ಸಜೀಶ ಲಂಬುನೋರಗೆ ರಾಜ್ಯ ಪ್ರಶಸ್ತಿ
ಚಿಟಗುಪ್ಪ:ಮಾ.27: ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ವತಿಯಿಂದ ಮಾರ್ಚ 24 ರಂದು ಬೆಂಗಳೂರಿನ ನೆಲಮಂಗಲದ ಎಂವಿಎಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪತ್ರಕರ್ತರ ಎರಡನೇ ಸಮ್ಮೇಳನದಲ್ಲಿ ಬೀದರ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಭಾರತ ವೈಭವ ಪತ್ರಿಕೆಯ ವರದಿಗಾರರು ಹಾಗು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಚಿಟಗುಪ್ಪ ತಾಲೂಕು ಅಧ್ಯಕ್ಷರಾದ ಸಜೀಶ ಲಂಬುನೋರ ಅವರನ್ನು ಪತ್ರಿಕೋದ್ಯಮದಲ್ಲಿ ಸಲ್ಲಿಸುತ್ತಿರುವ ಗಣನೀಯ ಸೇವೆಯನ್ನು ಗುರುತಿಸಿ ಅವರಿಗೆ ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದರು.