ಶಿಕ್ಷಣದಿಂದ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ದಿ ಸಾಧ್ಯ : ದತ್ತು ಬುಕ್ಕೆಗಾರ್
ಬೀದರ್ ಮಾ 27: ಶಿಕ್ಷಣದಿಂದ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ದಿ ಸಾಧ್ಯ. ಇಂದಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಅದನ್ನು ನಿವಾರಿಸುವ ಹೊಣೆಗಾರಿಕೆ ಪಾಲಕರ ಹಾಗೂ ಶಿಕ್ಷಕರ ಮೇಲಿದೆ ಎಂದು ಕಾಡವಾದ ಗ್ರಾಮದ ಮುಖಂಡರಾದ ದತ್ತು ಬುಕ್ಕೆಗಾರ್ ನುಡಿದರು.
ಅವರು ಸೋಮವಾರ ಸಂಜೆ ಬೀದರ ತಾಲೂಕಿನ ಕಾಡವಾದ್ ಗ್ರಾಮದ ಮಾರುತಿ ಮಾಸ್ಟರ್ ಶಿಕ್ಷಣ ಸಂಸ್ಥೆ ಸಂಚಾಲಿತ ವಿದ್ಯಾ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ತಾಯಿ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಂಸ್ಕಾರವಿಲ್ಲದ ಶಿಕ್ಷಣ ಮಕ್ಕಳ ಭವಿಷ್ಯ ರೂಪಿಸಲಾಗದು. ಈ ಸತ್ಯ ಪ್ರತಿಯೊಬ್ಬ ಪಾಲಕರು ಅರಿತುಕೊಳ್ಳಬೇಕೆಂದರು.
ಕಾಂಗ್ರೇಸ್ ಮುಖಂಡರಾದ ಲಾಲಪ್ಪಾ ಬರೂರ್ ಅವರು ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಮತ್ತು ವಿಶೇಷವಾಗಿ ಹೆಣ್ಣು ಮಕ್ಕಳನ್ನು ಅಡಿಗೆ ಮನೆಗೆ ಸೀಮಿತಗೋಳಿಸಬೇಡಿ, ಏಕೆಂದರೆ ಅವರಲ್ಲಿಯೂ ಕೂಡಾ ಅಪಾರವಾದ ಪ್ರತಿಭೆ ಇರುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಆದರಿಂದ ಅವರಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಮುಂದಾಗಬೇಕಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಮಾಸ್ಟರ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಾರುತಿ ಮಾಸ್ಟರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ್ ಪಾಟೀಲ್, ಅಜೀಜ್ ಪಟೇಲ್, ಬಕ್ಕಪ್ಪಾ ಹೈಬತಿ, ಮಲ್ಲಿಕಾರ್ಜುನ್ ಬರೂರ್, ಮಾಣಿಕಪ್ಪಾ ಕಾಡವಾದ್, ಸೂರ್ಯಕಾಂತ ಚೆಟನಳ್ಳಿ, ಶಿವಕುಮಾರ ಸುಲೆಗಾಂವ್, ಸಂಗೀತಾ ಜಾದವ್, ಇತರರು ವೇದಿಕೆ ಮೇಲೆ ಇದ್ದರು. ವಿದ್ಯಾಸಾಗರ ಧಡ್ಡೆ ನೀರೂಪಿಸಿದರು, ಶ್ರೀಮತಿ ರೇಣುಕಾ ಖಿಂಡಿ ಸ್ವಾಗತಿಸಿದರೇ ಶ್ರೀಮತಿ ಶ್ರೀದೇವಿ ಸ್ವಾಮಿ ವಂದಿಸಿದರು.
ಕೊನೆಯಲ್ಲಿ ಶಾಲಾ ಮಕ್ಕಳಿಂದ ಅದ್ದೂರಿಯಾಗಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಗ್ರಾಮದ ಗಣ್ಯರು, ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.