ಶ್ರೀಶೈಲಂ ಜಾತ್ರೆಗೆ ಹೆಚ್ಚುವರಿ ಬಸ್ ಕಾರ್ಯಾಚರಣೆ
ಕಲಬುರಗಿ:ಮಾ.27: ಯುಗಾದಿ ಹಬ್ಬದ ಪ್ರಯುಕ್ತ ಆಂಧ್ರ ಪ್ರದೇಶದ ಶ್ರೀಶೈಲಂನಲ್ಲಿ ಬರುವ ಏಪ್ರಿಲ್ 9 ರಂದು ನಡೆಯುವ ರಥೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಭಕ್ತಾದಿಗಳುÀ ಹೋಗಲು ಅನುಕೂಲವಾಗುವಂತೆ ವಿಶೇಷ (ಹೆಚ್ಚಿನ) ಬಸ್‍ಗಳ ವ್ಯವಸ್ಥೆ ಮಾಡಿದ್ದು, ಭಕ್ತರು ಇದರ ಪ್ರಯೋಜನೆ ಪಡೆಯಬೇಕೆಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಮನವಿ ಮಾಡಿದ್ದಾರೆ.
ವಿಭಾಗದ ವಿವಿಧ ಬಸ್ ನಿಲ್ದಾಣದಿಂದ ಬಸ್ ಹೊರಡಲಿದ್ದು, ಬಸ್ ನಿಲ್ದಾಣದಲ್ಲಿದ ಸಂಪರ್ಕ ಅಧಿಕಾರಿಗಳನ್ನು ಈ ಕುರಿತು ಸಂಪರ್ಕಿಸಬಹುದಾಗಿದೆ. ಇನ್ನು 40 ರಿಂದ 45 ಜನ ಪ್ರಯಾಣಿಕರಿದ್ದಲ್ಲಿ ಗ್ರಾಮಗಳಿಂದಲೆ ನೇರವಾಗಿ ಶ್ರೀಶೈಲಂಕ್ಕೆ ಸಾರಿಗೆ ಸೌಲಭ್ಯ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬಸ್ ನಿಲ್ದಾಣ ಮತ್ತು ಸಂಪರ್ಕ ಅಧಿಕಾರಿಗಳ ವಿವರ: ವಿಭಾಗೀಯ ಸಂಚಾರ ಅಧಿಕಾರಿ ರವೀಂದ್ರಕುಮಾರ ಡಿಗ್ಗಿ 7760984086, ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಮಲ್ಲಿಕಾರ್ಜುನ ಜೋಗೂರ-9980807959, ಅನಿಲ ಕುಮಾರ-8618637395, ಆಳಂದ ಬಸ್ ನಿಲ್ದಾಣದಲ್ಲಿ ಯೋಗಿನಾಥ ಸರಸಂಬಿ-7760992116, ಜೇವರ್ಗಿ ಬಸ್ ನಿಲ್ಧಾಣದಲ್ಲಿ ಜೆ.ಡಿ.ದೊಡ್ಡಮನಿ-7760992118 ಹಾಗೂ ಅಫಜಲಪೂರ ಬಸ್ ನಿಲ್ದಾಣದಲ್ಲಿ ಅಮೀನಪ್ಪ ಬೋವಿ-7760992121 ಇವರನ್ನು ಹೆಚ್ಚಿನ ಬಸ್ಸಿಗಾಗಿ ಸಂಪರ್ಕಿಸಬಹುದು