ಬಿರು ಬಿಸಿಲಿನ ಮದ್ಯೆ ಪರೀಕ್ಷೆ ಬರೆದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು
ಕೆಂಭಾವಿ:ಮಾ.27: ಎಸ್.ಎಸ್.ಎಲ್.ಸಿ ಪರೀಕ್ಷೆಯ ಮೊದಲನೆ ದಿನವಾದ ಸೋಮವಾರ ಪಟ್ಟಣದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಪ್ರಥಮ (ಕನ್ನಡ ಉರ್ದು ಹಾಗೂ ಆಂಗ್ಲ) ಭಾಷೆಯ ಪರೀಕ್ಷೆಗೆ ಆಗಮಿಸಿದ ನೂರಾರು ವಿದ್ಯಾರ್ಥಿಗಳು ಬಿರುಬಿಸಿಲ ನಡುವೆಯೂ ಪರೀಕ್ಷೆ ಎದುರಿಸಿದರು. ಪಟ್ಟಣ ಸೇರಿದಂತೆ ವಲಯದ ನಗನೂರ, ಏವೂರ, ಮಲ್ಲಾ, ಯಾಳಗಿ ಹಾಗೂ ಚಿಂಚೋಳಿ ಗ್ರಾಮದ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 900 ಕ್ಕೂ ಹೆಚ್ಚು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪರೀಕ್ಷೆ ಬರೆದರು. ಕೆಲವು ಪರೀಕ್ಷಾ ಕೇಂದ್ರದ ಹೊರಗೆ ಪರೀಕ್ಷೆ ಬರೆಯುವ ಹಿಂಬಾಲಕರಾಗಿ ಬಂದಿದ್ದ ಅನೇಕರು ಪರೀಕ್ಷಾ ನಕಲು ವಿತರಣೆಯಲ್ಲಿ ತೊಡಗಿದ್ದ ದೃಶ್ಯವೂ ಕಂಡು ಬಂದಿತು. ನಕಲು ನೀಡುತ್ತಿದ್ದ ವೇಳೆಯಲ್ಲಿ ಪೆÇಲೀಸರು ಬಂದು ನಕಲು ನೀಡುತ್ತಿದ್ದವರನ್ನು ಚದುರಿಸಿದ ನಂತರ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟು ಪರೀಕ್ಷೆ ಬರೆದರು.
ಟ್ರಾಫಿಕ್ ಜಾಮ್-ಪಟ್ಟಣದ ಅತೀ ಹೆಚ್ಚು ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರವಾದ ಸರ್ಕಾರಿ ಬಾಲಕರ ಪೌಢ ಶಾಲೆಯ ಮುಂಭಾಗದಲ್ಲಿ ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ವಾಹನಗಳ ದಟ್ಟನೆಯಿಂದ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಪಟ್ಟಣದ ಪ್ರಮುಖ ರಸ್ತೆಯಾದ ಈ ಶಾಲೆಯ ರಸ್ತೆ ಮಧ್ಯೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಮತ್ತು ಅವರ ಹಿಂಬಾಲಕರ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ನಿಂತಿದ್ದರಿಂದ ಜನಸಂದಣಿ ಉಂಟಾಯಿತು. ನಂತರ ಪೆÇಲೀಸ್ ಸಿಬ್ಬಂದಿ ಆಗಿಮಿಸಿ ಅನಾವಶ್ಯಕವಾಗಿ ಕಿರಿಕಿರಿ ಉಂಟುಮಾಡುತ್ತಿದ್ದ ಜನರನ್ನು ಚದುರಿಸಿ ಟ್ರಾಫಿಕ್ ಸಮಸ್ಯೆ ನಿವಾರಿಸಿದರು.