ಡಾ. ಆರ್.ಸಿ. ಮುದ್ದೇಬಿಹಾಳರಿಗೆ ಮರಣೋತ್ತರ ಜ್ಷಾನಪೀಠ ಪ್ರಶಸ್ತಿ ನೀಡಲು ಆಗ್ರಹ
ವಿಜಯಪುರ, ಮಾ.27:ಜಿಲ್ಲೆಯ ಹಿರಿಯ ಸಾಹಿತಿ ಕನ್ನಡ ಸಾಹಿತ್ಯ ಸಾರಸತ್ವ ಲೋಕಕ್ಕೆ ನೂರಕ್ಕೂ ಹೆಚ್ಚು ಪುಸ್ತಕ ಬರೆದ ಸಾಹಿತ್ಯಶತ ಪುಸ್ತಕ ಬ್ರಹ್ಮ ದಿವಂಗತ ಆರ್.ಚಿ ಮುದ್ದೇಬಿಹಾಳ ಅವರ ಹೆಸರಲ್ಲಿ ಸಾಹಿತಿಗಳ ಸ್ಮಾರಕವನ್ನು ನಿರ್ಮಿಸಬೇಕಾದದ್ದು ಅಗತ್ಯವಾಗಿದ್ದು, ಆದ್ದರಿಂದ ಸರಕಾರ ಶೀಘ್ರವೇ ಸಾಹಿತಿಗಳ ಸ್ಮಾರಕವನ್ನು ನಿರ್ಮಿಸಬೇಕೆಂದು ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮo ಅವರು ಆಗ್ರಹಿಸಿದ್ದಾರೆ.
ಭÀೃಂಗಿಮಠ ಫೌಂಡೇಶನ ಕಾನೂನು ಕ್ರಿಯಾತ್ಮಕ ವೇದಿಕೆಯು ಹಮ್ಮಿಕೊಂಡಿದ್ದ ಪುಣ್ಯಸ್ಮರಣೆಯಲ್ಲಿ ಮಾತನಾಡಿದ ಅವರು, ಹಸಿರು ಹಾಡು, ಗೊಲ್ಲತಿ, ಗೀv Àಗೋವಿಂದ, ಜಾನಪದ ಪಶುವೈದ್ಯ. ಮಾತೆಯ ಮದ್ದು, ಗಿಡವು ಬಡವರ ವೈದ್ಯ, ಧಿವ್ಯ ವೌಷದಿ ಟಂಕಣಕಾರ, ಆಕಳು ಮತು ್ತಆರೋಗ್ಯ, ಸಂಜೀವಿನಿ, ಜಾನಪದ ಸಂಜೀವಿನಿ ಇವೇ ಮುಂತಾದ ನೂರಕ್ಕೆ ಹೆಚ್ಚು ಕನ್ನಡ ಕೃತಿಗಳನ್ನು ರಚಿಸಿ ಸಮಾಜಕ್ಕೆ ನೀಡಿದ ಅವರ ಕೊಡುಗೆಯನ್ನು ಯಾರೂ ಕೂಡ ಮರೆಯಬಾರದು. ವಿಶೇಷವಾಗಿ ಸಾಹಿತ್ಯಿಕ ಸಂಘಟನೆಗಳು ಅವರ ಕುರಿತು ಅಧ್ಯಯನ ನಡೆಸಿ ಅವರು ಪಟ್ಟ ಶ್ರಮವನ್ನು ಪ್ರತಿಯೊಬ್ಬರ ಮನೆಯ ಬಾಗಿಲಿಗೆ ತಲುಪಿಸಬೇಕಾದದು ್ದಅಗತ್ಯವಾಗಿದೆ ಎಂದು ಭೃಂಗಿಮo ಅವರುಹೇಳಿದ್ದಾರೆ.
ಸಿಂಧೂರ ಲಕ್ಷ್ಮಣ ಮತ್ತು ಬಸವ ಬೆಳಗು ಎಂಬ ಎರಡು ಮಹಾಕಾವ್ಯಗಳನ್ನು ಕನ್ನಡದಲ್ಲಿ ಬರೆದು ಅವುಗಳನ್ನು ಆನೆಯ ಮೇಲೆ ಮೇರೆಸಿ ಕನ್ನಡದ ಕೀರ್ತಿ ಮತ್ತು ಘನತೆಯನ್ನು ಹೆಚ್ಚಿಸಿದ ಡಾ.ಆರ್ ಸಿ ಮುದ್ದೇಬಿಹಾಳರ ಸೇವೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಗುರುತಿಸಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡದೇ ಇರುª Àಇತಿಹಾಸ ನೋಡಿದರೆ ನೋವಾಗುತ್ತದೆ. ಇಪ್ಪತ್ತೊಂದು ಸಾವಿರ ತ್ರಿಪದಿಗಳನ್ನು ಸಹ ಬರೆದ ಇವರ ಸಾಧನೆ ಕನ್ನಡ ಲೋಕದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದಾಗಿದೆ ಎಂದರು.
