ಸಹಕಾರಿ ತಿದ್ದುಪಡಿ ಕಾಯ್ದೆ ವಾಪಸ್ಸು ಪಡೆಯದಿದ್ದರೆ ಏ.1ರಿಂದ ರಾಜ್ಯಾದ್ಯಂತ ಹೋರಾಟ: ಜ್ಯಾಂತಿಕರ್
ಬೀದರ್:ಮಾ.27: ಈ ತಿಂಗಳ 16ರಂದು ರಾಜ್ಯ ಸರ್ಕಾರ ಸಹಕಾರ ತಿದ್ದುಪಡಿ ಕಾಯ್ದೆಗೆ ಜಾರಿಗೆ ತರುವ ಮೂಲಕ ಸಹಕಾರಿಗಳ ಪಾಲಿಗೆ ಮರಣ ಶಾಸನವಾಗಿದ್ದು, ಅದನ್ನು ಹಿಂಪಡೆಯುವಂತೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಜಿಲ್ಲಾ ಅಧ್ಯಕ್ಷ ಗುರುನಾಥ ಜ್ಯಾಂತಿಕರ್ ಹೇಳಿದರು.
ಮಂಗಳವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಈ ತಿಂಗಳ 16ರಂದು ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ : ಸಿಒ38 ಸಿಎಲ್ ಎಮ್ 2024 ಬೆಂಗಳೂರು ಆದೇಶ ಹೊರಡಿಸಿ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮದ 1997ರ ಕಲಂ 70ರ ಅಡಿಯಲ್ಲಿ ಏಪ್ರಿಲ್ 2024 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿ ಕೇಲವು ನಿರ್ದೇಶನಗಳನ್ನು ನೀಡಿದೆ. ಈ ನಿರ್ದೇಶನ ಸಹಕಾರಿಗಳಿಗೆ ತುಳಿಯುವ ದೊಡ್ಡ ಹುನ್ನಾರ ಮಾಡಿದೆ ಎಂದು ಆರೋಪಿಸಿದರು.
ಸೌಹಾರ್ದ ಸಹಕಾರಿ ಅಧಿನಿಯಮ 1997 ರ ಆದೇಶ ಹೊರಡಿಸಿ ಚಳುವಳಿಯ ಬೆಳವಣಿಗೆಗೆ ಮುಗುದಾರ ಹಾಕಲು ಹೊರಟಿದೆ ಎಂದ ಅವರು, ಠೇವಣಿಯ ಮೇಲೆ ಬಡ್ಡಿದರ ಭಾರತೀಯ ಸೈಟ್ ಬ್ಯಾಂಕ್ ನೀಡುವ ಬಡ್ಡಿ ದರಕ್ಕಿಂತ ಶೆ. 2 ನ್ನು ಮಿರತಕ್ಕದ್ದಲ್ಲ, ಸಾಲದ ಮೇಲು ನಿಬಂಧನೆಗಳನ್ನು ಹಾಕಿರುತ್ತಾರೆ, ಸಹಕಾರಿಗಳ ಹೆಚ್ಚುವರಿ ದ್ರವ್ಯ ಸಂಪನ್ಮೂಲವನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್ ಗಳಲ್ಲಿಯ ಹೂಡಿಕೆ ಮಾಡತಕ್ಕದ್ದು, ಪ್ರತಿ ಮೂರು ತಿಂಗಳಿಗೆ ಒಮ್ಮೆ ಸಂಘದ ಠೇವಣಿ ಮತ್ತು ಸಾಲದ ಬಡ್ಡಿದರಗಳನ್ನು ಪರಿಷ್ಕರಿಸಿ ಈ ಕುರಿತು ಸಹಕಾರ ಸಂಘಗಳ ಉಪ ನಿಬಂಧಕರಿಗೆ ಕಡ್ಡಾಯವಾಗಿ ವರದಿ ಸಲ್ಲಿಸತ್ಯದ್ದು, ಉಪವಿಭಾಗೀಯ ಮಟ್ಟದಲ್ಲಿ ಸಹಕಾರ ಸಂಘಗಳ ನಿಬಂಧಕರು, ಜಿಲ್ಲಾ ಮಟ್ಟದಲ್ಲಿ ಉಪ ನಿಬಂಧಕರು ಪ್ರಾಂತೀಯ ಮಟ್ಟದಲ್ಲಿ ಜಂಟಿ ನಿಬಂಧಕರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕವಾಗಿ ಸಹಕಾರ ಸಂಘಗಳ ಸಭೆ ಜರುಗಿಸಿ ಈ ಆದೇಶದಲ್ಲಿ ನೀಡಿರುವ ನಿರ್ದೇಶನದಂತೆ ಬಡ್ಡಿದರಗಳನ್ನು ಪರಿಷ್ಕರಿಸಿ ನಿಗದಿ ಪಡಿಸುತ್ತಿರುವ ಕುರಿತು ಪರಾಮರ್ಶಿಸುವುದು ಹಾಗೂ ಉಲ್ಲಂಘನೆ ಮಾಡುವ ಸಹಕಾರ ಸಂಘಗಳ ಆಡಳಿತ ಮಂಡಳಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ವಿರುದ್ಧ ಕ್ರಮ ಜರುಗಿಸುವುದು, ಹೀಗೆ ಇವರು ಹೊರಡಿಸಿರುವ ಆದೇಶದಲ್ಲಿ ಸಹಕಾರ ಚಳುವಳಿಗಳ ಬೆಳವಣಿಗೆಗೆ ಮಾರಕ ಅಂಶಗಳಾಗಿವೆ. ಇವುಗಳನ್ನು ಈ ಕೂಡಲೆ ಕೈ ಬಿಡಬೇಕು ಎಂದು ಹೇಳಿದರು.
