುರುಗಳಿಂದ ಆಶಿರ್ವಾದ ಪಡೆಯಲು ಹಾತೊರೆಯುತ್ತಾರೆ.ಜೈನ ಸಂಪ್ರದಾಯದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ನಂತರ ನಮ್ಮ ಎಲ್ಲಾ ಗುರುಗಳು  ಎಲ್ಲಿಯೂ ಖಾಯಂ ಆಗಿ ನೆಲೆ ನಿಲ್ಲದೆ ಸತ್ಯ, ಅಹಿಂಸೆ ಮತ್ತು ಧರ್ಮ ಬೋಧನೆ ಮಾಡಲು ದೇಶಾದ್ಯಂತ ಊರಿಂದೂರಿಗೆ ಪಾದರಕ್ಷೆ ಕೂಡ ಧರಿಸದೆ ಕಾಲ್ನಡಿಗೆಯಲ್ಲಿ ಸಾಗುತ್ತಾ ಸಾಗುತ್ತಾ ತಮ್ಮ ಇಡೀ ಜೀವನವನ್ನು ಲೋಕಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿರುತ್ತಾರೆ.ಜನ್ಮ ಜನ್ಮಾಂತರಗಳ ಜನುಮ ಮರಣಗಳಿಂದ ಮುಕ್ತಿ ಪಡೆದು ಮೋಕ್ಷ ಪ್ರಾಪ್ತಿಗಾಗಿ ಸಾಂಸಾರಿಕ ಜೀವನದಿಂದ ಎತ್ತರಕ್ಕೇರಿ ಸನ್ಯಾಸ ದೀಕ್ಷೆಯನ್ನು ಬಯಸಿ ಈಗ ಸಂಯಮ ಪಥದಲ್ಲಿ ಮುನ್ನಡೆಯುತ್ತಿರುವ ನಗರದ ಜೈನ ಸಮಾಜದದೀಕ್ಷಾರ್ಥಿಯಾದ ಈ ಮಯಂಕ್ ಮಹಾವೀರ ಸಂಘವಿ ಇವರು ಜೈನ ಗುರು ಭಗವಂತ ಆಚಾರ್ಯರ, ಹಿರಿಯರ ದಿವ್ಯ ಸನ್ನಿಧಿ  ಮತ್ತು ಸಕಲ ಜೈನ ಸಮಾಜದ ಹಿರಿಯ ಕಿರಿಯರಾದಿಯಾಗಿ ಎಲ್ಲರ ಸಮ್ಮುಖದಲ್ಲಿ ಜೈನ ಸನ್ಯಾಸ ದೀಕ್ಷೆ ಪಡೆದು ಸಾಂಸಾರಿಕ ಶ್ರಾವಕರಿಂದ ವಿಶ್ವ ಪೂಜ್ಯ ಜಿನ ಸಂತರಾಗಿ ಪದೋನ್ನತಿ ಪಡೆಯಲಿದ್ದಾರೆ.ನಗರದಲ್ಲಿ ಮೊಟ್ಟ ಮೊದಲಿಗೆ ನೂರಾರು ಸಾಧು ಸಂತರ, ಆಚಾರ್ಯರ ದಿವ್ಯ ಉಪಸ್ಥಿತಿಯಲ್ಲಿ ಹಬ್ಬದೋಪಾದಿಯಲ್ಲಿ ನಡೆಯಲಿರುವ ಈ ಶುಭ ಸಮಾರಂಭದಲ್ಲಿ ಭಾಗವಹಿಸಿ ಕೃತಾರ್ಥರಾಗಲು ದೇಶಾದ್ಯಂತದಿಂದ ಜೈನ ಬಂಧುಗಳು ಆಗಮಿಸುತ್ತಿದ್ದಾರೆ.