ಮತದಾನ ಜಾಗೃತಿ ಅಭಿಯಾನಕ್ಕೆ: ತಹಸಿಲ್ದಾರ್ ಶಿವಾನಂದ್ ಮೇತ್ರೆ ಚಾಲನೆ
ಸೇಡಂ,ಮಾ,27: ಪಟ್ಟಣದಲ್ಲಿರುವ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಿಂದ ಬಸ್ಟಾಂಡ್ ವರೆಗೆ ಸ್ವೀಪ್ ಸಮಿತಿ ಸೇಡಂ ವತಿಯಿಂದ ಆಯೋಜಿಸಲಾಗಿರುವ ಮತದಾರರ ಜಾಗೃತಿ ಅಭಿಯಾನಕ್ಕೆ ತಹಸಿಲ್ದಾರ್ ಶಿವಾನಂದ್ ಮೇತ್ರೆ ಚಾಲನೆ ನೀಡಿ ಮಾತನಾಡಿದರು.ಈ ವೇಳೆಯಲ್ಲಿ ತಾಪಂ ಇಓ, ಸಮಾಜ ಕಲ್ಯಾಣ ಇಲಾಖೆ, ಹಾಗೂ ಬಿ.ಸಿ.ಎಮ್ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಸತಿ ನಿಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.