ಸೌಹಾರ್ದ ಸಹಕಾರಿ ಕಾಯ್ದೆ ಇಡಿ ದೇಶದಲ್ಲಿಯ ಮಾದರಿ ಕಾಯ್ದೆಯಾಗಿದೆ. ಇದರ ನಂತರ 2008 ರಲ್ಲಿ ವೈದ್ಯನಾಥನ್ ರವರ ವರದಿಯಂತೆ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು ಸ್ವಾಯತ್ ಸ್ವಯಂ ಆಡಳಿತ ಸ್ವಯಂ ನಿಯಂತ್ರಣದ ಆಧಾರದ ಮೇಲೆ ಬೆಳೆಯಬೇಕು ಎಂದು ಹೇಳಿರುತ್ತದೆ. 2013 ರಲ್ಲಿ 97ರ ಸಂವಿಧಾನ ತಿದ್ದುಪಡಿ ಮಾಡಿ ಇಲ್ಲಿಯ ಸಹಕಾರ ಸಂಘಗಳು ಉತ್ತಮವಾಗಿ ಬೆಳೆಯಬೇಕಾದರೆ ಸ್ವಯಂ ಆಡಳಿತ ಸ್ವಯಂ ನಿಯಂತ್ರಣ ಹಾಗೂ ಸ್ನಾಯತ ಸಂಸ್ಥೆಯಾಗಿ ಬೆಳೆಯಬೇಕು ಎಂದು ತಿಳಿಸಿರುತ್ತಾರೆ ಆದರೆ ರಾಜ್ಯ ಸರ್ಕಾರದ ಈ ದ್ವಂದ್ವ ನೀತಿ ರಾಜ್ಯದ ಸುಮಾರು 6250 ಸೌಹಾರ್ದ ಸಹಕಾರಿ ಸಂಘಗಳನ್ನು ಮುಗಿಸಲು ಹೊರಟಂತಿದೆ ಎಂದು ಆಪಾದಿಸಿದರು.
ಸಹಕಾರ ಸಂಘಗಳ ಕಾಯ್ದೆ 1959 ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ತಿನ ಸಹಕಾರ ಸಂಘಗಳ ಕುರಿತು ಮತ್ತು ಸೌಹಾರ್ದ ಪತ್ತಿನ ಸಂಗಳ ಕುರಿತು ಸರ್ಕಾರವು ಹೂರಡಿಸಿರುವ ಆದೇಶವನ್ನು ಕೂಡಲೆ ಹಿಂಪಡೆಯಬೇಕೆಂದು ಇಲ್ಲವಾದಲ್ಲಿ ಏಪ್ರಿಲ್ 1ರಿಂದ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡುವುದಾಗಿ ಜ್ಯಾಂತಿಕರ್ ಎಚ್ಚರಿಸಿದರು.
ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಸಂಜುಕುಮಾರ ಪಾಟೀಲ, ನಿರ್ದೇಶಕರಾದ ರಾಜಶೇಖರ ನಾಗಮೂರ್ತಿ, ಜಗನ್ನಾಥ ಕರಂಜಿ, ಸಂಜಯ ಕ್ಯಾಸಾ, ಬಸವರಾಜ ಹುಡಗೆ, ಶಿವಬಸಪ್ಪ ಚನ್ನಮಲ್ಲೆ, ಶ್ರೀಕಾಂತ ಸ್ವಾಮಿ ಸೋಲಪುರ, ಸೌಹಾರ್ದ ಸಹಕಾರಿ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಅಮೃತ ಹೊಸಮನಿ, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವೀರಶೆಟ್ಟಿ ಕಾಮಣ್ಣ ಸೇರಿದಂತೆ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.