ಶ್ರೀಶೈಲ ಪಾದಯಾತ್ರಿಗಳಿಗೆ ಅಸ್ಸಫಾ ಟ್ರಸ್ಟ್ ಹಾಗೂ ಗ್ಯಾಟ್ ಫ್ಯಾಮಿಲಿ ವತಿಯಿಂದ ಹಣ್ಣು ಹಂಪಲು ಸೇವೆ
ಕೊಲ್ಹಾರ: ಮಾ.27:ಆಂಧ್ರಪ್ರದೇಶದ ಪುಣ್ಯಕ್ಷೇತ್ರ ಶ್ರೀಶೈಲಂಗೆ ಪಟ್ಟಣದ ಭಕ್ತರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆ ಮೂಲಕ ಆರಂಭಿಸಿದರು.
ಪಾದಯಾತ್ರೆಗೂ ಮುನ್ನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ,ಯಾತ್ರೆ ಆರಂಭಿಸಿದರು.ಕಂಬಿಗಳೊಂದಿಗೆ ಶ್ರೀಶೈಲಕ್ಕೆ ಹೊರಡುವ ಪಾದಯಾತ್ರೆ ಭಕ್ತರನ್ನು ಬೀಳ್ಕೊಡುವ ಸಮಾರಂಭದಲ್ಲಿ ಇಡೀ ಪಟ್ಟಣದ ಜನರು ಪಾಲ್ಗೊಂಡು ಹಬ್ಬದ ರೀತಿ ಆಚರಿಸಿದರು.
ಈ ವೇಳೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಪಾದಯಾತ್ರಿಗಳು ಸಾಗುವಾಗ ಭಕ್ತರಿಗೆ ಸತತ 9ವರ್ಷದಿಂದ ಶ್ರೀಶೈಲ ಪಾದಯಾತ್ರಿಗಳಿಗೆ ಅಸ್ಸಫಾ ಟ್ರಸ್ಟ್ ಕೊಲ್ಹಾರ ಹಾಗೂ ಗ್ಯಾಟ್ ಫ್ಯಾಮಿಲಿ ಇವರ ವತಿಯಿಂದ ನೀರು, ಲಸ್ಸಿ ಮತ್ತು ಬಾಳೆಹಣ್ಣು ವಿತರಿಸುವ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆ ಮೆರೆದರು.
ಅಸ್ಸಫಾ ಟ್ರಸ್ಟಿನ ಅಧ್ಯಕ್ಷ ಚಾಂದ್ ಗಿರಗಾಂವಿ ಮಾತನಾಡಿದ ಅವರು ಪಾದಯಾತ್ರೆ ಮಾಡುವ ಭಕ್ತರಿಗೆ ಸತತ 9ವರ್ಷದಿಂದ ಈ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ ಮುಂದೂ ಕೂಡ ಆ ದೇವರು ನಮಗೆ ಇದೇ ತರ ಶಕ್ತಿ ನೀಡಲಿ ನಾವು ಪ್ರತಿ ವರ್ಷ ಸೇವೆ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಅಸ್ಸಫಾ ಟ್ರಸ್ಟಿನ ಪದಾಧಿಕಾರಿಗಳು ಹಾಗೂ ಗುರುಹಿರಿಯರು ಮಹಿಳೆಯರು ಮಕ್ಕಳು ಸಹಿತ ಅನೇಕರು ಉಪಸ್ಥಿತರಿದ್ದರು.