ಸಿಯುಕೆಯಲ್ಲಿ ‘ಮಾನವ ಹಕ್ಕುಗಳ ವಿವಿಧ ಆಯಾಮಗಳು’ ಕುರಿತ ಎರಡು ದಿನಗಳ ತರಬೇತಿ
ಕಲಬುರಗಿ:ಮಾ.27:“ನಮ್ಮ ದೇಶ ವಿಜಯಶಾಲಿಯಾಗಲಿ. ಭಾರತ ವಿಶ್ವಕ್ಕೆ ಮಾದರಿಯಾಗಲಿ. ಪ್ರಪಂಚದ ಇತರ ಭಾಗಗಳಲ್ಲಿ ಮಾನವ ಹಕ್ಕುಗಳನ್ನು ಬೆಳಗಿಸುವ ಜ್ಯೋತಿಯನ್ನು ತಾವು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ಸಮರ್ಥರು ಎಂದು ನನಗೆ ಖಾತ್ರಿಯಿದೆ ”ಎಂದು ಕರ್ನಾಟಕ ಹೈಕೋರ್ಟ್‍ನ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.
ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ನವದೆಹಲಿ ಮತ್ತು ಸಿಯುಕೆಯ ಕಾನೂನು ಮತ್ತು ಶಿಕ್ಷಣ ವಿಭಾಗಗಳು, ಜಂಟಿಯಾಗಿ ಆಯೋಜಿಸಿದ ʼಮಾನವ ಹಕ್ಕುಗಳ ವಿವಿಧ ಆಯಾಮಗಳು’ ಕುರಿತು ಎರಡು ದಿನಗಳ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಅವರು “ಪ್ರತಿಯೊಬ್ಬ ವ್ಯಕ್ತಿಯೂ ಮಾನವ ಹಕ್ಕುಗಳ ರಕ್ಷಕನಾಗಿ ಕಾರ್ಯನಿರ್ವಹಿಸಬೇಕು ಮತ್ತು ಈ ತರಬೇತಿ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನವನ್ನು ನೀವೆಲ್ಲರೂ ಪಡೆದುಕೊಳ್ಳುತ್ತೀರಿ ಎಂದು ನಂಬಿದ್ದೇನೆ” ಎಂದು ಹೇಳಿದರು.
ಪೆÇ್ರ.ಜೆ.ಎಸ್. ಪಾಟೀಲ್, ಮಾಜಿ ಕುಲಪತಿಗಳು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಅಸ್ಸಾಂನ ಅವರು ಮಾತನಾಡಿ “ಕೃತಕ ಬುದ್ಧಿಮತ್ತೆ ಮಾನವ ಹಕ್ಕುಗಳಿಗೆ ಮಾತ್ರವಲ್ಲದೆ ಎಲ್ಲಾ ರೀತಿಯ ಹಕ್ಕುಗಳಿಗೆ ಮತ್ತು ಕಾನೂನುಗಳಿಗೆ ದೊಡ್ಡ ಸವಾಲಾಗಿದೆ. ಕೃತಕ ಬುದ್ಧಿಮತ್ತೆಯಿಂದಾಗಿ ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಮಾನವ ಹಕ್ಕುಗಳನ್ನು ಮರೆತರೆ ಮನುಷ್ಯನ ಉಳಿವು ಅಪಾಯದಲ್ಲಿದೆ. ನಮ್ಮ ಉಳಿವಿಗಾಗಿ ನಾವೇ ಸೃಷ್ಟಿಸಿದ ತಾಂತ್ರಿಕತೆಯೊಂದಿಗೆ ಹೋರಾಡಬೇಕಾಗಿದೆ. ಕೃತಕ ಬುದ್ಧಿಮತ್ತೆಯನ್ನು ನಮ್ಮ ಸೇವಕನಂತೆ ಬಳಸಿದರೆ ಅದು ತುಂಬಾ ಒಳ್ಳೆಯದು. ಆದರೆ ಅದೇ ನಮ್ಮ ಯಜಮಾನನಾಗಲು ಬಿಟ್ಟರೆ, ಅದು ನಮ್ಮನ್ನು ಕೊಲ್ಲುತ್ತದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ರೋಬೋಟ್ ಸೋಫಿಯಾಗೆ ಪೌರತ್ವ ನೀಡುವ ಬಗ್ಗೆ ಅವರು ಪ್ರಸ್ತಾಪಿಸಿದರು.
ಗೌರವಾನ್ವಿತ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಅವರು ಅಧ್ಯಕ್ಷೀಯ ಭಾಷಣ ಮಾಡಿ, ”ವಕೀಲರು ಮತ್ತು ಶಿಕ್ಷಕರು ಮಾನವ ಹಕ್ಕುಗಳ ರಕ್ಷಕರು. ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಹಳ್ಳಿಗಳಲ್ಲಿ ಜನರು ಹಳ್ಳಿಯನ್ನು ಇಂದು ಕುಟುಂಬವೆಂದು ಪರಿಗಣಿಸುತ್ತಾರೆ, ಆದರೆ ನಗರಗಳಲ್ಲಿ ಜನರು ನೆರೆಹೊರೆಯವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದು ಅತ್ಯಂತ ದುರದೃಷ್ಟಕರ. ನಾವು ನೈತಿಕ ಮೌಲ್ಯಗಳನ್ನು ಮತ್ತು ನೈತಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಅದರ ಮೂಲಕ ನಾವು ಮಾನವ ಹಕ್ಕುಗಳನ್ನು ಎತ್ತಿಹಿಡಿಯಬಹುದು” ಎಂದು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕಾನೂನು ನ್ಯಾಯಶಾಸ್ತ್ರ ಅಧ್ಯಯನ ನಿಕಾಯದ ಡೀನ್ ಡಾ.ಬಸವರಾಜ ಎಂ.ಕುಬಕಡ್ಡಿ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಶುಭ ಹಾರೈಸಿದರು. ಪೆÇ್ರ.ಬಸವರಾಜ ಪಿ.ಡೋಣೂರ, ಶಿಕ್ಷಣ ಮತ್ತು ತರಬೇತಿ ನಿಕಾಯದ ಡೀನ್ ಪೆÇ್ರ.ಜಿ.ಆರ್.ಅಂಗಡಿ, ಡಾ.ಅನಂತ್ ಡಿ.ಚಿಂಚುರೆ, ಡಾ.ರೇಣುಕಾ ಎಸ್.ಗುಬ್ಬೇವಾಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.