ಶ್ರೀಮಂತರಾವ ಇಂಚುರೇಗೆ ರಾಜ್ಯ ಪ್ರಶಸ್ತಿ ಪುರಸ್ಕಾರ
ಚಿಟಗುಪ್ಪ:ಮಾ.27: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಎರಡನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಬೀದರ್ ಜಿಲ್ಲೆಯ ಚಿಟಗುಪ್ಪ ಪಟ್ಟಣದ ನಿವಾಸಿ ಹಿರಿಯ ಪತ್ರಕರ್ತ ಶ್ರೀಮಂತರಾವ ಇಂಚುರೆ ಅವರನ್ನು ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆಯನ್ನು ಗುರುತಿಸಿ ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ ಬೆಂಗಳೂರಿನ ಎಂ.ವಿ.ಎಂ ಕನ್ವೇನೇಶನ್ ಫಂಕ್ಷನ್ ಹಾಲ್ ನೆಲಮಂಗಲದಲ್ಲಿ ಮಾರ್ಚ್ 24ರಂದು ಪ್ರಶಸ್ತಿ ನೀಡಿ ಗೌರವಿಸಲಾಯಿತ್ತು.