ಜಿ.ಬಿ. ರೇವಣಸಿದ್ದಯ್ಯನವರು ಮಾತನಾಡಿ, ಪ್ರಾಮಾಣಿಕ ಮತ್ತು ಪರಿಶ್ರಮದಿಂದ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಮುದ್ದೇಬಿಹಾಳ ಅವರ ಸೇವೆ, ಕನ್ನಡ ಭಾಷಾ ಸಾಹಿತ್ಯ, ಆಯುರ್ವೇದ ವೈದ್ಯಕೀಯ ಸಾಹಿತ್ಯ, ವಚನ ಸಾಹಿತ್ಯ ಹೀಗೆ ಸಾಹಿತ್ಯz Àಎಲ್ಲ ಕಾಲಘಟ್ಟಗಳ ಪರಂಪರೆಯ ಆಶಯಗಳನ್ನು ಒಂದೆಡೆಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಯಾವುದೇ ಪ್ರಚಾರz Àಗೋಜಿಗೆ ಹೋಗದೆ ಸಾಹಿತ್ಯ ಸರಸ್ವತಿಯ ಸೇವೆಗೈದ ಇವರ ಸೇವೆಯನ್ನು ಪರಿಗಣಿಸಿ ಮರಣೋತ್ತರ ್ರಜ್ಷಾನಪೀಠ ಪ್ರಶಸ್ತಿಯನ್ನು ಕೊಟು ್ಟಗೌರವಿಸಬೇಕೆಂದು ಒತ್ತಾಯಿಸಿದರು.
ಶಾಂತೇಶ ಜಾಲಗೇರಿಅವರು ಮಾತನಾಡಿ, ಡಾ. ಆರ್.ಸಿ. ಮುದ್ದೇಬಿಹಾಳ ಅವರು ರಚಿಸಿರುವ ಗ್ರಂಥಗಳು ಪ್ರತಿಯೊಬ್ಬರಿಗೂ ನಿತ್ಯವು ಅಗತ್ಯವಾದ ಅಮೂಲ್ಯವಾದ ಜೀವ ಸಂಜೀವಿನಿಯಾಗಿವೆ, ಡಾ ಮುದ್ದೇಬಿಹಾಳರ ಸಮಗ್ರ ಕೃತಿಗಳನ್ನು ಸರಕಾರ ಮಾಲಿಕೆಗಳಲ್ಲಿ ಹೊರ ತರಬೇಕು, ಆ ಮೂಲಕ ಸಮಾಜಕ್ಕೆ ಅಗತ್ಯವಾದ ಡಾ ಆರ್.ಸಿ.ಎಂ ಅವರ ಜ್ಞಾನ ಬೆಳಗಿಸಬೇಕೆಂದು ತಿಳಿಸಿದರು.
ಡಾ. ಸಂಜೀವ ಮುದ್ದೇಬಿಹಾಳ ಅವರು ಮಾತನಾಡಿ, ತಮ್ಮ ತಂದೆಯವರು ಕುಟಂಬಕ್ಕಿಂತಲೂ ಸಾಹಿತ್ಯಕ್ಕಾಗಿಯೇ ತಮ್ಮ ಉಸಿರಿರುವವರೆಗು ಶ್ರಮಿಸಿ ಯಾವ ರಾಜಕೀಯ ಬಾಲಂಗೋಚಿಯಾಗದೆ ನೇರ ಮತ್ತು ನಿಷ್ಠುರತೆಯ ವ್ಯಕ್ತಿತ್ವದಿಂದ ಬದುಕಿ ಬಾಳಿ ಸಾಧಿಸಿದ ಸಾಧಕರಾಗಿದ್ದಾರೆ ಎಂದರು.
ಕಾರ್ಯಕ್ರಮz Àಅಧ್ಯಕ್ಷತೆಯನ್ನು ವಹಿಸಿದ ಡಾ. ಉದಯ ದೌಲತರಾವÀ ಮುದ್ದೇಬಿಹಾಳ ಮಾತನಾಡಿದÀರು.
ಈ ಸಂದರ್ಭದಲ್ಲಿ ಸಾಗರ ಮುದ್ದೇಬಿಹಾಳ, ತ್ರಿವೇಣಿ ಭಜಂತ್ರಿ, ಸುಮಿತ್ ಮುದ್ದೇಬಿಹಾಳ, ಸವಿತಾ ಮುದ್ದೇಬಿಹಾಳ ಮುಂತಾದವರು ಪಾಲ್ಗೊಂಡಿದ್ದರು.