ಯಡ್ರಾಮಿ ಪಟ್ಟಣದಲ್ಲಿ ಸಂಭ್ರಮದಿಂದ ಹೋಳಿಹಬ್ಬ ಆಚರಣೆ
ಯಡ್ರಾಮಿ: ಮಾ.27:ಬಣ್ಣಗಳ ಹಬ್ಬವಾದ ಹೋಳಿ ಹಬ್ಬವನ್ನು ಮಂಗಳವಾರ ದಂದು ಪಟ್ಟಣದಲ್ಲಿ ಯುವಕರು ನಾಗರಿಕರು ಮಕ್ಕಳು ಬಣ್ಣ ಆಡುವ ಮೂಲಕ ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸಲಾಯಿತು.
ಈಗಿನ ಯುವ ಸಮಾಜಕ್ಕೆ ಹೋಳಿಯೊಂದು ಮೋಜು ಮಸ್ತಿಯ ಹಬ್ಬವಾಗಿದ್ದು, ಒಬ್ಬರಿಗೊಬ್ಬರು ಬಣ್ಣ ಹಚ್ಚಿಕೊಂಡು ಸಂತೋಷದಿಂದ ಕುಣಿದು ಕುಪ್ಪಳಿಸಿದರು.ಹಿರಿಯರು ನಡೆಸಿಕೊಂಡ ಬಂದಂತೆ ಕೆಲವು ಆಚರಣೆಗಳು ನಡೆದುಕೊಂಡು ಬಂದಿದ್ದು.
ಸಂಪ್ರದಾಯಕ್ಕೆ ಈಗಿನ ಯುವ ಜನತೆಗೆ ಪ್ರಾಮುಖ್ಯತೆಯನ್ನ ನೀಡಿರುವುದು ಗಮನಾರ್ಹ
ಒಟ್ಟಾರೆ ಪ್ರತಿವರ್ಷದ ಹೋಳಿ ಹಬ್ಬದ ಸಂಭ್ರಮ ಈ ವರ್ಷವೂ ಜೋರಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದೇ ಸುಖಾಂತ್ಯದ ರೀತಿಯಲ್ಲಿ ಹಬ್ಬಕ್ಕೆ ತೆರೆಬಿದ್ದಿದೆ.