ಪೋಷಕರು-ಶಿಕ್ಷಕರೇ ನಿಜವಾದ ದೇವತೆಗಳು: ಮರಕಲೆ
ಬೀದರ್: ಮಾ.27:ಪೋಷಕರು ಹಾಗೂ ಶಿಕ್ಷಕರೇ ವಿದ್ಯಾರ್ಥಿಗಳ ಪಾಲಿನ ದೇವತೆಗಳು ಎಂದು ಕಿತ್ತೂರು ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಕು.ಮಂಗಲಾ ಮರಕಲೆ ಹೇಳಿದರು.
ಇತ್ತಿಚೀಗೆ ತಾಲೂಕಿನ ಮರಖಲ ಗ್ರಾಮದ ಅಮುಲ್ಯ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಲ್ಲಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಮುಖ್ಯವಾಗಿದ್ದು, ಪಠ್ಯೇತರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿದಲ್ಲಿ ಬುದ್ದಿಶಕ್ತಿ ಹಾಗೂ ಜ್ಞಾನಮಟ್ಟ ಸುಧಾರಣೆಯಾಗಲಿದೆ ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ಅಲ್ಲಿಯ ಶಿಕ್ಷಣ ಮುಗಿದ ಬಳಿಕ ಬೀಳ್ಕೊಡುವುದು ಸಹಜ. ಆದರೆ, ಭವಿಷ್ಯದಲ್ಲಿ ತಮ್ಮ ಜೀವನ ಮಟ್ಟ ಎತ್ತರಕ್ಕೆ ತಲುಪಿದಾಗ ತಾನು ಕಲಿತ ಶಾಲೆಗೆ ವಿಧೆಯತೆ ತೋರಿ ಅಭಿವೃದ್ಧಿಪಡಿಸಬೇಕೆಂದು ಹೇಳಿದರು.
ಶಾಲೆಯ ಅಧ್ಯಕ್ಷೆ ನಾಗಮ್ಮ ಎರ್ನಳ್ಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಸರ್ವಾಂಗಿಣ ಪ್ರಗತಿಗಾಗಿ ಶಿಕ್ಷಣವೇ ಭದ್ರ ಬುನಾದಿ. ಹಾಗಾಗಿ ವಿದ್ಯಾವಂತರಾಗಿ ಮನೆ ಹಾಗೂ ಶಾಲೆಗೆ ಕೀರ್ತಿ ತರುವಂತವರಾಗಿ ಎಂದು ಹರಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯವಂತಿ, ಶಿಕ್ಷಕರಾದ ಸಪ್ನಾ, ಶಿಲ್ಪಾ ಆಲೂರೆ, ಪಲ್ಲವಿ ಕೌಠಾ, ಸರೋಜನಿ ಸೇರಿದಂತೆ ಶಾಲೆಯ ಇತರೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.
ಇದೇ ವೇಳೆ 7 ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು. ಇತ್ತಿಚೀಗೆ ಕರ್ನಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಖೆಯಿಂದ ಈ ವರ್ಷದ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷೆ ಕು.ಮಂಗಲಾ ಮರಕಲೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.