ಮೂವರು ಬೈಕ್ ಕಳ್ಳರ ಬಂಧನ: ಎಸ್ಪಿ ಋಷಿಕೇಶ ಸೋನಾವಣೆ
ವಿಜಯಪುರ,ಮಾ.27:ಮೂವರು ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.
ವಿಜಯಪುರ ನಗರದಲ್ಲಿ ಬೈಕ್ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೆÇಲೀಸ್ ವಿಶೇಷ ತನಿಖಾತಂಡ ರಚಿಸಲಾಗಿತ್ತು. ಈ ತನಿಖಾ ತಂಡ ವೈಜ್ಞಾನಿಕ ರೀತಿಯಲ್ಲಿ ಆರೋಪಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಮುಧೋಳ ತಾಲೂಕು ಚಿಂಚಗಂಡಿ ಗ್ರಾಮದ ಹಾಲಿ ವಸ್ತಿ ವಿಜಯಪುರದ ಯೋಗಾಪುರ ಕಾಲನಿಯ ಸುನೀಲ ಗಡ್ಡಿ, ವಿಜಯಪುರ ಜೆಎಂ ರಸ್ತೆಯ ನಿವಾಸಿಗಳಾದ ಮೊಶೀನ ಕಲಾದಗಿ ಹಾಗೂ ಸದ್ದಾಂ ಮುತವಲ್ಲ ಬಂಧಿತ ಆರೋಪಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮೂವರು ಮೋಟಾರ ಸೈಕಲ್ ಕಳ್ಳತನ ಮಾಡುವ ಆರೋಪಿತರಿಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಬೈಕ್, ಮೊಬೈಲ್ ಕಳ್ಳತನ ದಂಧೆಯಲ್ಲಿ ತೊಡಗಿರುವುದಾಗಿ ತಿಳಿಸಿದ್ದಾರೆ ಎಂದರು.
ಮೂವರು ಆರೋಪಿತರು ಸೇರಿಕೊಂಡು ವಿಜಯಪುರ ಜಿಲ್ಲೆ, ಬಾಗಲಕೋಟೆ ಜಿಲ್ಲೆಯ ಮುಧೋಳ ಹಾಗೂ ಜಮಖಂಡಿಯಲ್ಲಿ ಕಳ್ಳತನ ಮಾಡಿದ್ದಾಗಿಯೂ ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ 15,50,000 ಲಕ್ಷ ಮೌಲ್ಯದ 26 ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಜಯಪುರ ನಗರದಲ್ಲಿ ಕಳೆದಿದ್ದ 2,90.000 ಮೌಲ್ಯದ 29 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.