ಯುಗಾದಿ ಹಬ್ಬ ಹಾಗೂ ಸುಕ್ಷೇತ್ರ ಶ್ರೀಶೈಲಂ ಜಾತ್ರೆಗೆಹೋಗುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ಬಸ್‍ಗಳ ಕಾರ್ಯಾಚರಣೆ
ಕಲಬುರಗಿ:ಮಾ.27: ಯುಗಾದಿ ಹಬ್ಬ, ಏಪ್ರಿಲ್ 9 ರಂದು ನಡೆಯುವ ರಥೋತ್ಸವ ಮತ್ತು ಸುಕ್ಷೇತ್ರ ಶ್ರೀಶೈಲಂ ಜಾತ್ರೆಗೆ (ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ) ಹೋಗುವ ಭಕ್ತಾದಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-2 ವತಿಯಿಂದ 2024ರ ಏಪ್ರಿಲ್ 5 ರಿಂದ 10 ರವರೆಗೆ ಈ ಕೆಳಕಂಡ ಬಸ್ ನಿಲ್ದಾಣದಿಂದ /ಘಟಕಗಳಿಂದ ವಿಶೇಷ (ಹೆಚ್ಚಿನ) ಬಸ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಭಕ್ತಾದಿಗಳು ಹೆಚ್ಚುವರಿ ವಾಹನಕ್ಕಾಗಿ ನಿಗಮದ ವಿಭಾಗೀಯ ಸಂಚಾರ ಅಧಿಕಾರಿ-ರವೀಂದ್ರಕುಮಾರ ಡಿಗ್ಗಿ -7760984086, ಕಲಬುರಗಿ ಕೇಂದ್ರ ಬಸ್ ನಿಲ್ದಾಣ ಅಧಿಕಾರಿ-ಮಲ್ಲಿಕಾರ್ಜುನ ಜೋಗೂರ-9980807959, ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಅನಿಲಕುಮಾರ-8618637395, ಆಳಂದ ಬಸ್ ನಿಲ್ದಾಣ-ಯೋಗಿನಾಥ ಸರಸಂಬಿ-7760992116, ಜೇವರ್ಗಿ ಬಸ್ ನಿಲ್ದಾಣ-ಜೆ.ಡಿ. ದೊಡಮನಿ-7760992118 ಹಾಗೂ ಅಫಜಲಪೂರ ಬಸ್ ನಿಲ್ದಾಣ-ಅಮೀನಪ್ಪ ಬೋವಿ-7760992121 ಇವರನ್ನು ಸಂಪರ್ಕಿಸಬಹುದಾಗಿದೆ.