ಯುನಿಟಿ ಪಬ್ಲಿಕ್ ಸ್ಕೂಲ್‍ನಲ್ಲಿ 6ನೇ ವಾರ್ಷಿಕೋತ್ಸವ
ಬೀದರ :ಮಾ.27:ತಾಲೂಕಿನ ಚಿಕಪೇಟ ಗ್ರಾಮದಲ್ಲಿ ಜಿ.ಬಿ.ಆರ್.ಡಿ. ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಯುನಿಟಿ ಪಬ್ಲಿಕ್ ಸ್ಕೂಲ್‍ನಲ್ಲಿ 6ನೇ ವಾರ್ಷಿಕೋತ್ಸವ ಮತ್ತು ಸಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಎಸ್.ಎಚ್. ಸಿಂಧು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಾಲೆಯು ಒಳ್ಳೆಯ ರೀತಿಯಿಂದ ಶಿಕ್ಷಣ, ಮೂಲ ಸೌಕರ್ಯಗಳನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ಮಕ್ಕಳು ಮತ್ತು ಪಾಲಕರು ಪಡೆದುಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಣಿಕರಾವ ಪವಾರ್ ಸಿ.ಆರ್.ಸಿ. ಗಾದಗಿ ಅವರು ಮಾತನಾಡುತ್ತಾ, ಶಾಲೆಯು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಕಳೆದ 5 ವರ್ಷಗಳಿಂದ ಕಾರ್ಯಕ್ರಮಕ್ಕೆ ನಾನು ಅತಿಥಿಯಾಗಿ ಆಗಮಿಸುತ್ತಿದ್ದು, ಕಾರ್ಯಕ್ರಮ ಮತ್ತು ಶಾಲೆಯನ್ನು ಬಹಳ ಸಮೀಪದಿಂದ ಶಾಲೆಯ ಬಗ್ಗೆ ತಿಳಿದುಕೊಂಡಿದ್ದು, ಶಾಲೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು ಹಾಗೂ ಮರಖಲ್ ಗ್ರಾಮ ಪಂಚಾಯತ್ ಪಿ.ಡಿ.ಓ. ಆದ ಶ್ರೀ ಉಮೇಶ ಜಾಬಾ ಅವರು ಮಾತನಾಡಿದರು ಮತ್ತು ಶಾಲೆಯಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕಗಳು ನಡೆದವು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಪತರಾವ ದೀನೆ, ಬಾಬುರಾವ ಪಾಸ್ವಾನ್, ಖಲೀಲ್ ಮಿಯಾ ಗುತ್ತೆದಾರರ ಸದಸ್ಯರು ಗ್ರಾಮ ಪಂಚಾಯತ್ ಮರಖಲ್, ಮೋಹನ ಸಾಗರ, ಸದಸ್ಯರು ಗ್ರಾಮ ಪಂಚಾಯತ್ ಖಾಶೆಂಪೂರ (ಪಿ), ಲಕ್ಷ್ಮಣ ಕಾಂಬಳೆ, ತುಳಸಿರಾಮ ದೊಡ್ಡಿ, ಶಿವಕುಮರ ನೀಲಿಕಟ್ಟಿ, ಕಲ್ಯಾಣರಾವ ಗೂನಳ್ಳಿಕರ್, ರಾಜಕುಮಾರ ಜ್ಯೋತಿ, ಶ್ರೀಕಾಂತ ಕುಂದೆ, ಪ್ರದೀಪ ಸಾಗರ, ಸುರೇಶ ಮಾಳಗೆ, ಗುಣವಂತ ಶಿಂಧೆ, ಶಿವು ಜೀರ್ಗೆ, ಮುಲ್ತಾನಿ ದೊಡ್ಡಿ, ಶಾಲೆಯ ಮುಖ್ಯ ಗುರುಗಳಾದ ಶಿವಾಜಿ ಸಾಖರೆ, ಸಿಬ್ಬಂದಿಗಳಾದ ಅನುರಾಧಾ ವಾಘಮಾರೆ, ಅರ್ಚನಾ, ಸುಧಾ, ಆಶಾ ಕಾಂಬಳೆ, ಆಶಾ ವಿಜಯಕುಮಾರ, ಸುಷ್ಮಾ, ವಿಜಯಕುಮಾರ ಹಾಗೂ ಮಕ್ಕಳ ಪಾಲಕರು, ಪೆÇೀಷಕರು ಹೆಚ್ಚನ ಸಂಖ್ಯೆಯಲ್ಲಿ ಆಗಮಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಬಿ.ಇ.ಆರ್.ಡಿ. ಸಂಸ್ಥೆಯ ಅಧ್ಯಕ್ಷರಾದ ಅವಿನಾಶ ದೀನೆಯವರು ಸಂಸ್ಥೆಯ ಇಲ್ಲಿಯವರೆಗೆ ನಡೆದುಕೊಂಡು ಬಂದ ದಾರಿಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಸ್ವಾಗತವನ್ನು ಅವಿನಾಶ ದೀನೆಯವರು ಮಾಡಿದರು, ವಂದನಾರ್ಪಣೆಯನ್ನು ಶಾಲೆಯ ಮುಖ್ಯ ಗುರುಗಳಾದ ಶಿವಾಜಿ ಸಾಖರೆಯವರು ಮಾಡಿದರು ಹಾಗೂ ಅರ್ಚನಾ ಮೇಡಂ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.