ರಾಷ್ಟ್ರೀಯ ತಾಂತ್ರಿಕ ಸಮ್ಮೇಳನ:ಪಿಡಿಎ ಕಾಲೇಜಿಗೆ ತೃತೀಯ ಪ್ರಶಸ್ತಿ
ಕಲಬುರಗಿ,ಮಾ.27: ಸೋಲಾಪುರದ ವಾಲ್ ಚಂದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ವಿಟ್ಟ್‍ಕಾರ್ 24 ರಾಷ್ಟ್ರೀಯ ಮಟ್ಟದ ತಾಂತ್ರಿಕ ಸಮ್ಮೇಳನದಲ್ಲಿ ಇನ್ನೋವೆರ್ಸ್ ಐಡಿಯಾ ಪ್ರಸಂಟೇಶನ್ ಸ್ಪರ್ಧೆಯಲ್ಲಿ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ತಂತ್ರಜ್ಞಾನದ ವಿಭಾಗದ ವಿದ್ಯಾರ್ಥಿಗಳಾದ ರೇಣುಕಾ ಹಾಗರಗಿ ಮತ್ತು ಸ್ನೇಹ ಜ್ಯೋತಿ ಹಿರೇಮಠ ರವರು ತೃತೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ದೇಶದ ವಿವಿಧೆಡೆಯಿಂದ ಅನೇಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳ ಈ ಸಾಧನೆಗೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ್ ಬಿಲಗುಂದಿ ಮತ್ತು ಆಡಳಿತ ಮಂಡಳಿಯ ಸದಸ್ಯರು ,ಕಾಲೇಜಿನ ಪ್ರಾಚಾರ್ಯ ಡಾ. ಶಶಿಕಾಂತ್ ಆರ್ ಮೀಸೆ, ಉಪ ಪ್ರಾಚಾರ್ಯ ಡಾ ಶ್ರೀದೇವಿ ಸೋಮ, ಡಾ.ಎಸ್.ಆರ್. ಹೊಟ್ಟಿ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಉದಯ್ ಎಸ್ ಬಳಗಾರ್ ಪ್ರಾಧ್ಯಾಪಕರಾದ ಡಾ. ವಿಶ್ವನಾಥ್ ಭೋರಕ್ಪಲ್ಲಿ, ಡಾ. ಭಾರತಿ ಹರಸೂರ್, ಪೆÇ್ರ. ಅಶೋಕ್ ಪಾಟೀಲ್ ,ಪೆÇ್ರ. ಮುಕುಂದ ಹರವಾಳ್ಕರ್, ಡಾ. ಬಾಬುರಾವ್ ಸೇರಿಕಾರ್ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.