ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ವಿಕಲಾಂಗ ವಿದ್ಯಾರ್ಥಿ ಪರದಾಟ
ವಿಜಯಪುರ,ಮಾ.27:ವಿಕಲಾಂಗ ಪರೀಕ್ಷಾರ್ಥಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಹಾಯಕನನ್ನು ನೀಡದೆ ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಆಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ ಆರೋಪ ಕೇಳಿ ಬಂದಿದೆ.
ವಿಕಲಾಂಗ ವಿದ್ಯಾರ್ಥಿ ಪರೀಕ್ಷೆ ಬರೆಯಲು ಸಹಾಯಕ ವಿದ್ಯಾರ್ಥಿ ನೀಡದೇ ನಿರ್ಲಕ್ಷ್ಯ ವಹಿಸಿದ್ದರಿಂದ
ವಿಕಲಾಂಗ ಮೊಹಮ್ಮದ್ ಅಝ್ಲಾನ್ ನಾಯ್ಕೋಡಿ ಎಂಬ ವಿದ್ಯಾರ್ಥಿ ಪರೀಕ್ಷೆ ಬರೆಯಲು ಪರದಾಡಿದ್ದಾರೆ.
ಪರೀಕ್ಷೆ ಬರೆಯಲು ಬಾರದಷ್ಟು ಕೈಗಳ ಶಕ್ತಿ ಕಳೆದುಕೊಂಡಿರುವ ವಿದ್ಯಾರ್ಥಿ ಮೊಹಮ್ಮದ್
ಸಹಾಯಕ ವಿದ್ಯಾರ್ಥಿ ನೀಡದ ಕಾರಣ ಪರೀಕ್ಷೆ ಬರೆಯಲು ಆಗದೇ ವಿಕಲಾಂಗ ಪರೀಕ್ಷಾರ್ಥಿ ಸುಮ್ಮನೆ ಕುಳಿತುಕೊಂಡಿದ್ದ.
ತಮ್ಮ ಮಗನಿಗೆ ಪರೀಕ್ಷೆ ಬರೆಯಲು ಆಗಲ್ಲ. ಸಹಾಯ ವಿದ್ಯಾರ್ಥಿ ನೀಡಿಲ್ಲ ಎಂದು ವಿದ್ಯಾರ್ಥಿ ತಂದೆ ಪರೀಕ್ಷಾ ಕೇಂದ್ರದ ಹೊರಗಡೆ ಕಣ್ಣೀರು ಇಟ್ಟ ದೃಶ್ಯ ಕರಳು ಹಿಂಡುವಂತಿತ್ತು.
ವಿಜಯಪುರ ನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಸಹಾಯಕ ವಿದ್ಯಾರ್ಥಿ ನೀಡಲು ಕಳೆದ ಫೆಬ್ರವರಿಯಲ್ಲೇ ವಿದ್ಯಾರ್ಥಿಯ ಶಾಲೆಯವರು ಮನವಿ ಮಾಡಿದ್ದಾರೆ
ವಿಕಲಾಂಗ ವಿದ್ಯಾರ್ಥಿ ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಯವರು ಡಿಡಿಪಿಐ ಕಚೇರಿಗೆ ಮನವಿ ಮಾಡಿದ್ದರು.
ಫೆಬ್ರವರಿಯಲ್ಲಿ ಮನವಿ ನೀಡಿದ್ದರೂ ಸಹಾಯಕ ವಿದ್ಯಾರ್ಥಿಗೆ ಅವಕಾಶ ನೀಡದೇ ನಿರ್ಲಕ್ಷ್ಯ ಮಾಡಲಾಗಿತ್ತು.
ನಂತರ ಎಚ್ಚತ್ತುಕೊಂಡ ಶಿಕ್ಷಣಾಧಿಕಾರಿಗಳು ಒಂದು ಗಂಟೆ ತಡವಾಗಿ ಸಹಾಯಕ ವಿದ್ಯಾರ್ಥಿಗೆ ಅವಕಾಶ ನೀಡಿದ್ದಾರೆ.
ಮುಂದಿನ ಪರೀಕ್ಷೆಗಳಿಗೆ ಈ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಪೆÇೀಷಕರು ಮನವಿ ಮಾಡಿಕೊಂಡರು.